newsfirstkannada.com

ಹಕ್ಕಿ ಜ್ವರ.. ಎಚ್ಚರ! ಸೋಂಕು ಹರಡದಂತೆ 14,000 ಪಕ್ಷಿಗಳನ್ನು ಕೊಂದ ಜಪಾನ್​

Share :

Published February 13, 2024 at 10:43am

    ಜಪಾನ್​ನಲ್ಲಿ ಕಾಣಿಸಿಕೊಂಡ ಏವಿಯನ್​ ಫ್ಲೂ

    ಸೋಂಕು ಹರಡದಂತೆ ಅಲ್ಲಿನ ಸರ್ಕಾರದಿಂದ ಕಟ್ಟೆಚ್ಚರ

    ಕಳೆದ ವರ್ಷ 17.71 ಮಿಲಿಯನ್​​ ಪಕ್ಷಿಗಳನ್ನು ಕೊಲ್ಲಲಾಗಿತ್ತು

ಜಪಾನ್: ಕೊರೊನಾ ಬಳಿಕ ಏವಿಯನ್​ ಫ್ಲೂ ಕಾಣಿಸಿಕೊಂಡಿದೆ. ಇದೇ ಕಾರಣಕ್ಕೆ ಜಪಾನ್​ನಲ್ಲಿ ಸುಮಾರು 14 ಸಾವಿರ ಪಕ್ಷಿಗಳನ್ನು ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.

ಜಪಾನ್​ ಕಾಗೋಶಿಮಾದ ಮಿನಾಮಿಸಾತ್ಸುಮಾ ನಗರದ ಕೋಳಿ ಫಾರ್ಮ್​ನಲ್ಲಿ ಏವಿಯನ್​ ಇನ್​ಫ್ಲುಯೆಂಜಾ ಕಾಣಿಸಿಕೊಂಡಿದೆ. ಈ ಫ್ಲೂ ಕಾಣಿಸಿಕೊಂಡಂತೆ ಹತ್ತಿರದ ಫಾರ್ಮ್​ನಲ್ಲಿರುವ ಕೋಳಿಗಳನ್ನು ಸಹ ಕೊಲ್ಲಲಾಗಿದೆ. ಇದರ ಜೊತೆಗೆ ಈ ರೋಗ ಹರಡದಂತೆ ಪಕ್ಷಿಗಳನ್ನು ಸಹ ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.

ಸೋಂಕು ಹರಡದಂತೆ ಅಲ್ಲಿನ ಸರ್ಕಾರ ಕಟ್ಟೆಚ್ಚರ ವಹಿಸಿದೆ. 3 ಕಿ.ಮೀನಿಂದ 10 ಕಿ.ಮೀ ವ್ಯಾಪ್ತಿಯಲ್ಲಿರುವ 15 ಫಾರ್ಮ್​ಗಳಲ್ಲಿ ಸುಮಾರು 3,63,00 ಕೋಳಿಗಳನ್ನು ಸಾಕಲು ನಿರ್ಬಂಧ ವಿಧಿಸಲಾಗಿದೆ.

ಜಪಾನ್​​ನಲ್ಲಿ ಪ್ರತಿ ವರ್ಷ ಅಕ್ಟೋಬರ್​ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತದೆ. ಕಳೆದ ವರ್ಷ26 ಫಾರ್ಮ್​ಗಳಲ್ಲಿ ಈ ಪ್ಲೂ ಕಾಣಿಸಿಕೊಂಡಿತ್ತು. ಇದರಿಂದಾಗಿ 17.71 ಮಿಲಿಯನ್​​ ಪಕ್ಷಿಗಳನ್ನು ಕೊಲ್ಲಲಾಯಿತು. ಇದರಿಂದಾಗಿ ಜಪಾನ್​ನಲ್ಲಿ ಮೊಟ್ಟೆಯ ಕೊರತೆ ಮತ್ತು ಬೆಲೆ ಹೆಚ್ಚಳಕ್ಕೆ ಕಾರಣವಾಯಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಕ್ಕಿ ಜ್ವರ.. ಎಚ್ಚರ! ಸೋಂಕು ಹರಡದಂತೆ 14,000 ಪಕ್ಷಿಗಳನ್ನು ಕೊಂದ ಜಪಾನ್​

https://newsfirstlive.com/wp-content/uploads/2024/02/Cock_hen.jpg

Load More