SENA ದೇಶಗಳ ವಿರುದ್ಧ ಬೂಮ್ರಾ ವಿಶೇಷ ದಾಖಲೆ.. ರೆಕಾರ್ಡ್​ ಬ್ರೇಕ್​ ಮಾಡಿದ ಯಾರ್ಕರ್ ಸ್ಪೆಷಲಿಸ್ಟ್!

author-image
Bheemappa
Updated On
SENA ದೇಶಗಳ ವಿರುದ್ಧ ಬೂಮ್ರಾ ವಿಶೇಷ ದಾಖಲೆ.. ರೆಕಾರ್ಡ್​ ಬ್ರೇಕ್​ ಮಾಡಿದ ಯಾರ್ಕರ್ ಸ್ಪೆಷಲಿಸ್ಟ್!
Advertisment
  • ಇನ್ನಿಂಗ್ಸ್​ನಲ್ಲಿ ಬೂಮ್ರಾ ಬೌಲಿಂಗ್​ನಲ್ಲಿ ಮೂವರು ಕ್ಲೀನ್ ಬೋಲ್ಡ್
  • ಸೇನಾ ದೇಶಗಳ ವಿರುದ್ಧ ವಿಶೇಷವಾದ ದಾಖಲೆ ಮಾಡಿದ ಬೌಲರ್​
  • ಇಂಗ್ಲೆಂಡ್​ ವಿರುದ್ಧ 5 ವಿಕೆಟ್​ಗಳ ಗೊಂಚಲು ಪಡೆದಿರುವ ಬೂಮ್ರಾ

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್​ ಜಸ್​ಪ್ರಿತ್ ಬೂಮ್ರಾ ಅವರು ವಿಷೇಶವಾದ ರೆಕಾರ್ಡ್ ಬ್ರೇಕ್ ಮಾಡಿದರು. ಸೇನಾ ದೇಶಗಳ ವಿರುದ್ಧ ಅತಿ ಹೆಚ್ಚು ವಿಕೆಟ್​ ಪಡೆದ ಖ್ಯಾತಿಗೆ ಬೂಮ್ರಾ ಪಾತ್ರರಾಗಿದ್ದಾರೆ. ಜೊತೆಗೆ ಹಲವು ದಾಖಲೆಗೆ ಕಾರಣರಾಗಿದ್ದಾರೆ.

ಮೊದಲ ಇನ್ನಿಂಗ್ಸ್‌ನ ಮೊದಲ ಓವರ್​ ಕೊನೆ ಎಸೆತದಲ್ಲೇ ಬೂಮ್ರಾ, ಇಂಗ್ಲೆಂಡ್​ ಓಪನರ್​ ಜ್ಯಾಕ್ ಕ್ರಾಲಿಗೆ ಖೆಡ್ಡಾ ತೋಡಿದರು. ಇಲ್ಲಿಂದ ಆರಂಭವಾದ ಬೂಮ್ರಾ ಅವರ ವಿಕೆಟ್​ ರಣಬೇಟೆ ಬೆನ್​​ ಡಕೆಟ್​ ಅವರನ್ನು ಕ್ಲೀನ್ ಬೋಲ್ಡ್​ ಮಾಡಿದರು. ಇದಾದ ಮೇಲೆ ಜೋ ರೂಟ್​ರನ್ನು ಕೇವಲ 28 ರನ್​ಗೆ ಪೆವಿಲಿಯನ್​ಗೆ ಕಳಿಸಿದರು. ಕ್ರೀಸ್​ ಕಚ್ಚಿ ಬ್ಯಾಟ್​ ಬೀಸುತ್ತಿದ್ದ ಕ್ರಿಸ್​ ವೋಕ್ಸ್​ ಬೌಲ್ಡ್​ ಮಾಡಿದರು. ಜೋಶ್ ಟಂಗ್​ರನ್ನ ಬೋಲ್ಡ್​ ಮಾಡಿ ಸಂಭ್ರಮಿಸಿದರು.

ಬೂಮ್ರಾ ಒಂದೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ಗಳ ಗೊಂಚಲು ಪಡೆದರು. ಈ ಮೂಲಕ ಇಂಗ್ಲೆಂಡ್ ವಿರುದ್ಧ 3 ಬಾರಿ ಇದೇ ರೀತಿ 5 ವಿಕೆಟ್​ಗಳ ಗೊಂಚಲು ಪಡೆದಿರುವುದು ದಾಖಲೆ ಎನಿಸಿದೆ. ಇನ್ನೊಂದು ವಿಶೇಷ ಎಂದರೆ ಮೂವರು ಬ್ಯಾಟರ್ಸ್​ ಅನ್ನು ಕ್ಲೀನ್​ ಬೋಲ್ಡ್​ ಮಾಡಿದ್ದಾರೆ. ಸೇನಾ ದೇಶಗಳ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದವರು ಎನ್ನುವ ಖ್ಯಾತಿ ಬೂಮ್ರಾ ಪಡೆದಿದ್ದಾರೆ.

ಇದನ್ನೂ  ಓದಿ:RCBಗೆ ಟ್ರೋಫಿ ಗೆಲ್ಲಿಸಿಕೊಟ್ಟ ಖುಷಿಯಲ್ಲಿ ಮುಖ್ಯ ಕೋಚ್​ ಆ್ಯಂಡಿ ಫ್ಲವರ್ ಹೋಗಿದ್ದು ಎಲ್ಲಿಗೆ..?

publive-image

ಯಾರ್ಕರ್ ಸ್ಪೆಷಲಿಸ್ಟ್​ ಬೂಮ್ರಾ ಅವರು, SENA (S-ದಕ್ಷಿಣ ಆಫ್ರಿಕಾ, E- ಇಂಗ್ಲೆಂಡ್, N- ನ್ಯೂಜಿಲೆಂಡ್, A- ಆಸ್ಟ್ರೇಲಿಯಾ) ದೇಶಗಳಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಏಷ್ಯನ್ ಬೌಲರ್ ಎನಿಸಿಕೊಂಡರು. ಜೋ ರೂಟ್ ಅವರ ವಿಕೆಟ್ ಪಡೆಯುವ ಮೂಲಕ ಬುಮ್ರಾ ಈ ಮಹತ್ವದ ಸಾಧನೆ ಮಾಡಿದ್ದಾರೆ.

ಸೇನಾ ದೇಶಗಳ ವಿರುದ್ಧ ಪಾಕಿಸ್ತಾನದ ಬೌಲರ್ ವಾಸಿಮ್ ಅಕ್ರಮ್ ಇದುವರೆಗೆ 146 ವಿಕೆಟ್​ ಪಡೆದು ಮೊದಲ ಸ್ಥಾನದಲ್ಲಿ ಇದ್ದರು. ಆದರೆ ಇದೀಗ ಬೂಮ್ರಾ ಈ ದಾಖಲೆಯನ್ನು ಬ್ರೇಕ್ ಮಾಡಿದ್ದು ಒಟ್ಟು 147 ವಿಕೆಟ್​ ಪಡೆದು ಮೊದಲಿಗರು ಎನಿಸಿದ್ದಾರೆ. SENA ದೇಶಗಳಲ್ಲಿ 150 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಮೊದಲ ಏಷ್ಯನ್ ಬೌಲರ್ ಆಗುವ ಚಾನ್ಸ್ ಕೂಡ ಬೂಮ್ರಾ ಅವರಿಗೆ ಇದೆ. ಇದು ಸದ್ಯದಲ್ಲೇ ತಲುಪಬಹುದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment