ಅಯ್ಯಯ್ಯೋ! ಚಿಪ್ಸ್​​ ತಿಂದು ಆಸ್ಪತ್ರೆ ಸೇರಿದ 14 ವಿದ್ಯಾರ್ಥಿಗಳು.. ಪೋಷಕರು ಓದಲೇಬೇಕಾದ ಸ್ಟೋರಿ!

author-image
Veena Gangani
Updated On
ಅಯ್ಯಯ್ಯೋ! ಚಿಪ್ಸ್​​ ತಿಂದು ಆಸ್ಪತ್ರೆ ಸೇರಿದ 14 ವಿದ್ಯಾರ್ಥಿಗಳು.. ಪೋಷಕರು ಓದಲೇಬೇಕಾದ ಸ್ಟೋರಿ!
Advertisment
  • ಮನೆಯಿಂದ ’ಭೂತ್ ಜೋಲೋಕಿಯಾ ಚಿಪ್ಸ್’ ಶಾಲೆಗೆ ತಂದ ವಿದ್ಯಾರ್ಥಿ
  • ಜೋಲೋಕಿಯಾ ಚಿಪ್ಸ್ ತಿಂದು ಆಸ್ಪತ್ರೆ ಸೇರಿದ ಸ್ಟೂಡೆಂಟ್ಸ್
  • 18 ವರ್ಷದೊಳಗಿನವರು ಈ ಚಿಪ್ಸ್ ತಿನ್ನಬಾರದು ಅಂತ ಉಲ್ಲೇಖಿಸಿದ್ದೇಕೆ?

ಟೋಕಿಯೋ: ಭಾರತದ ಭೂತ್ ಜೋಲೋಕಿಯಾ ಚಿಪ್ಸ್ ತಿಂದ ಜಪಾನ್‌ನ 14 ಹೈಸ್ಕೂಲ್‌ ವಿದ್ಯಾರ್ಥಿಗಳು ಹೊಟ್ಟೆ ಉರಿಗೊಳಗಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ಮೋಜಿಗಾಗಿ ವಿದ್ಯಾರ್ಥಿಗಳು ಭೂತ್ ಜೋಲೋಕಿಯಾ ಚಿಪ್ಸ್ ಅನ್ನು ತಿಂದು ಕೂಡಲೇ ಅಸ್ವಸ್ಥಗೊಂಡಿದ್ದಾರೆ.

ಇದನ್ನೂ ಓದಿ:ರೀಲ್ಸ್​ ಹುಚ್ಚು.. ವಿಡಿಯೋ ಮಾಡಲು ಹೋಗಿ 300 ಅಡಿ ಎತ್ತರದ ಫಾಲ್ಸ್​​ನಿಂದ ಬಿದ್ದು ಇನ್​ಸ್ಟಾ ತಾರೆ ಸಾವು

ಹೌದು, ಟೋಕಿಯೋದ ಶಾಲೆಗೆ ವಿದ್ಯಾರ್ಥಿಯೊಬ್ಬ ಮನರಂಜನೆಗಾಗಿ ತನ್ನ ಮನೆಯಿಂದ ಭೂತ್ ಜೋಲೋಕಿಯಾ ಚಿಪ್ಸ್ ಅನ್ನು ಶಾಲೆಗೆ ತೆಗೆದುಕೊಂಡು ಹೋಗಿದ್ದ. ಇದು ಅತ್ಯಂತ ಖಾರವಾದ ಚಿಪ್ಸ್​ ಎಂದು ಹೇಳಿದ್ದಾನೆ. ಆದರೆ ಉಳಿದ ವಿದ್ಯಾರ್ಥಿಗಳು ಮೋಜಿಗಾಗಿ ಒಮ್ಮೆಯಾದರೂ ಚಿಪ್ಸ್ ತಿನ್ನಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಆ ನಂತರ ಈ ಚಿಪ್ಸ್‌ ಕೇಳಿ ತಿಂದಿದ್ದಾರೆ. ಚಿಪ್ಸ್ ಬಾಯಿಗೆ ಹಾಕಿದ ಕೂಡಲೇ ಅವರು ವಾಂತಿ ಮಾಡಿಕೊಂಡಿದ್ದಾರೆ.

publive-image

ಕೂಡಲೇ ಅಲ್ಲೇ ನಿಂತುಕೊಂಡಿದ್ದ ವಿದ್ಯಾರ್ಥಿಗಳು ಶಾಲೆಯ ಆಡಳಿತದ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಅಸ್ವಸ್ಥಗೊಂಡ 14 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಚಿಪ್ಸ್ ಪ್ಯಾಕೆಟ್ ಮೇಲೆ 18 ವರ್ಷದೊಳಗಿನವರು ಇದನ್ನು ತಿನ್ನಬಾರದು ಎಂಬ ಎಚ್ಚರಿಕೆ ಕೊಟ್ಟಿದ್ದರು ಕೂಡ ಅದನ್ನು ಕಡೆಗಣಿಸಿದ್ದರು.

ಭೂತ್ ಜೋಲೋಕಿಯಾ ಚಿಪ್ಸ್ ತಯಾರಿಸುವ ಕಂಪನಿ ಐಸೋಯಾಮಾ ಘಟನೆಯ ನಂತರ ಸ್ಪಷ್ಟನೆ ನೀಡಿದೆ. ಚಿಪ್ಸ್ ಪ್ಯಾಕೆಟ್‌ನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗಲ್ಲ ಎಂಬ ಎಚ್ಚರಿಕೆ ಇರುವುದನ್ನು ಸ್ಪಷ್ಟಪಡಿಸಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ಈ ಉತ್ಪನ್ನವನ್ನು ತಿನ್ನುವುದನ್ನು ತಡೆಯಬೇಕು. ಏಕೆಂದರೆ ಇದು ತುಂಬಾ ಮಸಾಲೆಯುಕ್ತವಾಗಿದೆ ಎಂದು ಚಿಪ್ಸ್ ತಯಾರಕ ಕಂಪನಿ ತನ್ನ ಹೇಳಿಕೆಯಲ್ಲಿ ಪುನರುಚ್ಚರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment