/newsfirstlive-kannada/media/post_attachments/wp-content/uploads/2024/09/Jashwanth-Bopanna3.jpg)
ಜಶ್ವಂತ್ ಬೋಪಣ್ಣ ಎಂದ ಕೂಡಲೇ ಥಟ್​ ಅಂತ ನೆನಪಿಗೆ ಬರುವ ಹೆಸರೇ ನಂದು. ಬಿಗ್​ಬಾಸ್​ ಒಟಿಟಿ ಸೀಸನ್​ 1ಕ್ಕೆ ಗ್ರ್ಯಾಂಡ್ ಆಗಿ ಒಟ್ಟಿಗೆ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ ಜೋಡಿ ಇದು. ರೋಡಿಸ್ ಶೋ ಮೂಲಕ ಫೇಮಸ್​ ಆಗಿದ್ದ ನಂದು ಮತ್ತು ಜಶ್ವಂತ್ ಪ್ರೇಮ ಪಕ್ಷಿಗಳಾಗಿ ಕನ್ನಡ ಬಿಗ್​ಬಾಸ್ ಒಟಿಟಿ ಸೀಸನ್​ 1ಕ್ಕೆ ಕಾಲಿಟ್ಟಿದ್ದರು.
/newsfirstlive-kannada/media/post_attachments/wp-content/uploads/2024/05/nandu2.jpg)
ಕನ್ನಡ ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ಇಬ್ಬರು ​ಲವ್ ಬರ್ಡ್ಸ್ ಆಗಿಯೇ ಸಖತ್ ಹೈಲೈಟ್ ಆಗಿದ್ದರು. ಈ ಇಬ್ಬರು ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಕೆಲವು ದಿನಗಳ ನಂತರ ಗಲಾಟೆ ಮಾಡಿಕೊಳ್ಳಲು ಶುರು ಮಾಡಿಕೊಂಡಿದ್ದರು. ಆದರೆ ಈ ಇಬ್ಬರು ಕೂಡ ತಮ್ಮ ಲವ್​​ ಬ್ರೇಕ್ ಮಾಡಿಕೊಳ್ಳುತ್ತಾರೆ ಅಂತ ಯಾರೂ ಸಹ ಉಹಿಸಿರಲಿಲ್ಲ. ಆದರೆ ಬಿಗ್​ಬಾಸ್​​ ಮನೆಯಿಂದ ಆಚೆ ಬಂದ ಬಳಿಕ ಈ ಇಬ್ಬರು ತಮ್ಮ ಪ್ರೀತಿಗೆ ಗುಡ್​​ ಬೈ ಹೇಳಿದ್ದರು.
ಈ ಬಗ್ಗೆ ಖುದ್ದು ಬಿಗ್​ಬಾಸ್ ಒಟಿಟಿ ಸ್ಪರ್ಧಿ ನಂದು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ತಮ್ಮಿಬ್ಬರಿಗೂ ಬ್ರೇಕಪ್ ಆಗಿದೆ ಎಂಬ ಸಂಗತಿಯನ್ನು ಹಂಚಿಕೊಂಡಿದ್ದರು. ಆದರೆ ಈ ಬಗ್ಗೆ ಜಶ್ವಂತ್ ಸ್ಪಷ್ಟನೆ ಕೊಟ್ಟಿರಲಿಲ್ಲ. ಇದಾದ ಬಳಿಕ ಮೊದಲು ಬಾರಿಗೆ ನ್ಯೂಸ್​ ಫಸ್ಟ್​ ಚಾನೆಲ್​ಗೆ ಜಶ್ವಂತ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ಸದ್ಯಕ್ಕೆ ನಂದು ನನ್ನ ಜೊತೆ ಟಚ್​ನಲ್ಲಿ ಇಲ್ಲ. ಬಿಗ್​ಬಾಸ್​ ಬಳಿಕ ನಾನು ಅವರ ಜೊತೆ ಮಾತಾಡಿಲ್ಲ. ಈ ಬ್ರೇಕ್​ಅಪ್​ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸ್ಟೋರಿ ಹಾಕಿದ್ರು, ಅದಕ್ಕೆ ನಾನು ಏನು ರಿಪ್ಲೈ ಮಾಡಿರಲಿಲ್ಲ. ನಾನು ರಿಪ್ಲೈ ಮಾಡಿದ್ರೆ ಕೊಳಕು ಅನಿಸುತ್ತದೆ. ಪ್ರತಿ ಮಹಿಳೆಯರಿಗೆ ಒಂದು ಪಾಮುಖ್ಯತೆ ಇದೆ. ನನ್ನ ಬಗ್ಗೆ ನಿಮಗೆ ಅಸಮಾಧಾನವಿದ್ದರೆ ಕ್ಷಮಿಸಿ. ಏಕೆಂದರೆ ನಾನು ಮಹಿಳೆಯರಿಗೆ ಗೌರವ ಕೊಡುತ್ತೇನೆ. ನಾನು ಅವರ ಇಮೇಜ್​ ಬಗ್ಗೆ ಕಾಳಜಿ ವಹಿಸುತ್ತೇನೆ. ಹೀಗಾಗಿ ಅವರ ಮುಂದಿನ ಕೆಲಸಕ್ಕೆ ಶುಭ ಹಾರೈಸುತ್ತೇನೆ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us