/newsfirstlive-kannada/media/post_attachments/wp-content/uploads/2024/07/Kohli_Rohit_Shock.jpg)
ಶ್ರೀಲಂಕಾ ಪ್ರವಾಸದಲ್ಲಿ ಮುಖಭಂಗ ಅನುಭವಿಸಿದ ಬಳಿಕ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದೆ. ಮುಂಬರೋ ಬಾಂಗ್ಲಾದೇಶ ಸರಣಿಗೆ ಇನ್ನೂ ತಿಂಗಳಿಗೂ ಹೆಚ್ಚು ಕಾಲ ಅಂತರವಿದೆ. ಈ ಗ್ಯಾಪ್​ನಲ್ಲಿ ರೆಸ್ಟ್​ ಮಾಡೋ ಲೆಕ್ಕಾಚಾರದಲ್ಲಿದ್ದ ಆಟಗಾರರಿಗೆ ನಿರೀಕ್ಷೆಯಂತೆ ಹೊಸ ಟಾಸ್ಕ್​ ನೀಡಿದ್ದು ಟೀಮ್​ ಇಂಡಿಯಾದ ಖಾಯಂ ಸ್ಟಾರ್​ಗಳನ್ನ ದುಲೀಪ್​ ಟ್ರೋಫಿಯಲ್ಲಿ ಆಡಿಸಲು ಮುಂದಾಗಿದೆ.
ಬಹು ವರ್ಷಗಳ ಬಳಿಕ ಟೀಮ್​ ಇಂಡಿಯಾದ ಸ್ಟಾರ್​ಗಳಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಡೊಮೆಸ್ಟಿಕ್​ ಅಂಗಳಕ್ಕೆ ಮರಳ್ತಾರೆ ಎನ್ನಲಾಗಿತ್ತು. ಬಿಸಿಸಿಐ ಕೂಡ ಈ ಬಗ್ಗೆ ಸೂಚನೆ ನೀಡಿತ್ತು. ರೋಹಿತ್​-ಕೊಹ್ಲಿ ದುಲೀಪ್​ ಟ್ರೋಫಿಯಿಂದ ಹಿಂದೆ ಸರಿದಿದ್ದಾರೆ. ಇವ್ರ ಜೊತೆಗೆ ಸೀನಿಯರ್​ಗಳಾದ ಜಸ್​ಪ್ರಿತ್​ ಬೂಮ್ರಾ, ಆರ್​.ಅಶ್ವಿನ್​ ಕೂಡ ಈ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಬಿಗ್​ಬಾಸ್​ಗಳ ಜೊತೆ ಸಭೆ ನಡೆಸಿದ್ದ ಕೋಚ್​ ಗೌತಮ್​​ ಗಂಭೀರ್​​, ಚೀಫ್​ ಸೆಲೆಕ್ಟರ್​ ಅಜಿತ್​ ಅಗರ್ಕರ್​ ಮುಂಬರೋ ಟೆಸ್ಟ್​ ಸರಣಿಗಳ ಸಿದ್ಧತೆಯ ಬಗ್ಗೆ ಚರ್ಚಿಸಿದ್ದರು. ಸಿದ್ಧತೆಯ ಭಾಗವಾಗಿ ದುಲೀಪ್​ ಟ್ರೋಫಿಯಲ್ಲಿ ಸ್ಟಾರ್​ ಆಟಗಾರರನ್ನ ಆಡಿಸೋ ನಿರ್ಧಾರ ಮಾಡಿದ್ದರು. ಸೆಪ್ಟೆಂಬರ್​ 5 ರಿಂದ ಆರಂಭವಾಗೋ ಟೂರ್ನಿಗೆ ಅಜಿತ್​ ಅಗರ್ಕರ್​ ನೇತೃತ್ವದ ಸೆಲೆಕ್ಷನ್​ ಕಮಿಟಿ ಟೀಮ್​ ಅನೌನ್ಸ್​ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ