ಕಾರ್ಗೋ ಟ್ರಾನ್ಸ್​ಪೋರ್ಟ್​​ ಸಿಸ್ಟಂನತ್ತ ಜಪಾನ್​ ಚಿತ್ತ.. ಬರುತ್ತಿದೆ ಸ್ವಯಂಚಾಲಿತ ಸರಕು ಸಾಗಣೆ ಕಾರಿಡಾರ್

author-image
AS Harshith
Updated On
ಕಾರ್ಗೋ ಟ್ರಾನ್ಸ್​ಪೋರ್ಟ್​​ ಸಿಸ್ಟಂನತ್ತ ಜಪಾನ್​ ಚಿತ್ತ.. ಬರುತ್ತಿದೆ ಸ್ವಯಂಚಾಲಿತ ಸರಕು ಸಾಗಣೆ ಕಾರಿಡಾರ್
Advertisment
  • ಟೆಕ್ನಾಲಜಿಯಲ್ಲಿ ಜಪಾನ್​ ದೇಶ ಸದಾ ಮುಂದು
  • ಕನ್ವೇಯರ್​ ಬೆಲ್ಡ್​ ರಸ್ತೆ ನಿರ್ಮಿಸಲು ಜಪಾನ್​ ಸಜ್ಜು
  • ಟ್ರಕ್​ ಚಾಲಕರ ಕೊರತೆ ನೀಗಿಸಲು ಬಹುದೊಡ್ಡ ಪ್ಲಾನ್​

ಜಪಾನ್​ ಯಾವತ್ತೂ ತಂತ್ರಜ್ಞಾನದಲ್ಲಿ ಮುಂದು. ಸದಾ ಎನಾದರೊಂದು ಅನ್ವೇಷಣೆ ಮಾಡುತ್ತಿರುತ್ತದೆ. ಅದರಂತೆಯೇ ಇದೀಗ ಕಾರ್ಗೋ ಟ್ರಾನ್ಸ್​ಪೋರ್ಟ್​​ ಸಿಸ್ಟಂನತ್ತ ಜಪಾನ್​ ಚಿತ್ತ ಹರಿಸಿದೆ. ಆ ಮೂಲಕ ಟ್ರಕ್​ ಚಾಲಕರ ಕೊರತೆ ನೀಗಿಸಲು ಮುಂದಾಗಿದೆ.

ಜಪಾನ್​ ದೇಶ ಟೋಕಿಯೊ ಮತ್ತು ಒಸಾಕಾ ನಡುವೆ ಸ್ವಯಂ ಚಾಲಿತ ಸರಕು ಸಾಗಣೆ ಕಾರಿಡಾರ್​ ಅನ್ನು ನಿರ್ಮಿಸಲು ಯೋಚಿಸುತ್ತಿದೆ. ಇದನ್ನು ಕನ್ವೇಯರ್​ ಬೆಲ್ಡ್​ ರಸ್ತೆ ಎಂದು ಹೆಸರಿಸಿದೆ. ಅಂದಹಾಗೆಯೇ ಇದು ಸ್ವಯಂ ಚಾಲಿತವಾಗಿ ಕೆಲಸ ಮಾಡಲಿದ್ದು, ಇದರ ಮೂಲಕ ವೇಗವಾಗಿ ಕೆಲಸ ಸಾಗಲಿದೆ.

ಸದ್ಯ ಜಪಾನ್​​ ದೇಶವು ಕಂಪ್ಯೂಟರ್​ ಗ್ರಾಫಿಕ್ಸ್​ ವಿಡಿಯೋವನ್ನು ಹಂಚಿಕೊಂಡಿದೆ. ದೊಡ್ಡ ಹೆದ್ದಾರಿಯ ಮಧ್ಯದಲ್ಲಿ ‘ಆಟೋ ಫ್ಲೋ ರೋಡ್​’ ಎಂದು ಕರೆಯಲ್ಪಡುವ ಮೂರು ಪಥದ ಕಾರಿಡಾರ್​​ ನಿರ್ಮಿಸಿದೆ. ಇದರ ಮೂಲಕ ಸರಕನ್ನು ಸಾಗಣೆ ಮಾಡಲಾಗುತ್ತದೆ.

ಇದನ್ನೂ ಓದಿ: ಐಫೋನ್​ 16 ಬಳಿಕ ಗೂಗಲ್​ ಪಿಕ್ಸೆಲ್​​ ಬ್ಯಾನ್​! ಅಚ್ಚರಿ ತರಿಸಿದೆ ಇಂಡೋನೇಷ್ಯಾದ ನಡೆ!

ಅಂದಹಾಗೆಯೇ ಸರ್ಕಾರವು ಈ ಯೋಜನೆಗೆ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಆದರೆ 2027ರಲ್ಲಿ ಮತ್ತು 2028ರಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸು ಯೋಚನೆಯಲ್ಲಿದೆ. 2030ರಲ್ಲಿ ಕಾರ್ಗೋ ಟ್ರಾನ್ಸ್​ಪೋರ್ಟ್​ ಸಿಸ್ಟಂ ಪೂರ್ತಿಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಜಪಾನ್​ ಪೋರ್ಕ್​ಲಿಫ್ಟ್​ ಬಳಸಿಕೊಂಡು ಲೋಡಿಂಗ್​​ ಕಾರ್ಯವನ್ನು ಸ್ವಯಂಚಾಲಿತಗೊಳಿಸಲಿದೆ. ವಿಮಾನ ನಿಲ್ದಾಣ, ರೈಲ್ವೆ, ಬಂದರುಗಳೊಂದಿಗೆ ಈ ಯೋಜನೆಯನ್ನು ಸಂಯೋಜಲಿಸಲಿದೆ. ಒಟ್ಟಿನಲ್ಲಿ ಜಪಾನ್​ ಸರಕು ಸಾಗಣೆ ವಿಚಾರದಲ್ಲಿ ಭವಿಷ್ಯದಲ್ಲಿ ಡ್ರೈವರ್​ಲೆಸ್​​ ತಂತ್ರಜ್ಞಾನವನ್ನು ತರಲು ಮುಂದಾಗಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment