newsfirstkannada.com

ಟೀಮ್​ ಇಂಡಿಯಾಗೆ ಬಿಗ್​ ಶಾಕ್​​; 3ನೇ ಟೆಸ್ಟ್​​​ನಿಂದ ಸ್ಟಾರ್​​ ವೇಗಿ ಬುಮ್ರಾ ಔಟ್​? ಕಾರಣವೇನು?

Share :

Published February 5, 2024 at 7:23pm

    ಫೆ. 15ರಿಂದ ಇಂಗ್ಲೆಂಡ್​​​, ಟೀಮ್​ ಇಂಡಿಯಾ ನಡುವಿನ 3ನೇ ಟೆಸ್ಟ್​​

    ಕೊಹ್ಲಿ ಬೆನ್ನಲ್ಲೇ ಟೀಮ್​ ಇಂಡಿಯಾಗೆ ಕೈಕೊಟ್ಟ ಸ್ಟಾರ್​​ ಪ್ಲೇಯರ್​​

    3ನೇ ಟೆಸ್ಟ್​​ನಿಂದ ಸ್ಟಾರ್ ಆಟಗಾರನಿಗೆ ಫುಲ್​ ರೆಸ್ಟ್​ ಕೊಟ್ಟ ಬಿಸಿಸಿಐ

ವಿಶಾಖಪಟ್ಟಣದ ವೈ.ಎಸ್ ರಾಜಶೇಖರ್ ರೆಡ್ಡಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ 2ನೇ ಟೆಸ್ಟ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್​ ಇಂಡಿಯಾ 106 ರನ್​​ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಮೊದಲ ಪಂದ್ಯದ ಸೋಲಿಗೆ ಪ್ರತೀಕಾರ ತೀರಿಸಿಕೊಂಡಿದೆ.

ಇನ್ನು, ರಾಜಕೋಟ್​​ನಲ್ಲಿರೋ ಸೌರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​​ ಸ್ಟೇಡಿಯಮ್​ನಲ್ಲಿ ಫೆಬ್ರವರಿ 15ನೇ ತಾರೀಕಿನಿಂದ ಇಂಗ್ಲೆಂಡ್​​​, ಟೀಮ್​ ಇಂಡಿಯಾ ನಡುವಿನ 3ನೇ ಟೆಸ್ಟ್​​ ಶುರುವಾಗಲಿದೆ. ಆದರೆ, ಇನ್ನೂ ಉಳಿದ 3 ಟೆಸ್ಟ್​​ಗಳಿಗೆ ಟೀಮ್​ ಇಂಡಿಯಾ ಪ್ರಕಟವಾಗಿಲ್ಲ. ಈ ಮಧ್ಯೆ ಟೀಮ್​ ಇಂಡಿಯಾಗೆ ವಿರಾಟ್​ ಕೊಹ್ಲಿ ಬಿಗ್​ ಶಾಕ್​ ಕೊಟ್ಟಿದ್ದರು. ಕೊಹ್ಲಿ ಜತೆಗೆ ಇಬ್ಬರು ಸ್ಟಾರ್​ ಆಟಗಾರರು ಅಲಭ್ಯರಾಗಿದ್ದಾರೆ.

ಹೌದು, ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್​​ಗೆ ವೇಗಿ ಮೊಹಮ್ಮದ್ ಶಮಿ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಮರಳುವ ಸಾಧ್ಯತೆ ಕಡಿಮೆ ಇದೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಅನುಭವಿಸಿದ ಪಾದದ ಗಾಯದಿಂದ ಇನ್ನೂ ಮೊಹಮ್ಮದ್ ಶಮಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಮೊದಲ ಟೆಸ್ಟ್ ಪಂದ್ಯದ ವೇಳೆ ರವೀಂದ್ರ ಜಡೇಜಾ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು. ಇವರು ಕೂಡ ರೆಸ್ಟ್​​ ಮಾಡುತ್ತಿದ್ದಾರೆ.

ಬುಮ್ರಾ ಕೂಡ ಅಲಭ್ಯ

ಈ ಮಧ್ಯೆ 2ನೇ ಟೆಸ್ಟ್​​ನಲ್ಲಿ ಬರೋಬ್ಬರಿ 9 ವಿಕೆಟ್​​ ಪಡೆದಿದ್ದ ಸ್ಟಾರ್​ ವೇಗಿ ಬುಮ್ರಾಗೆ ರೆಸ್ಟ್​ ನೀಡಲಾಗಿದೆ ಎಂದು ತಿಳಿದು ಬಂದಿದೆ. 4 ಮತ್ತು 5ನೇ ಟೆಸ್ಟ್​​ಗೆ ಬುಮ್ರಾ ಬೇಕು ಬೇಕಿದ್ದು, ಮುಂದಿನ ಪಂದ್ಯಕ್ಕೆ ರೆಸ್ಟ್​ ಕೊಡಲಾಗಿದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಮ್​ ಇಂಡಿಯಾಗೆ ಬಿಗ್​ ಶಾಕ್​​; 3ನೇ ಟೆಸ್ಟ್​​​ನಿಂದ ಸ್ಟಾರ್​​ ವೇಗಿ ಬುಮ್ರಾ ಔಟ್​? ಕಾರಣವೇನು?

https://newsfirstlive.com/wp-content/uploads/2024/02/Bumrah-1.jpg

Load More