/newsfirstlive-kannada/media/post_attachments/wp-content/uploads/2024/09/JAPAN-HISSITO-1.jpg)
ಟೋಕಿಯೋ: ನಿಮಗೆ ಮೈಸೂರು ರಾಜಮನೆತನಕ್ಕೆ ಅಲಮೇಲಮ್ಮ ಕೊಟ್ಟ ಶಾಪದ ಬಗ್ಗೆ ಗೊತ್ತಿರಬಹುದು. ಮಾಲಂಗಿ ಮಡುವಾಗಿ, ತಲಕಾಡು ಮರಳಾಗಿ ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಅನ್ನೋ ಶಾಪ ಕೊಟ್ಟು ಕಾವೇರಿ ನದಿಗೆ ಹಾರುತ್ತಾಳೆ. ಶ್ರೀ ರಂಗರಾಯರ ಪತ್ನಿ ಅಲಮೇಲಮ್ಮ. ಆ ಶಾಪ ವಿಮೋಚನೆಗಾಗಿ ಇಂದಿಗೂ ಕೂಡ ಮೈಸೂರು ಅರಮನೆಯಲ್ಲಿ ಪ್ರತಿ ದಸರಾ ವೇಳೆ ಪೂಜೆಯೂ ನಡೆಯುತ್ತದೆ. ಇಂದಿಗೂ ಕೂಡ ಮೈಸೂರು ರಾಜರಿಗೆ ಇಂದಿಗೂ ಕೂಡ ಗಂಡು ಮಕ್ಕಳಾಗಿಲ್ಲ. ಅವರ ದತ್ತು ಪುತ್ರರಿಗೆ ಮಾತ್ರ ಮಕ್ಕಳಾಗುತ್ತಿವೆ. ಇದೇ ಮಾದರಿಯ ಒಂದು ಕಥೆ ನಮಗೆ ಜಪಾನ್ನಲ್ಲಿ ತೆರೆದುಕೊಳ್ಳುತ್ತದೆ.
ಇದನ್ನೂ ಓದಿ:25 ವರ್ಷದ ಸುಳ್ಳು.. ಮೊದಲ ಬಾರಿ ಕಾರ್ಗಿಲ್ ಯುದ್ಧದ ಸತ್ಯ ಕಕ್ಕಿದ ಪಾಕಿಸ್ತಾನ; ಹೇಳಿದ್ದೇನು?
ಜಪಾನ್ನ ರಾಜಮನೆತನಕ್ಕೆ ಈಗ 40 ವರ್ಷಗಳ ಬಳಿಕ ಒಬ್ಬ ರಾಜಕುಮಾರ ಸಿಗುತ್ತಿದ್ದಾನೆ. ಜಪಾನ್ನನ್ನು ಸಾವಿರ ವರ್ಷಗಳ ಕಾಲ ಆಳಿದ ಮನೆತನಕ್ಕೆ ಸೇರಿದ ಹಿಸಾಹಿಟೋ 40 ವರ್ಷಗಳ ಬಳಿಕ ರಾಜಮನೆತನದಲ್ಲಿ ವಯಸ್ಕರನಾ ಒಬ್ಬ ಗಂಡು ಮಗ ಸಿಕ್ಕಂತಾಗಿದೆ.
ನಿರಂತರ ಮರಣಗಳು ಹಾಗೂ ಸಂತಾನಹೀನತೆ ರಾಜಮನೆತನಗಳನ್ನು ಬಿಟ್ಟಿಲ್ಲ. ಅದೇ ರೀತಿ ಈ ಹಿಸಾಹಿಟೋ ರಾಜಮನೆತನವನ್ನು ಕೂಡ ಕಳೆದ 40 ವರ್ಷಗಳಿಂದ ಈ ಸಮಸ್ಯೆ ಕಾಡಿದೆ 1985ರಲ್ಲಿ ಹಿಸಾಹಿಟೋ ಈ ರಾಜಮನೆತನದ ಚಕ್ರವರ್ತಿ ಎನಿಸಿಕೊಂಡಿದ್ದರು. ಸಾವಿರಾರು ವರ್ಷಗಳ ಆಳ್ವಿಕೆ ನಡೆಸಿದ ಈ ರಾಜಮನೆತನದಲ್ಲಿ ಕೊನೆಗೆ ಉಳಿದಿದ್ದು 17 ಮಂದಿ ಮಾತ್ರ. ಅದರಲ್ಲಿ ಗಂಡು ಮಕ್ಕಳು 4 ಜನ ಕೊನೆಯದವರಾಗಿ ಉಳಿದಿದ್ದು ಹಿಸಾಹಿಟೊ.
ಇದನ್ನೂ ಓದಿ:ಪ್ರೀತಿಸಿ, ಹುಡುಗಿ ಜೊತೆ ಸುತ್ತಾಡಿ.. ಪ್ರೇಮಿಗಳಿಗಾಗಿ ಎರಡು ದಿನ ಸಂಬಳ ಸಹಿತ ರಜೆ ಘೋಷಿಸಿದ ಕಂಪನಿ
ಉಳಿದ ಗಂಡು ಮಕ್ಕಳ ಅಕಾಲಿಕ ಮರಣದಿಂದಾಗಿ ಜಪಾನ್ನ ಈ ರಾಯಲ್ ಫ್ಯಾಮಿಲಿ ಒಬ್ಬ ಉತ್ತರಾಧಿಕಾರಿಗಾಗಿ ಸತತ ನಾಲ್ಕು ದಶಕಗಳಿಂದ ಕಾಯುತ್ತಿತ್ತು. ಈಗ ಹಿಸಾಹಿಟೊ 17 ವರ್ಷಗಳನ್ನು ಮುಗಿಸಿ 18ಕ್ಕೆ ಕಾಲಿಡುತ್ತಿದ್ದಾನೆ. ಸದ್ಯ ಮುಂದಿನ ರಾಜಕುಮಾರ ಸ್ಥಾನವನ್ನ ಈತನೇ ಅಲಂಕರಿಸಲಿದ್ದಾನೆ ಎಂದು ಹೇಳಲಾಗುತ್ತದೆ. ಬದಲಾದ ಕಾಲಘಟ್ಟದಲ್ಲಿ ಜಪಾನ್ನಲ್ಲಿ ಮಹಿಳೆಯರನ್ನು ರಾಜಮನೆತನದ ಉತ್ತರಾಧಿಕಾರಿ ಎಂದು ಘೋಷಿಸುವಂತಿಲ್ಲ ಎಂಬ ಕಾನೂನು ಬಂದಿತು. ಹೀಗಾಗಿ ಒಂದು ಗಂಡು ಸಂತಾನ ಇದ್ದರೂ ಕೂಡ ಅವನು 18 ವರ್ಷಕ್ಕೆ ಬಂದು ರಾಜಮನೆತನದ ಉತ್ತರಾಧಿಕಾರಿಯಾಗಲು ಈ ರಾಜಮನೆತನ ನಿರಂತರ 40 ವರ್ಷ ಕಾದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ