ಸ್ಟಾರ್​​ ಬೌಲರ್​ ಖರೀದಿಗೆ ದಿನೇಶ್ ಕಾರ್ತಿಕ್​ ಪ್ಲಾನ್​​.. ಆರ್​​​ಸಿಬಿಗೆ ಜಸ್ಪ್ರೀತ್​ ಬುಮ್ರಾ ಎಂಟ್ರಿ!​​

author-image
Ganesh Nachikethu
Updated On
ಬೂಮ್ರಾ ಮೇಲೆ ಪ್ರೀತಿಯ ಬಾಣ ಎಸೆದ ಬಾಲಿವುಡ್ ಬ್ಯೂಟಿ.. ಯಾರ್ಕರ್ ಕಿಂಗ್​ಗೆ ಈಕೆ ಬೋಲ್ಡ್ ಆಗಿದ್ದೇಗೆ..?
Advertisment
  • 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಭಾರೀ ತಯಾರಿ
  • ರೀಟೈನ್​ ಪಾಲಿಸಿ ಬಗ್ಗೆ ಐಪಿಎಲ್​ ತಂಡಗಳ ಜತೆ ಬಿಸಿಸಿಐ ಚರ್ಚೆ
  • ಆರ್​​ಸಿಬಿ ಬೌಲಿಂಗ್​ ಸ್ಟ್ರಾಂಗ್​ ಮಾಡಲು ದಿನೇಶ್​ ಕಾರ್ತಿಕ್​ ಪ್ಲಾನ್​​​

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಈಗಿನಿಂದಲೇ ಭಾರೀ ತಯಾರಿ ನಡೆಯುತ್ತಿದೆ. ಮೂರು ವಾರಗಳ ಹಿಂದೆ ಬಿಸಿಸಿಐ ಅಧಿಕಾರಿಗಳು ರೀಟೈನ್​ ಪಾಲಿಸಿ ಬಗ್ಗೆ ಚರ್ಚೆ ಮಾಡಲು ಐಪಿಎಲ್​ ತಂಡಗಳ ಮಾಲೀಕರೊಂದಿಗೆ ಸಭೆ ನಡೆಸಿದ್ರು. ಸಭೆಯಲ್ಲಿ ಎಷ್ಟು ಜನರನ್ನು ರೀಟೈನ್​ ಮಾಡಿಕೊಳ್ಳಬೇಕು ಎಂಬ ಚರ್ಚೆ ನಡೆದಿತ್ತು. ಇದರ ಮಧ್ಯೆ ಜಸ್ಪ್ರೀತ್​ ಬುಮ್ರಾ ಮುಂಬೈ ಇಂಡಿಯನ್ಸ್​ ತೊರೆಯೋದು ಪಕ್ಕಾ ಆಗಿದೆ.

ಇನ್ನು, ಮುಂಬೈ ಇಂಡಿಯನ್ಸ್​ ತೊರೆದ ಬಳಿಕ ಬುಮ್ರಾ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಸೇರಲಿದ್ದಾರಾ? ಅನ್ನೋ ಚರ್ಚೆ ನಡೆಯುತ್ತಿದೆ. ಆರ್​​ಸಿಬಿ ತಂಡವೂ ಬೌಲಿಂಗ್​​ನಲ್ಲಿ ಭಾರೀ ವೀಕ್​​ ಆಗಿದ್ದು, ಬುಮ್ರಾ ಬಂದರೆ ಕಪ್​ ಗೆಲ್ಲಲು ಸಹಕಾರಿಯಾಗಲಿದೆ. ಹಾಗಾಗಿ ಮೆಗಾ ಆಕ್ಷನ್​​ನಲ್ಲಿ ಬುಮ್ರಾಗೆ ಆರ್​​ಸಿಬಿ ಬಿಡ್​ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಆರ್​​ಸಿಬಿ ಬ್ಯಾಟಿಂಗ್​ ಕೋಚ್​ ಮತ್ತು ಮೆಂಟರ್​​ ದಿನೇಶ್​ ಕಾರ್ತಿಕ್​ ಭಾರೀ ತಯಾರಿ ನಡೆಸಿದ್ದಾರೆ.

ಈ ಹಿಂದೆಯೇ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದರು. ಆಗ ತನ್ನ ಬದಲಿಗೆ ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ನೀಡಿದ್ದಕ್ಕಾಗಿ ಬುಮ್ರಾ ಅಸಮಾಧಾನ ಹೊರಹಾಕಿದ್ದರು. ಅದರಲ್ಲೂ ಬುಮ್ರಾ ಇನ್‌ಸ್ಟಾಗ್ರಾಂನಲ್ಲಿ "ಮೌನವು ಕೆಲವೊಮ್ಮೆ ಉತ್ತಮ ಉತ್ತರವಾಗಿದೆ" ಎಂದು ಸ್ಟೋರಿ ಹಾಕಿದ್ದು ಕ್ರಿಕೆಟ್​ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ಮುಂಬೈ ತೊರೆದು ಆರ್​​ಸಿಬಿಗೆ ಬುಮ್ರಾ..?

ಬುಮ್ರಾ ಮುಂಬೈ ಇಂಡಿಯನ್ಸ್ ತೊರೆಯುವುದು ಪಕ್ಕಾ ಆಗಿದೆ. ಗುಜರಾತ್ ಟೈಟನ್ಸ್ ಬುಮ್ರಾ ಅವರನ್ನು ಟ್ರೇಡ್ ಮೂಲಕ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿದೆ. ಇನ್ನೂ ಕೆಲವರು ಆರ್​ಸಿಬಿ ಟ್ರೇಡ್ ಮೂಲಕ ಬುಮ್ರಾರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು. ಇಲ್ಲದೆ ಹೋದಲ್ಲಿ ಮೆಗಾ ಆಕ್ಷನ್​ನಲ್ಲೂ ಖರೀದಿ ಮಾಡಬಹುದು ಎಂದು ಹೇಳಲಾಗುತ್ತಿದೆ. ಒಟ್ಟಾರೆ ಈ ಬಾರಿ ಐಪಿಎಲ್ ಹರಾಜಿಗೆ ಮುನ್ನವೇ ಸಾಕಷ್ಟು ಹೈಡ್ರಾಮ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment