/newsfirstlive-kannada/media/post_attachments/wp-content/uploads/2025/02/JAPAN_Delta_Flight.jpg)
ಕಳೆದ ಒಂದು ವಾರದಿಂದ ವಿಮಾನ ಅಪಘಾತಗಳು ಹೆಚ್ಚು ಆಗುತ್ತಿವೆ. ಮೊನ್ನೆ ಮೊನ್ನೆಯಷ್ಟೇ ಅಮೆರಿಕದಲ್ಲಿ ಭೀಕರವಾಗಿ ಎರಡು ವಿಮಾನಗಳು ಅಪಘಾತಕ್ಕೆ ಒಳಗಾಗಿದ್ದವು. ಇದರ ಬೆನ್ನಲ್ಲೇ ಜಪಾನ್ನಲ್ಲಿಯೂ ಎರಡು ವಿಮಾನಗಳ ನಡುವೆ ಡಿಕ್ಕಿಯಾಗಿದ್ದು 142 ಪ್ರಯಾಣಿಕರು ಫುಲ್ ಸೇಫ್ ಆಗಿದ್ದಾರೆ.
ಜಪಾನ್ನ ಸೀಟಾಕ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಡೆಲ್ಟಾ ವಿಮಾನದ-1921 ಬಾಲಕ್ಕೆ, ಜಪಾನ್ ಏರ್ಲೈನ್ಸ್ ವಿಮಾನದ ಒಂದು ಭಾಗದ ರೆಕ್ಕೆಯು ಡಿಕ್ಕಿಯಾಗಿದೆ. ಈ ಡಿಕ್ಕಿ ಸಂಭವಿಸಿದ ವೇಳೆ ಅದೃಷ್ಟವಶಾತ್ ಯಾವುದೇ ಬೆಂಕಿ ಕಾಣಿಸಿಕೊಂಡಿಲ್ಲ. ವಿಮಾನಕ್ಕೂ ಯಾವುದೇ ಹಾನಿಯಾಗಿಲ್ಲ. ಅಲ್ಲದೇ ಒಳಗಿದ್ದ ಪ್ರಯಾಣಿಕರಿಗೂ ಯಾವುದೇ ಗಾಯಗಳು ಆಗಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕೋಟೆನಾಡಿನ ಹನಿಟ್ರ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.. ಹಣ, ಚಿನ್ನ ಕಳೆದುಕೊಂಡವರು ಯಾರು?
ಡೆಲ್ಟಾ ವಿಮಾನವು 142 ಪ್ರಯಾಣಿಕರೊಂದಿಗೆ ಜಪಾನ್ನ ಸೀಟಾಕ್ ವಿಮಾನ ನಿಲ್ದಾಣದಿಂದ ಮೆಕ್ಸಿಕೋದ ಪೋರ್ಟೊ ವಲ್ಲರ್ಟಾಗೆ ಹಾರಲು ಸಿದ್ಧವಾಗುತ್ತಿತ್ತು. ಆದರೆ ಇದೇ ವೇಳೆಯೇ ಜಪಾನ್ ಏರ್ಲೈನ್ಸ್ ವಿಮಾನ ಡಿಕ್ಕಿಯಾಗಿದೆ. ಸದ್ಯ ವಿಮಾನದಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳು ಆಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಸೀಟಾಕ್ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಘಟನೆಯಿಂದ ಪ್ರಯಾಣ ಮಾಡಲು ತಡವಾಗಿದ್ದಕ್ಕೆ ಎಲ್ಲ ಪ್ರಯಾಣಿಕರ ಬಳಿ ಡೆಲ್ಟಾ ವಿಮಾನದ ಸಿಬ್ಬಂದಿ ಕ್ಷಮೆಯಾಚಿಸಿದ್ದಾರೆ. ಈ ಸಂಬಂಧ ಸೂಕ್ತ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಸೀಟಾಕ್ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ