Baba Vanga: ಮತ್ತೆ ನಿಜವಾಯ್ತು ಬಾಬಾ ವಾಂಗಾ ನುಡಿದ ಭವಿಷ್ಯ.. ಎಲ್ಲರಿಗೂ ಅಚ್ಚರಿ.. ಏನದು?

author-image
Ganesh
Updated On
ನಿಜವಾಗ್ತಿದೆ ಬಾಬಾ ವಂಗಾ ಭವಿಷ್ಯ..! ಇದಕ್ಕೆ ಬಿಸಿಲಿನ ತೀವ್ರತೆಯೇ ಸಾಕ್ಷಿ, 2024ರ ಬಗ್ಗೆ ಕೊಟ್ಟಿದ್ದ ಎಚ್ಚರಿಕೆ ಏನು?
Advertisment
  • ಬಾಬಾ ವೆಂಗಾ ಭವಿಷ್ಯವಾಣಿಗಳು ಮತ್ತೊಮ್ಮೆ ವೈರಲ್
  • ‘ದಿ ಫ್ಯೂಚರ್ ಐ ಸಾ’ ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದರು
  • ಅಷ್ಟಕ್ಕೂ ಬಾಬಾ ವಾಂಗಾ ನುಡಿದಿದ್ದ ಭವಿಷ್ಯ ಏನು..?

ನಿನ್ನೆ ಇಡೀ ಜಗತ್ತೆ ಬೆಚ್ಚಿತ್ತು. ಅತೀಂದ್ರಿಯ ಶಕ್ತಿ ಹೊಂದಿರುವ ಬಾಬಾ ವಂಗಾ ನುಡಿಯುವ ಭವಿಷ್ಯ ಮತ್ತೊಮ್ಮೆ ನಿಜವಾಗಿತ್ತು. ನಿನ್ನೆ ಬಹುದೊಡ್ಡ ದುರಂತವೊಂದನ್ನ ಭವಿಷ್ಯ ನುಡಿದಿದ್ದು ನಿಜವಾಗಿದೆ.

ಸದ್ಯ ಈಗ ರಷ್ಯಾ ದ್ವೀಪದಲ್ಲಿ ಸಂಭವಿಸಿದ 8.8ರ ತೀವ್ರತೆಯ ಭೂಕಂಪನ ಉಂಟಾಗಿರುವ ಕುರಿತಾಗಿ ಹಾಗೆ ಜಪಾನ್‌ನ ಸುನಾಮಿ ಕುರಿತು ಮೊದಲೇ ನುಡಿದಿರುವುದು ಅಚ್ಚರಿ ಮೂಡಿಸಿದೆ. ತನ್ನ 'ದಿ ಫ್ಯೂಚರ್ ಐ ಸಾ' ಎಂಬ ಪುಸ್ತಕದಲ್ಲಿ ತನಗೆ ಬೀಳುವ ಕನಸುಗಳನ್ನ ಈ ಪುಸ್ತಕದಲ್ಲಿ ದಾಖಲು ಮಾಡಿದ್ದಾಳೆ.

ಅದರ ಪ್ರಕಾರ ಆಕೆ ಜುಲೈ 5ರಂದು ಜಪಾನ್‌ನಲ್ಲಿ ದೊಡ್ಡ ನೈಸರ್ಗಿಕ ದುರಂತ ಸಂಭವಿಸಲಿದೆ ಅಂತ ಭವಿಷ್ಯ ನುಡಿದಿದ್ದಳು. ಜುಲೈ 5ರಂದು ಈ ಘಟನೆ ನಡೆಯಲಿಲ್ಲ. ಆದ್ರೆ ಜುಲೈ 30ರಂದು ಸಂಭವಿಸಿದೆ. ಅಂದ್ಹಾಗೆ ಆಕೆ ಈ ಮೊದಲು ನುಡಿದಿರುವ ಹಲವು ದುರಂತಗಳ ಕುರಿತ ಭವಿಷ್ಯ ಕೂಡ ನಿಜವಾಗಿವೆ.

ಇದನ್ನೂ ಓದಿ: ಕಾಮಾಕ್ಯ ದೇವಿ ಮುಂದೆ ನಿಂತು ವಿಜಯಲಕ್ಷ್ಮೀ ಸಂದೇಶ.. ಪ್ರಥಮ್ ಕೇಸ್​​ನಲ್ಲಿ FIR, ಜಗ್ಗೇಶ್ ಏನಂದ್ರು..?

ಜಪಾನಿನ ಬಾಬಾ ವೆಂಗಾ, ಈ ಭವಿಷ್ಯವಾಣಿ ವಿವರಿಸುವಾಗ ಸಮುದ್ರ ಕುದಿಯುವ ದೃಶ್ಯವನ್ನು ವಿವರಿಸಿದ್ದರು. ಸಮುದ್ರವು ಕೆಟ್ಟದಾಗಿ ಕುದಿಯುತ್ತದೆ ಮತ್ತು ಎತ್ತರದ ಅಲೆಗಳು ಬರುತ್ತವೆ ಎಂದಿದ್ದರು. ಜಪಾನ್, ತೈವಾನ್, ಇಂಡೋನೇಷ್ಯಾ ಮತ್ತು ಉತ್ತರ ಮರಿಯಾನಾ ದ್ವೀಪಗಳನ್ನು ಸಂಪರ್ಕಿಸುವ ಪ್ರದೇಶ ಎಂದು ಅವರು ಸುನಾಮಿಯ ಕೇಂದ್ರ ವಿವರಿಸಿದ್ದರು. ಜುಲೈ 30 ರ ಬುಧವಾರ ಬೆಳಗ್ಗೆ, ರಷ್ಯಾದಲ್ಲಿ 8.8 ತೀವ್ರತೆಯ ಪ್ರಬಲ ಭೂಕಂಪವು ಜಪಾನ್‌ನಿಂದ ಅಮೆರಿಕಕ್ಕೆ ಕೋಲಾಹಲವನ್ನು ಸೃಷ್ಟಿಸಿದೆ. ಭೂಕಂಪದ ನಂತರ, ರಷ್ಯಾ ಮತ್ತು ಜಪಾನ್ ವರೆಗೆ ಸುನಾಮಿ ಅಲೆಗಳು ಕಂಡುಬಂದಿವೆ. ಜಪಾನ್‌ನಲ್ಲೂ ಹವಾಮಾನ ಎಚ್ಚರಿಕೆ ನೀಡಲಾಗಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕೋರಲಾಗಿದೆ.

ಇದನ್ನೂ ಓದಿ: ಭಾರತದ ಸರಕುಗಳ ಮೇಲೆ ಶೇ 25 ರಷ್ಟು ಟ್ರಂಪ್ ಸುಂಕ ಘೋಷಣೆ.. ಕೇಂದ್ರ ಸರ್ಕಾರ ಹೇಳಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment