newsfirstkannada.com

ಬೂಮ್ರಾ ಮ್ಯಾಜಿಕ್​ ಬೌಲಿಂಗ್​ಗೆ ಬ್ರಿಟಿಷರು ಸರ್ವಪತನ.. ದಾಖಲೆ ಬರೆದ ಯಾರ್ಕರ್ ಸ್ಪೆಷಲಿಸ್ಟ್​..!

Share :

Published February 4, 2024 at 11:13am

    ಟೆಸ್ಟ್​​ನ 2ನೇ ದಿನದಾಟದಲ್ಲಿ ಭಾರತೀಯರು ಬೌಲಿಂಗ್​ ಪರಾಕ್ರಮ

    ಮಾರಕ ಬೌಲಿಂಗ್ ಮಾಡಿದ ಬೂಮ್ರಾ ಎಷ್ಟು ವಿಕೆಟ್​ ಪಡೆದರು..?

    ಮೊದಲ ದಿನ ಬ್ಯಾಟಿಂಗ್ ಆರ್ಭಟ, 2ನೇ ದಿನ ಬೌಲಿಂಗ್ ದರ್ಬಾರ್

ವೈಜಾಗ್​​​ ಟೆಸ್ಟ್​ ಕಾಳಗದಲ್ಲಿ ಜಸ್​ಪ್ರೀತ್​ ಬೂಮ್ರಾ ಆಂಗ್ಲ ಬ್ಯಾಟ್ಸ್​​ಮನ್​ಗಳ ಬಾಲ ಕಟ್ ಮಾಡಿದ್ದಾರೆ. ಸ್ಟಾರ್ ವೇಗಿಯ ಘಾತಕ ದಾಳಿಗೆ ಸ್ಟೋಕ್ಸ್​ ಪಡೆಗೆ ಕಂಗಲಾಯ್ತು. ಸ್ಟಾರ್ ಬ್ಯಾಟ್ಸ್​​ಮನ್​ಗಳು ಬೂಮ್ರಾ ಬೆಂಕಿ ದಾಳಿಗೆ ಉತ್ತರವಿಲ್ಲದೇ ಪೆವಿಲಿಯನ್ ಸೇರಿದ್ರು.

45ಕ್ಕೆ 6 ವಿಕೆಟ್​​​..ಇಂಗ್ಲೆಂಡ್​​ ಕಂಪ್ಲೀಟ್ ಶೇಕ್​​​..

ಟೀಮ್ ಇಂಡಿಯಾ ವೈಜಾಗ್​ ಟೆಸ್ಟ್​ನಲ್ಲಿ 2ನೇ ದಿನವು ಪಾರಮ್ಯ ಮೆರೆದಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ ತಂಡವನ್ನ 253 ರನ್​ಗೆ ಕಟ್ಟಿಹಾಕ್ತು. ಜಸ್ಟ್​​ ನಾಲ್ಕುವರೆ ತಾಸಿನಲ್ಲಿ ಆಂಗ್ಲರು ಗಂಟುಮೂಟೆ ಕಟ್ಟಿದ್ರು. ಕಟ್ಟಿಸಿದ್ದು ಶಾರ್ಪ್​ ಆ್ಯಂಡ್​​​ ಪವರ್​ಫುಲ್​​​​​​ ವೆಪನ್​ ಜಸ್​ಪ್ರೀತ್ ಬೂಮ್ರಾ. ಡೆಡ್ಲಿ ದಾಳಿ ನಡೆಸಿದ ಯಾರ್ಕರ್ ಸ್ಪೆಷಲಿಸ್ಟ್ ಆಂಗ್ಲರನ್ನ ಗಿರಗಿಟ್ಲೆಯಂತೆ ಆಡಿಸಿದ್ರು.

ಅಕ್ಷರಶಃ ಬೆಂಕಿ ಉಗುಳಿದ ಬೂಮ್ರಾ 45 ರನ್​ಗೆ 6 ವಿಕೆಟ್ ಕಬಳಿಸಿ ಎದುರಾಳಿ ಬ್ಯಾಟಿಂಗ್ ಕೋಟೆಯನ್ನ ಛಿದ್ರಗೊಳಿಸಿದ್ರು. ಆ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ 150 ವಿಕೆಟ್ ಕ್ಲಬ್ ಸೇರಿದ್ರು. 34 ಪಂದ್ಯಗಳಲ್ಲಿ ಈ ಹಿಸ್ಟರಿಕ್ ಸಾಧನೆ ಮೂಡಿಬಂತು. ವೇಗವಾಗಿ 150 ವಿಕೆಟ್ ಪಡೆದ ವಿಶ್ವದ 3ನೇ ಹಾಗೂ ಭಾರತದ ಮೊದಲ ಬೌಲರ್​ ಅನ್ನಿಸಿಕೊಂಡ್ರು. ಹಾಗಾದ್ರೆ ವೈಜಾಗ್​​ನಲ್ಲಿ ಬೂಮ್ರಾ ಟಾಪ್​​​-6 ವಿಕೆಟ್ ಬೇಟೆ ಹೇಗಿತ್ತು ಅನ್ನೋದನ್ನ ಒನ್​ ಬೈ ಒನ್ ತೋರಿಸ್ತೀವಿ ನೋಡಿ.

ವಿಕೆಟ್ ನಂ.1 -ಪೋಪ್​ ಆರ್ಭಟಕ್ಕೆ ಬೂಮ್ರಾ ಪುಲ್​ಸ್ಟಾಪ್​​​​​

ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಭಾರತಕ್ಕೆ ಸೋಲಿನ ರುಚಿ ತೋರಿಸಿದ್ದ ಓಲಿ ಪೋಪ್​​​ ಆಟ ವೈಜಾಗ್​​​ನಲ್ಲಿ ನಡೀಲಿಲ್ಲ. 23 ರನ್ ಗಳಿಸಿದ್ದ ಪೋಪ್, ಬೂಮ್ರ ಹಾಕಿದ ಪರ್ಫೆಕ್ಷನ್​​​​ ಯಾರ್ಕರ್​​​ಗೆ ಕ್ಲೀನ್​​ ಬೌಲ್ಡ್​ ಆಗಿ ಹೊರನಡೆದ್ರು.

ವಿಕೆಟ್ ನಂ.2 -ಬೂಮ್ರಾಗೆ ತಲೆಬಾಗಿದ ಜೋ ರೂಟ್

ಭರವಸೆ ಬ್ಯಾಟ್ಸ್​​ಮನ್​​ ಜೋ ರೂಟ್​​​ ವೈಜಾಗ್​ನಲ್ಲಿ ವೈಲೆಂಟ್ ಆಗುವ ಸೂಚನೆ ನೀಡಿದ್ರು. ಆದ್ರೆ ಬೂಮ್ರಾ ಅದಕ್ಕೆ ಆಸ್ಪದ ನೀಡ್ಲಿಲ್ಲ. 5 ರನ್ ಗಳಿಸಿದ್ದಾಗ ಗಿಲ್​​ ಹಿಡಿದ ಅದ್ಭುತ ಕ್ಯಾಚ್​ಗೆ ರೂಟ್​​​​​​​​​​​​​​​​​​​​ ವಿಕೆಟ್ ಒಪ್ಪಿಸಿದ್ರು.

ವಿಕೆಟ್ ನಂ.3 -ಎರಡಂಕಿಗೆ ಜಾನಿ ಬೇಸ್ಟೋವ್​​ ಸುಸ್ತು

ಡೇಂಜರಸ್​​ ಜಾನಿ ಬೇಸ್ಟೋವ್​ 25 ರನ್ ಗಳಿಸಿ ಭಾರತಕ್ಕೆ ವಿಲನ್ ಆಗುವ ಸೂಚನೆ ನೀಡಿದ್ರು. ಆಗ ದಾಳಿಗಿಳಿದ ಬೂಮ್ರಾ ಜಾನಿ ಬೇಸ್ಟೋವ್​ಗೆ ಪೆವಿಲಿಯನ್ ದಾರಿ ತೋರಿಸಿದ್ರು.

ವಿಕೆಟ್ ನಂ.4 -ಸ್ಟೋಕ್ಸ್​ಗೆ ಸ್ಟ್ರೋಕ್​ ಕೊಟ್ಟ ಫೈರಿ ಬೌಲರ್

ಜಾನಿ ಬೇಸ್ಟೋವ್​​​ಗೆ ಪಂಚ್​ ಕೊಟ್ಟ ಹುಮ್ಮಸ್ಸಿನಲ್ಲೆ ಜಸ್​ಪ್ರೀತ್ ಬೂಮ್ರ ಕ್ಯಾಪ್ಟನ್ ಬೆನ್ ಸ್ಟೋಕ್ಸ್​ಗೆ ಸ್ಟ್ರೋಕ್ಸ್ ನೀಡಿದ್ರು. ವೆಲ್ ಸೆಟಲ್ಡ್​​​​ ಸ್ಟೋಕ್ಸ್​​​​ 47 ರನ್ ಗಳಿಸಿದ್ದಾಗ ಬೂಮ್ರಾ ತೋಡಿದ ಖೆಡ್ಡಾಗೆ ಬಿದ್ರು.

ವಿಕೆಟ್ ನಂ.5 -ಹಾರ್ಟ್ಲಿಗೆ ಬೂಮ್ರಾ ವಿಲನ್

ಬರೀ ಟಾಪ್​​​​ ಹಾಗೂ ಮಿಡಲ್ ಆರ್ಡರ್ ಅಷ್ಟೇ ಅಲ್ಲ. ಲೋವರ್ ಆರ್ಡರ್ ಬ್ಯಾಟ್ಸ್​​​ಮನ್​ಗಳಿಗು ಬೂಮ್ರಾ ದುಸ್ವಪ್ನರಾಗಿ ಕಾಡಿದ್ರು. ಟಾಮ್ ಹಾರ್ಟ್ಲಿ 21 ರನ್​ ಗಳಿಸಿ ಸ್ಟಾರ್​ವೇಗಿಗೆ ಶರಣಾದ್ರು.

ವಿಕೆಟ್ ನಂ.6 -ಆ್ಯಂಡರ್ಸನ್​​ಗೆ ಗುನ್ನ..!

ವೇಗಿ ಜೇಮ್ಸ್​ ಆ್ಯಂಡರ್ಸನ್​​​​ಗೆ ಬೂಮ್ರಾ ಗುನ್ನ ನೀಡಿದ್ರು. ಅ ಮೂಲಕ ಇಂಗ್ಲೆಂಡ್ ತಂಡದ ಮೊದಲ ಇನ್ನಿಂಗ್ಸ್​ಗೆ​ ಅಂತ್ಯ ಹಾಡಿದ್ರು. ವೈಜಾಗ್​ನಲ್ಲಿ ಬೂಮ್ರಾ 6 ವಿಕೆಟ್​ ಕಬಳಿಸಿ ಇಂಗ್ಲೆಂಡ್ ಶೇಕ್ ಆಗುವಂತೆ ಮಾಡಿದ್ದಾರೆ. ಬೂಮ್ರಾ ಕೊಟ್ಟ ಈ ಸ್ಟ್ರೋಕ್​​ನಿಂದ ಬೆನ್ ಸ್ಟೋಕ್ಸ್​ ಪಡೆ ಚೇತರಿಸಿಕೊಳ್ಳುತ್ತಾ, ಇಲ್ಲ ಮಕಾಡೆ ಮಲಗುತ್ತಾ ಅನ್ನೋದನ್ನ ಕಾದುನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬೂಮ್ರಾ ಮ್ಯಾಜಿಕ್​ ಬೌಲಿಂಗ್​ಗೆ ಬ್ರಿಟಿಷರು ಸರ್ವಪತನ.. ದಾಖಲೆ ಬರೆದ ಯಾರ್ಕರ್ ಸ್ಪೆಷಲಿಸ್ಟ್​..!

https://newsfirstlive.com/wp-content/uploads/2024/02/Bumrah.jpg

Load More