/newsfirstlive-kannada/media/post_attachments/wp-content/uploads/2024/12/human-washing-machine.jpg)
ಮನುಷ್ಯ ಎಲ್ಲದಕ್ಕೂ ಯಂತ್ರಗಳ ಮೊರೆ ಹೋಗುತ್ತಿದ್ದಾನೆ. ಅಡುಗೆ ಮಾಡುವ, ಬಟ್ಟೆ ಒಗೆಯುವ ಯಂತ್ರಗಳು ಇಂದು ಮನೆಗಳನ್ನು ಹೊಕ್ಕಿವೆ. ಪಾತ್ರೆ ತೊಳೆಯಲೂ ಯಂತ್ರವಿದೆ. ಕಂಪ್ಯೂಟರ್ಗಳ ಮುಂದೆ ಗಂಟೆಗಟ್ಟಲೆ ಕುಳಿತ ಮನುಷ್ಯ ತನಗೆ ಕೈಗೊಂದು, ಕಾಲಿಗೊಂದು ಯಂತ್ರಗಳನ್ನೇ ಕೆಲಸಕ್ಕೆ ಇಟ್ಟುಕೊಂಡಿದ್ದಾನೆ. ಅಡುಗೆ ಮಾಡುವುದು ಸೇರಿ ಆಸ್ಪತ್ರೆಗಳಲ್ಲಿ ವೈದ್ಯರ ಜಾಗದಲ್ಲಿ ಆಪರೇಷನ್ಗೂ ರೋಬೋಟ್ಗಳು ಬಂದಿವೆ.
ತಂತ್ರಜ್ಞಾನ ಅತಿಯಾಗಿ ಅಳವಡಿಸಿಕೊಂಡ ಮನುಷ್ಯ ಎಲ್ಲಾ ಅಗತ್ಯಗಳಿಗೂ ಯಂತ್ರದ ಮೊರೆ ಹೋಗುತ್ತಿದ್ದಾನೆ. ಎಲ್ಲದಕ್ಕೂ ಯಂತ್ರಗಳು ಬಂದ ಮೇಲೆ ಸ್ನಾನ ಮಾಡಿಸಲು ಮಶಿನ್ ಇಲ್ಲ ಎಂಬ ಕೊರಗು ಹಲವರ ಮನಸ್ಸಿನಲ್ಲಿ ಮನೆ ಮಾಡಿತ್ತೇನೋ. ಈಗ ಅದಕ್ಕೂ ಉತ್ತರ ಸಿಕ್ಕಿದೆ. ಬಟ್ಟೆ ಒಗೆಯಲು ಹೇಗೆ ವಾಷಿಂಗ್ ಇದೆಯೋ ಅದೇ ರೀತಿ ಮನುಷ್ಯರಿಗೂ ಸ್ನಾನ ಮಾಡಿಸುವ ಮಶಿನ್ ಬಂದಿದೆ.
ಇದನ್ನೂ ಓದಿ:Redmi Note 13 Pro+ 5G ಮೊಬೈಲ್‌ಗೆ ಇಂದು ಭರ್ಜರಿ ಆಫರ್.. ಇಷ್ಟು ಕಡಿಮೆ ಬೆಲೆಗೆ ಸಿಗುತ್ತಾ?
15 ನಿಮಿಷದಲ್ಲಿ ಸ್ನಾನ
ತಂತ್ರಜ್ಞಾನದಲ್ಲಿ ವಿಶ್ವದಲ್ಲೇ ಮುಂದುವರೆದಿರುವ ಜಪಾನ್, ಹೊಸ ಹೊಸ ಆವಿಷ್ಕಾರಗಳನ್ನು ಪರಿಚಯಿಸುವಲ್ಲಿ ಸದಾ ಮುಂದೆ. ಇದೀಗ ಜಪಾನ್ ಸ್ನಾನದ ಮಶಿನ್ ಕಂಡು ಹಿಡಿದಿದೆ. ಇದು AI ಚಾಲಿತ ಯಂತ್ರವಾಗಿದ್ದು ಮನುಷ್ಯರನ್ನು 15 ನಿಮಿಷದಲ್ಲಿ ಸ್ನಾನ ಮಾಡಿಸಿ ಕ್ಲೀನ್ ಮಾಡುತ್ತದೆ ಅಂತ ಜಪಾನ್ ಕಂಪನಿ ಸೈನ್ಸ್ ಕಂ. ಮಾಹಿತಿ ನೀಡಿದೆ.
ನಗರಗಳಲ್ಲಿ ಕೆಲಸ ಮಾಡುವವರದ್ದು ಒಂದು ರೀತಿಯಲ್ಲಿ ಯಾಂತ್ರಿಕ ಜೀವನ. ನಗರಗಳಲ್ಲಿ ಸ್ನಾನ ಮಾಡುವ ಸಮಯವೂ ಅತಿ ಮುಖ್ಯ. ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಕೆಲಸ ಮಾಡುವವರದ್ದು ನಿಮಿಷ ನಿಮಿಷವೂ ಲೆಕ್ಕವೇ. ಇಂತಹ ಬಿಡುವಿಲ್ಲದ ಬದುಕಿನಲ್ಲಿ ಯಾರಿಗೆ ಸ್ನಾನ ಮಾಡುವಷ್ಟು ತಾಳ್ಮೆ ಇಲ್ಲವೋ ಅವರು ಈ 15 ನಿಮಿಷಗಳ ಕಾಲ ಯಂತ್ರದೊಳಗೆ ಕುಳಿತುಕೊಳ್ಳಬಹುದು. ಈ ಯಂತ್ರ AI (ಕೃತಕ ಬುದ್ಧಿಮತ್ತೆ) ಸಹಾಯದಿಂದ ಕೆಲಸ ಮಾಡುತ್ತದೆ ಅಂತ ಕಂಪನಿ ತಿಳಿಸಿದೆ. ಯಂತ್ರದೊಳಗೆ ನೀವು ಹೋದಾಗ ಮೊದಲು ನಿಮ್ಮ ದೇಹದ ಚರ್ಮದ ಬಗ್ಗೆ ತಿಳಿದುಕೊಳ್ಳುತ್ತದೆ. ಅದರ ಆಧಾರದ ಮೇಲೆ ನಿಮಗೆ ಸೋಪ್ ಆಯ್ಕೆ ಮಾಡುತ್ತದೆ. ನಿಮ್ಮ ದೇಹಕ್ಕೆ ಸ್ನಾನ ಮಾಡಿಸಿ ದೇಹವನ್ನು ಒಣಗಿಸಿಯೇ ಆಚೆ ಕಳಿಸುತ್ತದೆ ಅಂತೆ.
ಇದನ್ನೂ ಓದಿ:ಆರ್ಸಿಬಿಗೆ ಜೂನಿಯರ್ ಲಸಿತ್ ಮಲಿಂಗಾ ಎಂಟ್ರಿ; ಬೆಂಗಳೂರಿಗೆ ಬಂತು ಆನೆಬಲ
ಸ್ನಾನ ಮಾಡಿಸುವ ಯಂತ್ರ ಸಿದ್ಧಪಡಿಸಿರುವ ಜಪಾನ್ನ ಸೈನ್ಸ್ ಕೋ ಕಂಪನಿ, 2025ರಲ್ಲಿ ಒಸಾಕಾ ಕನ್ಸಾಯ್ನಲ್ಲಿ ನಡೆಯಲಿರುವ ಎಕ್ಸ್ಪೋದಲ್ಲಿ ಮೊದಲು 1 ಸಾವಿರ ಜನರಿಗೆ ಪ್ರಾಯೋಗಿಕವಾಗಿ ಸ್ನಾನ ಮಾಡಿಸುವ ಮೂಲಕ ಯಂತ್ರವನ್ನು ಮಾರುಕಟ್ಟೆಗೆ ಪರಿಚಯಿಸಲಿದೆಯಂತೆ. 1 ಸಾವಿರ ಜನರಿಗೆ ಸ್ನಾನ ಮಾಡಿಸಿ ಅವರಿಂದ ಬಂದ ಪ್ರತಿಕ್ರಿಯೆ ಆಧಾರದ ಮೇಲೆ ಮತ್ತಷ್ಟು ಯಂತ್ರಗಳನ್ನು ಮಾರುಕಟ್ಟೆಗೆ ತರಲು ಕಂಪನಿ ಯೋಚಿಸಿದೆ.
ಹೇಗೆ ಕೆಲಸ ಮಾಡುತ್ತದೆ?
ಮಾನವ ವಾಷಿಂಗ್ ಮಶೀನ್ ನೋಡಲು ವಿಮಾನದ ಕಾಕ್ಪಿಟ್ ಆಕಾರದಲ್ಲಿದೆ. ವ್ಯಕ್ತಿಯು ಮೊದಲು ಮಶಿನ್ ಒಳಗೆ ಕೂತಾಗ ಬಿಸಿ ನೀರು ಮಳೆಯಂತೆ ಸುರಿಸುತ್ತದೆ. ಆ ನೀರಿನಿಂದ 3 ಮೈಕ್ರೋಮೀಟರ್ ಗಾತ್ರದ ಸಣ್ಣ ನೀರಿನ ಗುಳ್ಳೆಗಳು ದೇಹದ ಕೊಳೆಯನ್ನು ತೆಗೆದುಹಾಕುತ್ತವೆ. ನೀವು ಯಂತ್ರದ ಒಳಗೆ ಕುಳಿತಾದ ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವ ಸೋಪ್ನ ದ್ರಾವಣದ ನೊರೆ ಮೈಮೇಲೆ ಸಿಡಿಸುತ್ತದೆ. ಇದರಿಂದ ನಿಮ್ಮ ದೇಹದ ಮೇಲಿನ ಕೊಳೆ ತೆಗೆಯುತ್ತದೆ. ಬಳಿಕ ನಿಧಾನವಾಗಿ ನೀರು ಸಿಂಪಡಿಸಲು ಆರಂಭಿಸುತ್ತದೆ. ನೀರಿನಿಂದ ನಿಮ್ಮ ದೇಹ ಶುದ್ಧವಾದ ಬಳಿಕ ನಿಮ್ಮ ದೇಹವನ್ನು ಒಣಗಿಸುತ್ತದೆ. ಇಲ್ಲಿ ನಿಮಗೆ ಎಷ್ಟು ಬಿಸಿ ಗಾಳಿ ಬೇಕೋ ಅಷ್ಟನ್ನೇ ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ಸ್ನಾನ ಮಾಡಿಸುವಾಗ ನಿಮ್ಮ ಯೋಚನೆಗ ತಕ್ಕಂತೆ ಸಂಗೀತ ಕೂಡ ನುಡಿಸಲಿದೆ ಅಂತ ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ:ಸದ್ದಿಲ್ಲದೇ ಮದುವೆಯಾದ್ರಾ ಕನ್ನಡತಿ; ರಂಜನಿ ರಾಘವನ್ ಹೊಸ ಫೋಟೋಸ್ ನೋಡಿ ಫ್ಯಾನ್ಸ್ ಶಾಕ್!
ಈ ಸ್ನಾನದ ಮಶೀನ್ 50 ವರ್ಷಗಳ ಹಿಂದೆಯೇ ಅಂದರೆ 1970ರಲ್ಲಿಯೇ ಜಪಾನ್ನ ಪ್ಯಾನಾಸೋನಿಕ್ ಕಂಪನಿ ತಯಾರಿಸಿತ್ತು, ಈಗ ಅದೇ ವಿನ್ಯಾಸ ಆಧರಿಸಿ ಹೊಸ ಯಂತ್ರ ಅಭಿವೃದ್ಧಿಪಡಿಸಲಾಗಿದೆ. ಅಂದ ಹಾಗೆ ಕಂಪನಿ ಈಗಲೇ ಅಡ್ವಾನ್ಸ್ ಬುಕಿಂಗ್ ಸಹ ಆರಂಭಿಸಿದೆಯಂತೆ.
ಈ ಮನುಷ್ಯದ ಸ್ನಾನದ ಯಂತ್ರದಿಂದ ನಿಮ್ಮ ದೇಹವಲ್ಲದೇ ಕೃತಕ ಬುದ್ಧಿಮತ್ತೆ ಬಳಸಿಕೊಂಡು ಮನಸ್ಸನ್ನೂ ತೊಳೆಯುತ್ತದೆ ಅಂತ ಕಂಪನಿ ಹೇಳಿದೆ. ಈ ಮಶೀನ್ನಲ್ಲಿ ಸ್ನಾನದ ಬಳಿಕ ನಿಮಗೆ ದೈಹಿಕ, ಮಾನಸಿಕ ಉಲ್ಲಾಸ ಕೂಡ ಸಿಗಲಿದೆಯಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ