/newsfirstlive-kannada/media/post_attachments/wp-content/uploads/2024/11/Ramshackle.jpg)
ಥಟ್ ಅಂತ ನೋಡಿದ್ರೆ ಈ ಮನೆ ಈಗಲೋ, ಆಗಲೋ ಬೀಳುತ್ತೆ ಅಂತ ನೋಡಿದವರು ಅಂದುಕೊಳ್ಳಬಹುದು. ಆದರೆ ಇದು ಜಪಾನಿ ವಾಸ್ತುಶಿಲ್ಪಿ ಒಬ್ಬರು ಕಳೆದ 20 ವರ್ಷಗಳಿಂದ ತಾನೇ ತನ್ನ ಕೈಯಾರೆ ನಿರ್ಮಿಸಿರುವ ಮನೆ, ಕಟ್ಟಡ ಇದು.
ಸತತ ಭೂಕಂಪನದಿಂದ ತತ್ತರಿಸಿರುವ ಜಪಾನ್ನಲ್ಲಿ ಸಾಂಪ್ರದಾಯಿಕವಾಗಿ ಪ್ಯಾಕ್ ಮಾಡಿದ ಮಣ್ಣು, ಮರ, ಕಲ್ಲುಗಳಿಂದ ಕೂಡಿದ, ಸಮತಟ್ಟಾದ ಅಡಿಪಾಯದ ಮೇಲೆ ನಿರ್ಮಿಸಿರುವ ಮನೆಗಳಿವೆ. ಜಪಾನ್ ಮನೆಗಳು ತೀವ್ರ ಹವಾಮಾನ, ಭೂಕಂಪನಗಳನ್ನು ತಡೆಯುವಂತೆ ನಿರ್ಮಿಸಲಾಗುತ್ತಿದೆ. ಜನರ ವಸತಿಗಾಗಿ ಮರ ಕಡಿಯುವುದು ಸೇರಿ ಮನೆಗಾಗಿ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ವಸ್ತು ನಿಲ್ಲಿಸುವ ಉದ್ದೇಶದಿಂದ ವಾಸ್ತುಶಿಲ್ಪಿಯೊಬ್ಬರು ಕಾಂಕ್ರಿಟ್ನಿಂದ ಮನೆ ಒಂದನ್ನು ನಿರ್ಮಿಸುತ್ತಿದ್ದಾರೆ.
ಇದು ಎಲ್ಲರಂತೆ ಸಾಮಾನ್ಯ ಮನೆಯಾಗಿದ್ದರೆ ವಿಶೇಷವಿರಲಿಲ್ಲ. ಆದರೆ ಈ ಮನೆ, ನೋಡಿದರೆ ಕೆಲಸ ಬಾರದ ಕಾರ್ಮಿಕ ಕಟ್ಟಿದಂತೆ ಅಡ್ಡಾದಿಡ್ಡಿಯಾಗಿ ನಿರ್ಮಿಸಲಾಗಿದೆ. ಟೋಕಿಯೋದಲ್ಲಿ ನಿರ್ಮಿಸಿರುವ ಈ ಮನೆ ಮೇಲ್ನೋಟಕ್ಕೆ ವಿಲಕ್ಷಣವಾದ ಕಟ್ಟಡ ಅಂತ ಅನಿಸಬಹುದು. ನೋಡಿದರೆ ಆ್ಯನಿಮೆಷನ್ನಲ್ಲಿ ಡಿಸೈನ್ ಮಾಡಿ ನೇರವಾಗಿ ತಂದು ಟೋಕಿಯೋದಲ್ಲಿ ತಂದು ಇಟ್ಟಂತೆ ಅನಿಸುತ್ತದೆ. 2005ರಿಂದ ಆರಂಭವಾಗಿ ಇಲ್ಲಿಯವರೆಗೆ 4 ಅಂತಸ್ತಿನ ಕಟ್ಟಡ ನಿರ್ಮಿಸಿರುವ ವಾಸ್ತುಶಿಲ್ಪಿ ಕೀಸುಕಿ ಓಕಾ ಇನ್ನೂ ನಿರ್ಮಾಣ ಮಾಡುತ್ತಲೇ ಇದ್ದಾರೆ. ವಿಶೇಷವೆಂದರೆ ಈ ಮನೆ ನಿರ್ಮಾಣ ಮಾಡುತ್ತಿರುವವರು ಕೀಸುಕೆ ಓಕಾ ಒಬ್ಬರೇ.
ಯಾವಾಗ ಬೀಳುತ್ತದೆಯೋ ಎಂಬಂತೆ ಈ ಕಟ್ಟಡ ಕಾಣುತ್ತದೆ ಆದರೂ ಇದು ಕನಿಷ್ಟ 200 ವರ್ಷ ಬಾಳಿಕೆ ಬರುತ್ತದೆ ಅಂತಾರೆ ವಾಸ್ತುಶಿಲ್ಪಿ 59 ವರ್ಷದ ಕೀಸುಕೆ ಓಕಾ. ಓಕಾ ಅವರು 2005ರಲ್ಲಿ ಈ ಮನೆ ನಿರ್ಮಾಣ ಪ್ರಾರಂಭಿಸಿದರು, ಕೆಲವು ಸ್ನೇಹಿತರ ಸಹಾಯ ಹೊರತುಪಡಿಸಿದರೆ ಇಡೀ ಕಟ್ಟಡವನ್ನು ತಾವೊಬ್ಬರೇ ನಿರ್ಮಿಸಿದ್ದಾರೆ. ಇದು 200 ವರ್ಷಗಳಿಗೂ ಹೆಚ್ಚು ಕಾಲ ಉಳಿಯುವಷ್ಟು ಗುಣಮಟ್ಟದ್ದು ಅಂತಾರೆ ಓಕಾ
ವೇಗವಾಗಿ ಬೆಳೆಯುತ್ತಿರುವ ಜಪಾನ್ನ ನಗರಗಳನ್ನು ನೋಡಿದಾಗ ಓಕಾಗೆ ಬೇಜಾರಾಗುತ್ತದೆ ಅಂತೆ. ಕಟ್ಟಡ ಕಟ್ಟುವ ವ್ಯಕ್ತಿಗೂ, ಕಟ್ಟಡ ವಿನ್ಯಾಸ ಮಾಡುವವರಿಗೂ ತುಂಬಾ ವ್ಯತ್ಯಾಸವಿದೆ. ಕಟ್ಟಡಕ್ಕೆ ಜೀವ ನೀಡುವ ಸಲುವಾಗಿ ನಿರ್ಮಿಸಿದೆ ಅಂತಾರೆ.
ಇದನ್ನೂ ಓದಿ:16 ವರ್ಷದ ಒಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್.. ಮಸೂದೆ ಅಂಗೀಕರಿಸಿದ ಪಾರ್ಲಿಮೆಂಟ್
4 ಮಹಡಿ ಮನೆಯಲ್ಲಿ ಮೇಲಿನ 3 ಮಹಡಿಗಳಲ್ಲಿ ವಾಸಿಸಲು ಮತ್ತು ನೆಲಮಾಳಿಗೆಯಲ್ಲಿ ಸ್ಟುಡಿಯೋಗಾಗಿ ಬಳಸಲು ನಿರ್ಧರಿಸಿದ್ದಾರೆ. ಓಕಾ ಅವರು ಕಟ್ಟಡ ನಿರ್ಮಾಣ ಆರಂಭಿಸಿದಾಗ ಇದು 20 ವರ್ಷ ಕಾಲ ತೆಗೆದುಕೊಳ್ಳುತ್ತೆ ಅಂತ ಅಂದುಕೊಂಡಿರಲಿಲ್ಲವಂತೆ. ನಿರ್ಮಾಣ ಕಾರ್ಯ 3 ವರ್ಷ ತೆಗೆದುಕೊಳ್ಳಬಹುದು ಅಂತ ಅಂದುಕೊಂಡಿದ್ದರಂತೆ. ಕೀಸುಕೆ ಓಕಾ, ಗ್ರಾಮೀಣ ಪ್ರದೇಶದಲ್ಲಿ ಬೆಳೆದವರು, ಅಸಾಧಾರಣ ವಾಸ್ತುಶಿಲ್ಪದ ವಿದ್ಯಾರ್ಥಿ. ಅವರ ಶಿಕ್ಷಕರೇ ಅವರನ್ನು ಉನ್ನತ ಸ್ಥಾನಕ್ಕೆ ಹೋಗುತ್ತಾರೆ ಅಂತ ಹೇಳಿದ್ದರಂತೆ. ತಮ್ಮ 30 ವಯಸ್ಸಿನಲ್ಲಿ ಸಮಸ್ಯೆಯಿಂದ ದೈಹಿಕವಾಗಿ ತೊಂದರೆಗೀಡಾದರು. ಸ್ವಲ್ಪ ಕಾಲ ವಾಸ್ತು ಶಿಲ್ಪ ಕಾರ್ಯ ನಿಲ್ಲಿಸಿದ್ದರು.
ಇದನ್ನೂ ಓದಿ:ಗಂಡ ಮತ್ತು ಸಂಬಂಧಿಕರಿಂದಲೇ ಹೋಯ್ತು ಇಷ್ಟು ಮಹಿಳೆಯರ ಜೀವ; ಶಾಕಿಂಗ್ ಸತ್ಯ ಬಯಲಿಗೆ
ಅವರ ಪತ್ನಿ ಸಣ್ಣ ನಿವೇಶನ ಖರೀದಿಸಿ, ಮನೆ ನಿರ್ಮಿಸಲು ಮನವೊಲಿಸಿದ್ದರು ಅಂತಾರೆ ಓಕಾ. ಈಗ ನಿರ್ಮಿಸಿರುವ ಕಟ್ಟಡ ಅವರ ಆತ್ಮವಿಶ್ವಾಸ ಮರು ಸ್ಥಾಪನೆಯಾಗಿದೆ ಅಂತಾರೆ ಜಗತ್ತಿನಲ್ಲಿ ಮನೆ ನಿರ್ಮಾಣಕ್ಕಾಗಿ ಸಾಕಷ್ಟು ವಸ್ತುಗಳು ಉತ್ಪಾದನೆಯಾಗುತ್ತಿವೆ. ನಾವು ಅದನ್ನು ತಪ್ಪಿಸಬೇಕು. ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಮುಂದೆ ತೊಂದರೆಗೆ ಸಿಲುಕುತ್ತೇವೆ ಅಂತಾರೆ ಓಕಾ.
ಈ ಮನೆ ಇರುವ ಪ್ರದೇಶದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿಯಾಗುತ್ತಿದೆ. ಇದರ ಪಕ್ಕದಲ್ಲಿದ್ದ ಕಟ್ಟಡಗಳನ್ನೂ ಕೆಡವಲಾಗಿದೆ. ಸದ್ಯ ಈ ಕಟ್ಟಡವನ್ನು 10 ಮೀಟರ್ ಹಿಂದಕ್ಕೆ ಸರಿಸಲು ಓಕಾ ನಿರ್ಧರಿಸಿದ್ದಾರೆ. ಕಟ್ಟಡ ಹಿಂದಕ್ಕೆ ಸರಿಸಿದ ನಂತರ ಮತ್ತೆ ಕಟ್ಟಡಕ್ಕೆ ಅಂತಿಮ ಸ್ಪರ್ಶ ನೀಡಲು ನಿರ್ಧರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ