/newsfirstlive-kannada/media/post_attachments/wp-content/uploads/2024/12/Jasprit_Bumrah_ROHIT.jpg)
ಆಸ್ಟ್ರೇಲಿಯಾ ಜೊತೆ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ 4ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. 184 ರನ್ಗಳ ಅಂತರದಿಂದ ರೋಹಿತ್ ಶರ್ಮಾ ಪಡೆ ಆಸಿಸ್ಗೆ ತಲೆ ಬಾಗಿದೆ. ಆದರೆ ಈ ಸರಣಿಯಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾ ಅವರು ವಿಶೇಷ ದಾಖಲೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಪಾಕ್ನ ಮಾಜಿ ವೇಗಿ ದಾಖಲೆಯನ್ನ ಉಡೀಸ್ ಮಾಡಿದ್ದಾರೆ.
ಕ್ರಿಕೆಟ್‌ನಲ್ಲಿ ವಿಶ್ವದ ವೇಗದ ಬೌಲರ್ ಎಂದೇ ಒಂದು ಸಮಯದಲ್ಲಿ ಖ್ಯಾತಿ ಪಡೆದಿದ್ದ ಶೋಯೆಬ್ ಅಖ್ತರ್ ಅವರು 12 ಬಾರಿ ಐದೈದು ವಿಕೆಟ್‌ಗಳ ಕಬಳಿಸಿ ಮುಂದಿದ್ದರು. ಆದರೆ ಈ ರೆಕಾರ್ಡ್ ಅನ್ನು ಮುಂಬೈಕರ್, ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾ ಬ್ರೇಕ್ ಮಾಡಿ, ಇತಿಹಾಸ ಬರೆದಿದ್ದು, ಅಖ್ತರ್ನ ಆ ಸ್ಥಾನವನ್ನು ಅಲಂಕರಿಸಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ನ 2ನೇ ಇನ್ನಿಂಗ್ಸ್ನಲ್ಲಿ 57 ರನ್ ನೀಡಿ 5 ವಿಕೆಟ್‌ಗಳನ್ನು ಉರುಳಿಸಿದರು. ಈ ಮೂಲಕ ಬೂಮ್ರಾ ಒಟ್ಟು 13 ಬಾರಿ ಐದು ವಿಕೆಟ್ ಗಳಿಕೆಯೊಂದಿಗೆ ಪಾಕ್ನ ಮಾಜಿ ವೇಗಿಯ ದಾಖಲೆಯನ್ನು ಹಿಂದಿಕ್ಕಿದರು. ಶೋಯೆಬ್ ಅಖ್ತರ್ ಮಾತ್ರವಲ್ಲ ಇವರ ಜೊತೆ ಶ್ರೀಲಂಕಾದ ಚಮಿಂದಾ ವಾಸ್ ಮತ್ತು ಆಸ್ಟ್ರೇಲಿಯಾದ ಮಿಚೆಲ್ ಜಾನ್ಸನ್ರ ರೆಕಾರ್ಡ್ ಕೂಡ ಬ್ರೇಕ್ ಮಾಡಿದರು. ಆಸ್ಟ್ರೇಲಿಯಾ ವಿರುದ್ಧ ಇಂತಹ ಸಾಧನೆ ಮಾಡಿರುವುದು ವಿಶೇಷ ಎನಿಸಿದೆ.
ಬೂಮ್ರಾ ಅವರು 2024ರ ಸಾಲಿನಲ್ಲಿ 13 ಟೆಸ್ಟ್ಗಳನ್ನು ಆಡಿದ್ದು ಒಟ್ಟು 71 ವಿಕೆಟ್‌ಗಳನ್ನು ತೆಗೆದುಕೊಂಡಿದ್ದಾರೆ. ಬೌಲಿಂಗ್ನಲ್ಲಿ 14.92 ಸರಾಸರಿ ಹೊಂದಿದ್ದು 30.1 ಸ್ಟ್ರೈಕ್ ರೇಟ್ನಲ್ಲಿ ಬೂಮ್ರಾ ಇದ್ದಾರೆ. ಇನ್ನೊಂದು ವಿಶೇಷ ಎಂದರೆ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಇನ್ನೊಂದು ಮ್ಯಾಚ್ ಬಾಕಿ ಇರುವಾಗಲೇ 30 ವಿಕೆಟ್‌ಗಳನ್ನು ಗಳಿಸಿರುವುದು ಬೂಮ್ರಾರ ಮತ್ತೊಂದು ಸಾಧನೆ ಆಗಿದೆ.
ಇದನ್ನೂ ಓದಿ: ಶಾಪವಾದ 3ನೇ ಅಂಪೈರ್.. ಯಶಸ್ವಿ ಜೈಸ್ವಾಲ್ ಔಟ್ಗೆ BCCI, ಅಭಿಮಾನಿಗಳು ಆಕ್ರೋಶ
- ಬೂಮ್ರಾ ಕೇವಲ 44 ಟೆಸ್ಟ್‌ಗಳಲ್ಲಿ 203 ವಿಕೆಟ್‌ಗಳನ್ನು ಉರುಳಿಸಿದ್ದಾರೆ
- ಅಖ್ತರ್ ತಮ್ಮ ವೃತ್ತಿಜೀವನದಲ್ಲಿ 46 ಪಂದ್ಯಗಳಲ್ಲಿ 178 ವಿಕೆಟ್ ಪಡೆದಿದ್ದರು
- ಆಸ್ಟ್ರೇಲಿಯಾ ವಿರುದ್ಧ ನಡೆದ 4ನೇ ಟೆಸ್ಟ್ನಲ್ಲಿ ಬೂಮ್ರಾ ಸಾಧನೆ ಮಾಡಿದರು
- ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 4 ಪಂದ್ಯಗಳಿಗೆ 30 ವಿಕೆಟ್ ಗಳಿಸಿದ್ದಾರೆ
- ಬೂಮ್ರಾ ಆಡಿರುವ 44 ಪಂದ್ಯಗಳಲ್ಲಿ 203 ವಿಕೆಟ್ ತೆಗೆದುಕೊಂಡಿದ್ದಾರೆ
- ಇನ್ನಿಂಗ್ಸ್ನಲ್ಲಿ ಬೆಸ್ಟ್ ಎಂದರೆ- 27 ರನ್ಗೆ 6 ವಿಕೆಟ್ ಕಬಳಿಸಿರುವುದು
- ಪಂದ್ಯದಲ್ಲಿ ಬೆಸ್ಟ್ ಎಂದರೆ- 86 ರನ್ಗೆ 9 ವಿಕೆಟ್ ಉರುಳಿಸಿರುವುದು
- 13 ಬಾರಿ ಐದು ಐದು ವಿಕೆಟ್‌ಗಳನ್ನು ತೆಗೆದುಕೊಂಡು ಸಾಧನೆ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ