ರೋಹಿತ್ ಶರ್ಮಾ​ರನ್ನು​ ಡ್ರಾಪ್ ಮಾಡಿದ್ದೇಕೆ? ದೊಡ್ಡ ಹೇಳಿಕೆ ಕೊಟ್ಟ ಜಸ್​​ಪ್ರಿತ್ ಬುಮ್ರಾ..!

author-image
Ganesh
Updated On
ರೋಹಿತ್ ಶರ್ಮಾ​ರನ್ನು​ ಡ್ರಾಪ್ ಮಾಡಿದ್ದೇಕೆ? ದೊಡ್ಡ ಹೇಳಿಕೆ ಕೊಟ್ಟ ಜಸ್​​ಪ್ರಿತ್ ಬುಮ್ರಾ..!
Advertisment
  • ಸಿಡ್ನಿಯಲ್ಲಿ ಭಾರತ-ಆಸ್ಟ್ರೇಲಿಯಾ ಮಧ್ಯೆ ಕೊನೆಯ ಟೆಸ್ಟ್
  • ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ
  • 57 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ

ಭಾರತ ಮತ್ತು ಆಸ್ಟ್ರೇಲಿಯಾ ಸಿಡ್ನಿ ಟೆಸ್ಟ್ ಪ್ರಾರಂಭವಾಗುವ ಒಂದು ದಿನ ಮೊದಲು ರೋಹಿತ್ ಶರ್ಮಾ, ಕೊನೆಯ ಟೆಸ್ಟ್ ಆಡುವುದಿಲ್ಲ ಅನ್ನೋದು ದೃಢಪಟ್ಟಿತ್ತು. ಅವರ ಸ್ಥಾನದಲ್ಲಿ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.

ರೋಹಿತ್ ಶರ್ಮಾ ಅವರನ್ನು ಯಾಕೆ ಪ್ಲೇಯಿಂಗ್-11ನಿಂದ ಕೈಬಿಡಲಾಗಿದೆ ಅನ್ನೋದ್ರ ಬಗ್ಗೆ ಚರ್ಚೆ ಶುರುವಾಗಿದೆ. ಇದರ ನಡುವೆ ಬುಮ್ರಾ ರೋಹಿತ್ ಬಗ್ಗೆ ಮಾತನ್ನಾಡಿದ್ದಾರೆ. ಟಾಸ್ ಸಮಯದಲ್ಲಿ ರೋಹಿತ್ ಶರ್ಮಾ ಬಗ್ಗೆ ಮಾತನಾಡಿರುವ ಬುಮ್ರಾ, ‘ಸೋಲಿನಿಂದ ಪಾಠ ಕಲಿತಿದ್ದೇವೆ, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇವೆ. ನಮ್ಮ ನಾಯಕ ರೋಹಿತ್ ಶರ್ಮಾ ನಾಯಕತ್ವವನ್ನು ಪ್ರದರ್ಶಿಸಿದ್ದಾರೆ. ಅವರು ವಿಶ್ರಾಂತಿ ಪಡೆದಿದ್ದಾರೆ. ಇದು ಪಂದ್ಯದೊಳಗೆ ತುಂಬಾ ಒಗ್ಗಟ್ಟು ಇದೆ ಅನ್ನೋದನ್ನು ತೋರಿಸುತ್ತದೆ. ಇಲ್ಲಿ ಅಹಂಕಾರವಿಲ್ಲ, ನಾವು ತಂಡದ ಹಿತಾಸಕ್ತಿಯನ್ನು ಕಾಪಾಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ:ಚಿನ್ನ ಮನೆಯಲ್ಲಿದ್ದರೆ ಚೆನ್ನಾ..! ದೇಶದಲ್ಲಿ ಗೋಲ್ಡ್ ಲೋನ್ ಭಾರೀ ಹೆಚ್ಚಳ; RBI ಕಳವಳ; ಹೇಳಿದ್ದೇನು?

ರೋಹಿತ್ ಶರ್ಮಾ ಡ್ರಾಪ್‌ನಿಂದಾಗಿ ಕೆಎಲ್ ರಾಹುಲ್ ಸಿಡ್ನಿ ಟೆಸ್ಟ್‌ನಲ್ಲಿ ಓಪನಿಂಗ್ ಬಂದಿದ್ದರು. ಆದರೆ ಟೀಂ ಇಂಡಿಯಾ 57 ರನ್​ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದೆ. ರಾಹುಲ್, ಗಿಲ್ ಹಾಗೂ ಜೈಸ್ವಾಲ್​​ ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿದೆ.

ಇದನ್ನೂ ಓದಿ:ಹೆಂಡತಿಗೆ ಫ್ರೀ, ಗಂಡನಿಗೆ ಡಬಲ್ ರೇಟ್​.. ಬಸ್ ದರ ಹೆಚ್ಚಳಕ್ಕೆ ಭಾರೀ ಆಕ್ರೋಶ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment