/newsfirstlive-kannada/media/post_attachments/wp-content/uploads/2025/01/HAYATO-KAWAMURA.jpg)
ದುಡ್ಡು ಮಾಡಲು ಸಾವಿರ ದಾರಿ ಇವೆ. ಕಳ್ಳ ದಾರಿಗಳಂತೂ ಲಕ್ಷಗಳಿವೆ. ಸಂಪೂರ್ಣವಾಗಿ ಉಪಯೋಗಕ್ಕೆ ಬಾರದ ಮನೆಗಳನ್ನು ಖರೀದಿಸಿ ಅವುಗಳನ್ನು ಬಾಡಿಗೆಗೆ ಬಿಟ್ಟು ಕೋಟಿ ಕೋಟಿ ಎಣಿಸಿದ ಭೂಪ ಈಗ ಜಪಾನ್ನಲ್ಲಿ ಪತ್ತೆಯಾಗಿದ್ದಾನೆ . ಹಯಾತೋ ಕವಾಮುರಾ ಎಂಬ 38 ವರ್ಷದ ಓಸಾಕಾ ನಿವಾಸಿ ಈಗ ಆನ್ಲೈನ್ನಲ್ಲಿ ಫುಲ್ ಫೇಮಸ್. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿರುವ ಪ್ರಕಾರ ಇವನು ಒಟ್ಟು 200 ಹಳೆಯ ಹಾಗೂ ಮಾಲೀಕರೇ ಇಲ್ಲದ ಮನೆಗಳನ್ನು ಬಾಡಿಗೆಗೆ ಬಿಟ್ಟು ವರ್ಷಕ್ಕೆ 140 ಮಿಲಿಯನ್ ಯೆನ್ ಗಳಿಸಿದ್ದಾನಂತೆ ಅಂದ್ರೆ ಭಾರತೀಯ ರೂಪಾಯಿಗಳಲ್ಲಿ ಒಟ್ಟು 7.72 ಕೋಟಿ ರೂಪಾಯಿ.
ಈತನಿಗೆ ಚಿಕ್ಕಂದಿನಿಂದಲೂ ನಗರದಲ್ಲಿರುವ ಮನೆಗಳನ್ನು ದಿಟ್ಟಿಸಿ ನೋಡುವ ಹಾಗೂ ಅವುಗಳ ಬಗ್ಗೆ ಒಂದು ವಿಚಿತ್ರ ಕೌತುಕಗಳನ್ನು ಇಟ್ಟುಕೊಂಡಿದ್ದನಂತೆ ಅದರಲ್ಲೂ ಪರ್ವತಗಳ ಮೇಲೆ ಇರುವ ಮನೆಗಳ ಬಗ್ಗೆ ಈತನಿಗೆ ವಿಪರೀತ ಕುತೂಹಲ. ವಿದ್ಯಾರ್ಥಿಯಿದ್ದಾಗಿನಿಂದಲೂ ಈತನಿಗೆ ರಿಯಲ್ ಎಸ್ಟೇಟ್ ಬ್ಯುಸನೆಸ್ ಮೇಲೆ ವಿಪರೀತ ಆಸಕ್ತಿ ಇತ್ತಂತೆ. ತನ್ನ ಗರ್ಲ್ ಫ್ರೆಂಡ್ ಜೊತೆ ಈಗ ಹಳೆಯ ಆಸ್ತಿಗಳನ್ನೆಲ್ಲಾ ನೋಡಿಕೊಂಡು ಬರುವ ಅಭ್ಯಾಸ ಆವಾಗಿನಿಂದ ಇಟ್ಟುಕೊಂಡಿದ್ದನಂತೆ.
ಇದನ್ನೂ ಓದಿ: ಚೀನಾಗೆ ಸಿಕ್ತು ಮತ್ತೊಂದು ಬಂಗಾರದ ನಿಕ್ಷೇಪ; ಅಲ್ಲಿರುವುದು ಎಷ್ಟು ಟನ್ ಚಿನ್ನ ಗೊತ್ತಾ?
ಪದವಿಯ ನಂತರ ಈತ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಹೋಗಿ ಸೇರಿಕೊಳ್ಳುತ್ತಾನೆ ಆದ್ರೆ ಅಲ್ಲಿನ ಸಂಬಳ ಹಾಗೂ ಒತ್ತಡಗಳಿಂದ ಕಂಗೆಟ್ಟು ಬಿಟ್ಟು ಆಚೆ ಬರುತ್ತಾನೆ. ನಾನೇ ಸ್ವಂತ ಏನಾದರೂ ಮಾಡಬೇಕು ಎಂದು ನಿರ್ಧರಿಸಿ ಉಳಿತಾಯ ಮಾಡಿದ ಹಣದಲ್ಲಿ 10 ಲಕ್ಷ ರೂಪಾಯಿ ನೀಡಿ ಒಂದು ಫ್ಲ್ಯಾಟ್ ಖರೀದಿ ಮಾಡುತ್ತಾನೆ. ಇದನ್ನು ಆರು ವರ್ಷಗಳ ಬಳಿಕ 24 ಲಕ್ಷ ರೂಪಾಯಿಗೆ ಮಾರುತ್ತಾನೆ.
ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ರೈಲ್ವೆ ಸ್ಟೇಷನ್, ಒಂದೇ ಬಾರಿ 44 ರೈಲುಗಳು ನಿಲ್ಲುತ್ತವೆ! ಎಲ್ಲಿದೆ ?
ನಂತರ ಈತ ರಿಮೋಟ್ ಏರಿಯಾಗಳಲ್ಲಿ ಇರುವ ಮನೆಗಳನ್ನು ಟಾರ್ಗೆಟ್ ಮಾಡಲು ಶುರು ಮಾಡುತ್ತಾನೆ. ಮಾಲೀಕರೆ ಇಲ್ಲದ, ಸೋರುತ್ತಿರುವ ಮನೆಗಳನ್ನು, ಪ್ರಾಣಿಗಳೇ ವಾಸಗೊಂಡಿರುವ ಮನೆಗಳನ್ನು ಪತ್ತೆ ಮಾಡಿ ಅವುಗಳನ್ನು ಅಲ್ಪ ಮೊತ್ತಕ್ಕೆ ಖರೀದಿಸಿ, ಸ್ವಲ್ಪ ನವೀಕರಣಗೊಳಿಸಿ ಅವುಗಳನ್ನು ಬಾಡಿಗೆಗೆ ಬಿಡಲು ಶುರು ಮಾಡುತ್ತಾನೆ 2018 ರಿಂದ ಈ ಒಂದು ಹೊಸ ಬ್ಯುಸಿನೆಸ್ ಆರಂಭಿಸಲು ಈತ ಶುರು ಮಾಡುತ್ತಾನೆ. ಇಂತಹ ಒಟ್ಟು 200 ಮನೆಗಳನ್ನು ಕೊಂಡು ಈತ ಬಾಡಿಗೆಗೆ ಬಿಡುತ್ತಿದ್ದ. ಈ ಬಾಡಿಗೆಯಿಂದಲೇ ಈತ ವರ್ಷಕ್ಕೆ ಸುಮಾರು 7.72 ಕೋಟಿ ರೂಪಾಯಿ ಗಳಿಸುತ್ತಿದ್ದಾನೆ. ಇವನ ಗಳಿಕೆಯ ಕಥೆ ಈಗ ಜಪಾನ್ ತುಂಬಾ ಮನೆಮಾತಾಗಿದ್ದಾನೆ. ದುಡ್ಡು ಗಳಿಸಲು ಅದೆಷ್ಟು ಸರಳ ಮಾರ್ಗಗಳಿವೆ ಎಂಬುದನ್ನು ಈತನನ್ನು ನೋಡಿ ಕಲಿಯಬೇಕು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ