/newsfirstlive-kannada/media/post_attachments/wp-content/uploads/2024/06/bhumrah-1.jpg)
ಟೀಮ್ ಇಂಡಿಯಾಗೆ ಸೂಪರ್-8 ಟಿಕೆಟ್ ಖಚಿತವಾಗಿದೆ. ವೇಗದ ಬೌಲಿಂಗ್ ಅನ್ನೇ ಹೆಚ್ಚು ನಂಬಿಕೊಂಡಿದೆ. ಆದ್ರಲ್ಲೂ ಜಸ್ಪ್ರೀತ್ ಬೂಮ್ರಾ ಮೇಲೆ ಅಪಾರ ನಿರೀಕ್ಷೆಗಳಿವೆ. ಆ ಭರವಸೆಯನ್ನು ಸ್ಟಾರ್ ಬೌಲರ್ ಉಳಿಸಿಕೊಂಡೇ ಉಳಿಸಿಕೊಳ್ತಾರೆ.
ಬೆಂಕಿ ಬೌಲಿಂಗ್ ನಿಶ್ಚಿತ.. ಎದುರಾಳಿಗೆ ಪುಕಪುಕ..!
ಹ್ಯಾಟ್ರಿಕ್ ವಿಕ್ಟರಿ ಸಾಧಿಸಿರೋ ಟೀಮ್ ಇಂಡಿಯಾ ಇಂದು ಟಿ20 ವಿಶ್ವಕಪ್ನಲ್ಲಿ ಕೆನಡಾ ವಿರುದ್ಧ ಸೆಣಸಾಡಲಿದೆ. ಈಗಾಗ್ಲೆ ರೋಹಿತ್ ಶರ್ಮಾ ಅಂಡ್ ಗ್ಯಾಂಗ್ ಸೂಪರ್-8 ಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದೆ. ಇವತ್ತಿನ ಪಂದ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹೀಗಾಗಿ ಟೀಮ್ ಇಂಡಿಯಾದ ಫುಲ್ ಫೋಕಸ್ ಈಗ ಸೂಪರ್-8 ಕಡೆ ಶಿಫ್ಟ್ ಆಗಿದೆ. ಈ ಹಂತದಲ್ಲಿ ಬಲಿಷ್ಠ ತಂಡಗಳನ್ನ ಎದುರಿಸಬೇಕಿದ್ದು, ವೇಗಿ ಜಸ್ಪ್ರೀತ್ ಬೂಮ್ರಾ ಸೂಪರ್-8 ರಲ್ಲಿ ಸೂಪರ್ ಪರ್ಫಾಮೆನ್ಸ್ ನೀಡಿ ಕಿಂಗ್ ಆಗಿ ಮೆರೆದಾಡುವ ಇರಾದೆಯಲ್ಲಿದ್ದಾರೆ.
ಇದನ್ನೂ ಓದಿ:ಕೊಹ್ಲಿ ಬದಲಾವಣೆ ತಂಡಕ್ಕೆ ಅನಿವಾರ್ಯ.. ಕೈಸುಟ್ಟುಕೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಸಿಸಿಐ..!
ಸೂಪರ್-8ನಲ್ಲಿ ಮ್ಯಾಚ್ ವಿನ್ನರ್ ಬೂಮ್ರಾ ಮೇಲೆ ಅಪಾರ ನಿರೀಕ್ಷೆಗಳಿವೆ. ಶರವೇಗಿಯ ಬೆಂಕಿ ದಾಳಿಗೆ ಎದುರಾಳಿ ಸುಟ್ಟು ಹೋಗುವುದು ನಿಶ್ಚಿತ. ಬೂಮ್ರಾ ಬಾಲ್ ಅನ್ನೋ ಅಸ್ತ್ರ ಹಿಡಿದ್ರೆ ಸಾಕು, ಎಂತಹ ಬ್ಯಾಟರ್ ಆದ್ರೂ ಸೈ ಥಂಡಾ ಹೊಡಿಬೇಕು. ಅಂತಹ ಡೇಂಜರಸ್ ಬೌಲರ್ ಈ ಬೂಮ್ರಾ. ಸೂಪರ್-8 ಆ ಜಬರ್ದಸ್ತ್ ಪರ್ಫಾಮೆನ್ಸ್ ಮೂಡಿ ಬರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈ ಕಾನ್ಫಿಡೆಂಟ್ಸ್ಗೆ ಕಾರಣ ಈ ಅದ್ಭುತ ಅಂಕಿ-ಅಂಶಗಳು..!
2024ರಲ್ಲಿ ಜಸ್ಪ್ರೀತ್ ಬೂಮ್ರಾ..!
ಈ ವರ್ಷ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಜಸ್ಪ್ರೀತ್ ಬೂಮ್ರಾ ಪವರ್ಪ್ಲೇನಲ್ಲಿ ಶೇಕಡ 41 ರಷ್ಟು ಬೌಲಿಂಗ್ ಮಾಡಿದ್ದು, 7 ವಿಕೆಟ್ ಬೇಟೆಯಾಡಿದ್ದಾರೆ. 5.6 ಬೌಲಿಂಗ್ ಎಕಾನಮಿ ಕಾಯ್ದುಕೊಂಡಿದ್ದಾರೆ. ಮಿಡಲ್ ಓವರ್ಗಳಾದ 7 ರಿಂದ 15 ರ ತನಕ ಶೇಕಡ 29 ರಷ್ಟು ಬೌಲಿಂಗ್ ಮಾಡಿದ್ದು 6 ವಿಕೆಟ್ ಪಡೆದಿದ್ದಾರೆ. 6.5 ಬೌಲಿಂಗ್ ಎಕಾನಮಿ ಆಗಿದೆ. ಡೆತ್ ಓವರ್ಗಳಾದ 16 ರಿಂದ 20 ರಲ್ಲಿ 30 ಪರ್ಸಂಟ್ ಬೌಲಿಂಗ್ ನಡೆಸಿದ್ದು, 6.2 ಎಕಾನಮಿಯಲ್ಲಿ 12 ವಿಕೆಟ್ ಕಬಳಿಸಿದ್ದಾರೆ.
ಇದನ್ನೂ ಓದಿ:‘ಅವರಣ್ಣ ಉಂಟು, ಅವನುಂಟು.. ನಾವು ತಲೆನೇ ಕೆಡಿಸಿಕೊಳ್ಳಲ್ಲ’ ಆರೋಪಿ ಪವನ್ ತಂದೆ ಅಚ್ಚರಿ ಹೇಳಿಕೆ
ಕರಿಬಿಯನ್ನರ ನಾಡಲ್ಲಿ ಖದರ್ ತೋರಿಸ್ತಾರಾ?
ಬೆಂಕಿ ಬೌಲರ್ ಬೂಮ್ರಾ ಈ ವರ್ಷಪೂರ್ತಿ ಅದ್ಭುತ ಪ್ರದರ್ಶನ ನೀಡಿ ಸೈ ಅನ್ನಿಸಿಕೊಂಡಿದ್ದಾರೆ. ಕೆರಿಬಿಯನ್ನರ ನಾಡಲ್ಲಿ ಇದನ್ನು ರಿಪೀಟ್ ಮಾಡುವ ಉತ್ಸುಕದಲ್ಲಿದ್ದಾರೆ. ಸೂಪರ್-8 ಪಂದ್ಯಗಳು ಇಲ್ಲೆ ನಡೆಯಲಿವೆ. ಬೂಮ್ರಾ ಬೌಲಿಂಗ್ಗೆ ಇಲ್ಲಿ ಕಂಡಿಷನ್ ಸಖತ್ ಸೂಟ್ ಆಗುತ್ತೆ. ಸ್ಲೋ, ಕಟ್ಟರ್, ಸ್ವಿಂಗ್ ಅಂಡ್ ಸೀಮ್ ಮೂಲಕ ಎದುರಾಳಿಯ ನಿದ್ದೆಗೆಡಿಸಬಹುದು. ಜೊತೆಗೆ ತಮ್ಮ ಅಪಾರ ಅನುಭವ ಬಳಸಿ, ವಿಂಡೀಸ್ನಲ್ಲಿ ವಿಜೃಂಭಿಸಲು ಎದುರು ನೋಡ್ತಿದ್ದಾರೆ.
ಬೂಮ್ರಾ ಮಿಂಚಿದ್ರೆ ಭಾರತಕ್ಕೆ T20 ವಿಶ್ವಕಪ್ ಮಿಸ್ಸಾಗಲ್ಲ..!
20007ರ ಚೊಚ್ಚಲ ಟಿ20 ವಿಶ್ವಕಪ್ ಕೊನೆ. ಆ ಬಳಿಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಜಯಿಸಿಲ್ಲ. ಮ್ಯಾಜಿಕಲ್ ಬೌಲರ್ ಬೂಮ್ರಾ ಮನಸ್ಸು ಮಾಡಿದ್ರೆ ಈ ಸಲ ಕಪ್ ವನವಾಸಕ್ಕೆ ತೆರೆ ಬೀಳಲಿದೆ. ಬೂಮ್ರಾಗೆ ಆ ಕೆಪಾಸಿಟಿ ಇದೆ. ಯಾಕಂದ್ರೆ ಬೂಮ್ರಾ ಸೂಪರ್ ಸ್ಟಾರ್ ಬೌಲರ್. ಡೆಡ್ಲಿ ಸ್ಪೆಲ್ ನಡೆಸಿ ಟ್ರೋಫಿ ಗೆಲ್ಲಿಸಿಕೊಡುವ ತಾಕತ್ತು ಹಾಗೂ ಕೌಶಲ್ಯ ಅವರಲ್ಲಿದೆ.
ಇದನ್ನೂ ಓದಿ:36 ಗಂಟೆ.. 13 ಅಧಿಕಾರಿಗಳು.. ರೋಚಕ.. ಸಿನಿಮಾವನ್ನೂ ಮೀರಿಸಿದ ‘ಆಪರೇಷನ್ ಡಿ’..!'
ಬೂಮ್ರಾ ಕ್ಯಾಪ್ಟನ್ ರೋಹಿತ್ ನಂಬಿಗಸ್ಥ ಬೌಲರ್
ಸ್ಟಾರ್ ಬೌಲರ್ ಬೂಮ್ರಾ ಕ್ಯಾಪ್ಟನ್ ರೋಹಿತ್ರ ನಂಬಿಗಸ್ಥ ಬೌಲರ್. ಸಂಕಷ್ಟ ಅಂತ ಬಂತು ಬೂಮ್ರಾ ಕೈಗೆ ಬಾಲ್ ನೀಡಿದಾಗಲೆಲ್ಲಾ ವಿಕೆಟ್ ಪಡೆದು ಬ್ರೇಕ್ ಥ್ರೂ ತಂದುಕೊಡ್ತಾರೆ. ಆದ್ರಲ್ಲೂ ಐಸಿಸಿ ಯಂತಹ ಗ್ಲೋಬಲ್ ಈವೆಂಟ್ನಲ್ಲಂತೂ ಬೂಮ್ರಾ ಇನ್ನು ಡೇಂಜರಸ್. ಅಗತ್ಯ ಬಿದ್ದಾಗಲೆಲ್ಲಾ ವಿಕೆಟ್ ಪಡೆದು ಸೇವಿಯರ್ ಅನ್ನಿಸಿಕೊಳ್ತಾರೆ. ಇಂತಹ ಮ್ಯಾಚ್ ವಿನ್ನಿಂಗ್ ಬೌಲರ್ ಮೇಲೆ ಇದೀಗ ಸೂಪರ್-8ನಲ್ಲಿ ಅಂತಹದೇ ಭರವಸೆ ಇದೆ. ಬೆಂಕಿ ಬಿರುಗಾಳಿ ಬೌಲರ್ ತಮ್ಮ ಅನುಭವ ಬಳಸಿ ಕರಿಬಿಯನ್ನರ ನಾಡಲ್ಲಿ ಕರಾರುವಕ್ ದಾಳಿ ನಡೆಸಲಿ. ಆ ಮೂಲಕ ಭಾರತಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟ ಚಾಂಪಿಯನ್ ಹಮ್ಮೀರ ಅನ್ನಿಸಿಕೊಳ್ಳುವಂತಾಗಲಿ.
ಇದನ್ನೂ ಓದಿ:ಟೀಂ ಇಂಡಿಯಾ ಸೋಲೇ ಇಲ್ಲದೇ ಮುನ್ನುಗ್ತಿದ್ದರೂ ಫ್ಯಾನ್ಸ್ಗೆ ಭಾರೀ ಬೇಸರ.. ಅದಕ್ಕೆಲ್ಲ ಕಾರಣ ಈತ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್