newsfirstkannada.com

RCBvsMI: ಇಂದು ದಾಖಲೆ ಬರೆಯಲು ರೆಡಿಯಾಗಿದ್ದ ಕೊಹ್ಲಿಗೆ ಶನಿಯಂತೆ ಕಾಡಿದ ಬೂಮ್ರಾ! ಫ್ಯಾನ್ಸ್​ಗೆ ಬೇಸರ

Share :

Published April 11, 2024 at 8:55pm

    ಬೂಮ್ರಾ ಎಸೆತಕ್ಕೆ ಕೊಹ್ಲಿ ಔಟ್​.. ಫ್ಯಾನ್ಸ್​ ನಿರೀಕ್ಷೆ ಹುಸಿ

    ಸೊನ್ನೆ ಸುತ್ತಿದ ಮ್ಯಾಕ್​ವೆಲ್​ ಆಟಕ್ಕೆ ಕೋಪಗೊಂಡ ಫ್ಯಾನ್ಸ್

    ದಾಖಲೆ ಬರೆಯಲು ರೆಡಿಯಾಗಿ ಬಂದಿದ್ದ ಕಿಂಗ್​ ಕೊಹ್ಲಿ

RCBvsMI: ಟಾಸ್​​ ಗೆದ್ದ ಆರ್​ಸಿಬಿ ಬ್ಯಾಟಿಂಗ್​ ಆಯ್ದುಕೊಂಡಿತಾದರು ನಾಯಕ ಫಾಫ್​ ಡು ಪ್ಲೇಸಿಸ್​ ಜೊತೆಗೆ ಮೊದಲು ಬ್ಯಾಟಿಂಗ್​ಗೆ ಇಳಿದ ಕೊಹ್ಲಿ ಮಾತ್ರ ಆರಂಭದಲ್ಲೇ ನಿರಾಸೆ ಮೂಡಿಸಿದರು. 9 ಎಸೆತಕ್ಕೆ 3 ರನ್​ ಬಾರಿಸಿ ಜಸ್ಟ್ರೀತ್ ಬೂಮ್ರಾ ಎಸೆತಕ್ಕೆ ಕೀಪರ್​ ಕ್ಯಾಚ್​ ನೀಡಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ಇಂದು ಕೊಹ್ಲಿ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತಾದರೂ ಬೂಮ್ರಾ ಅದನ್ನು ಅಡ್ಡಗಟ್ಟಿದ್ದಾರೆ. ತನ್ನ ಮೊದಲ ಓವರ್​ನಲ್ಲೇ ಕೊಹ್ಲಿಯ ವಿಕೆಟ್​ ತೆಗೆಯುವ ಮೂಲಕ ಸಂಭ್ರಮಿಸಿದ್ದಾರೆ.

ಮತ್ತೊಂದೆಡೆ ಕೊಹ್ಲಿ ಹೆಸರನ್ನಿಟ್ಟುಕೊಂಡು ಆರ್​ಸಿಬಿ ಅಭಿಮಾನಿಗಳು ಇಂದು ಹಲವು ವಿಚಾರಗಳಿಗೆ ಸಂಭ್ರಮಿಸಲು ಅವಕಾಶವಿತ್ತು. ಕೆಲವೊಂದು ದಾಖಲೆಯನ್ನು ಕೊಹ್ಲಿ ಬರೆಯಲಿದ್ದಾರೆ ಎಂಬ ಕನಸು ಕಂಡಿದ್ದರು. ಆದರೆ ಬೂಮ್ರಾ ದಾಳಿಗೆ ಕೊಹ್ಲಿ ವಿಕೆಟ್​ ಒಪ್ಪಿಸಿದರು.

ಇನ್ನು ಕೊಹ್ಲಿ ಬಳಿಕ ಬಂದ ವಿಲ್​ ಜಾಕ್ಸ್​ ಕೂಡ ನಿರೀಕ್ಷೆಯಾಟವಾಡಲಿಲ್ಲ. 6 ಎಸೆತದಲ್ಲಿ 2 ಬೌಂಡರಿ ಬಾರಿಸಿ 8 ರನ್​ ಕಲೆ ಹಾಕಿದರು.

ಸೊನ್ನೆ ಸುತ್ತಿದ ಮ್ಯಾಕ್ಸ್​ವೆಲ್​

ಮ್ಯಾಕ್ಸ್​ವೆಲ್​ ಸಾಧಾರಣ ಆಟಗಾರನಂತೂ ಅಲ್ವೇ ಅಲ್ಲ. ಆದರೆ ಇದುವರೆಗಿನ ಆರ್​ಸಿಬಿ ಪಂದ್ಯದಲ್ಲಿ ಮ್ಯಾಕ್ಸ್​ವೆಲ್​ ಮಾತ್ರ ನಿರೀಕ್ಷೆಯ ಆಟವನ್ನು ಇದುವರೆಗೆ ಆಡಿಲ್ಲ. ಇಂದು ಕೂಡ ಮುಂಬೈ ವಿರುದ್ಧ 4 ಎಸೆತ ಎದುರಿಸಿ ಸೊನ್ನೆ ಸುತ್ತಿ ಪೆವಿಲಿಯನತ್ತ ಸಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCBvsMI: ಇಂದು ದಾಖಲೆ ಬರೆಯಲು ರೆಡಿಯಾಗಿದ್ದ ಕೊಹ್ಲಿಗೆ ಶನಿಯಂತೆ ಕಾಡಿದ ಬೂಮ್ರಾ! ಫ್ಯಾನ್ಸ್​ಗೆ ಬೇಸರ

https://newsfirstlive.com/wp-content/uploads/2024/04/Kohli-4.jpg

Load More