Advertisment

5 ವಿಕೆಟ್​​​ ಬೇಟೆಯಲ್ಲಿ ಬೂಮ್ರಾನೇ ನಂ- 1.. ಕ್ರಿಕೆಟ್​ ದಿಗ್ಗಜರನ್ನೇ ಹಿಂದಿಕ್ಕಿದ ಸ್ಟಾರ್ ಪೇಸರ್​!

author-image
Bheemappa
Updated On
5 ವಿಕೆಟ್​​​ ಬೇಟೆಯಲ್ಲಿ ಬೂಮ್ರಾನೇ ನಂ- 1.. ಕ್ರಿಕೆಟ್​ ದಿಗ್ಗಜರನ್ನೇ ಹಿಂದಿಕ್ಕಿದ ಸ್ಟಾರ್ ಪೇಸರ್​!
Advertisment
  • ಕ್ರಿಕೆಟ್​ ಕಾಶಿಯಲ್ಲಿ ಬೂಮ್ರಾ ಮಾರಕ ಬೌಲಿಂಗ್​ಗೆ ಇಂಗ್ಲೆಂಡ್​ ಫಿನೀಶ್​
  • ವಿದೇಶ​ಗಳಲ್ಲಿ ಬೂಮ್ರಾನೇ ಬಾಸ್​, ಎಷ್ಟು ಬಾರಿ 5 ವಿಕೆಟ್ ಪಡೆದಿದ್ದಾರೆ?
  • ಕ್ರಿಕೆಟ್​ ದಿಗ್ಗಜರನ್ನೇ ಹಿಂದಿಕ್ಕಿದ ಜಸ್​ಪ್ರಿತ್​​ ಬೂಮ್ರಾ, ಈಗ ನಂಬರ್- 01

ಇಂಡೋ- ಇಂಗ್ಲೆಂಡ್​ ಲಾರ್ಡ್ಸ್​​ ಟೆಸ್ಟ್​ನಲ್ಲಿ ವೇಗಿ ಬೂಮ್ರಾ ದರ್ಬಾರ್​ಗೆ ಎಲ್ಲರೂ ಫಿದಾ ಆಗೋದರು. ಯಾರ್ಕರ್​​​ ಸ್ಪೆಷಲಿಸ್ಟ್​​ ಶರವೇಗಕ್ಕೆ ಇಂಗ್ಲೆಂಡ್​ ಬ್ಯಾಟಿಂಗ್​ ಲೈನ್​​ಅಪ್​ ತಬ್ಬಿಬ್ಬಾಯ್ತು. ಬೊಂಬಾಟ್​ ಬೌಲಿಂಗ್​ ಮಾಡಿ ಬೂಮ್ರಾ, ದಿಗ್ಗಜರ ದಾಖಲೆಗಳನ್ನ ಧೂಳಿಪಟ ಮಾಡಿದರು. ಬೂಮ್ರಾ ಬೆಂಕಿ ಬೌಲಿಂಗ್​ ಹೇಗಿತ್ತು?.

Advertisment

ಕ್ರಿಕೆಟ್​ ಕಾಶಿ ಲಾರ್ಡ್ಸ್​​ನಲ್ಲಿ ನಿನ್ನೆ ಬೂಮ್ರಾ ಬಿರುಗಾಳಿಯನ್ನೇ ಎಬ್ಬಿಸಿದರು. ಬೂಮ್ರಾ ಬೆಂಕಿ ಬೌಲಿಂಗ್​ ಬೌಲಿಂಗ್​​ ಇಂಗ್ಲೆಂಡ್​ ಬ್ಯಾಟ್ಸ್​​​ಮನ್​ಗಳು ಥಂಡಾ ಹೊಡೆದು ಬಿಟ್ಟರು. ಮೊದಲ ದಿನದಾಟದಲ್ಲಿ ಕೇವಲ 1 ವಿಕೆಟ್​ ಕಬಳಿಸಿದ್ದ ಬೂಮ್ರಾ, 2ನೇ ದಿನದಾಟದಲ್ಲಿ ಧೂಳೆಬ್ಬಿಸಿದರು.

publive-image

ಬೂಮ್ರಾ ಬಿರುಗಾಳಿಗೆ ರೂಟ್​​​, ಸ್ಟೋಕ್ಸ್​ ಸ್ಟನ್​.!

2ನೇ ದಿನದಾಟದ ಮೊದಲ ಸೆಷನ್​​ನಲ್ಲೇ ಆಂಗ್ಲರಿಗೆ ಬೂಮ್ರಾ ಶಾಕ್​ ನೀಡಿದರು. ಬೂಮ್ರಾ ಬೊಂಬಾಟ್​ ಬೌಲಿಂಗ್​ಗೆ ಅದಾಗಲೇ 110 ಎಸೆತ ಎದುರಿಸಿ ಕ್ರೀಸ್​ನಲ್ಲಿ ಸೆಟಲ್​ ಆಗಿದ್ದ ಬೆನ್​​ ಸ್ಟೋಕ್ಸ್​ ಸ್ಟನ್​ ಆದರು. ​ಬೂಮ್ರಾ ಎಸೆದ 86ನೇ ಓವರ್​​ನ 2ನೇ ರಣಭೀಕರ ಎಸೆತ ಹಂಗಿತ್ತು.

ಸ್ಪೋಕ್ಸ್​​ ಬೆನ್ನಲ್ಲೇ ಶತಕ ವೀರ ಜೋ ರೂಟ್​​ಗೂ ಬೂಮ್ರಾ ಪೆವಿಲಿಯನ್​​​ನ ರೂಟ್​ ತೋರಿಸಿದರು. ಬೂಮ್ರಾ ಮಾರಕ ಎಸೆತಕ್ಕೆ 199 ಎಸೆತ ಎದುರಿಸಿ ಕ್ರಿಸ್​ನಲ್ಲಿ ಬೇರೂರಿದ್ದ ರೂಟ್​ನ​ ದಂಗಾದರು.

Advertisment

ಕ್ರಿಕೆಟ್​ ಕಾಶಿಯಲ್ಲಿ ಬೂಮ್ರಾ 5 ವಿಕೆಟ್​​ ಸಾಧನೆ.!

ದಿಗ್ಗಜರನ್ನೇ ದಂಗಾಗಿಸಿದ ಬೂಮ್ರಾಗೆ ಕ್ರಿಸ್​ ವೋಕ್ಸ್​, ಜೋಫ್ರಾ ಆರ್ಚರ್​ ಯಾವ ಲೆಕ್ಕ.? ವೋಕ್ಸ್​ ಕ್ಯಾಚ್​ ನೀಡಿ ನಿರ್ಗಮಿಸಿದ್ರೆ, ಜೋಫ್ರಾ ಆರ್ಚರ್​ ಕ್ಲೀನ್​ಬೋಲ್ಡ್​ ಆದರು. ಇನ್ನಿಂಗ್ಸ್​ನಲ್ಲಿ ಬೂಮ್ರಾ 5 ವಿಕೆಟ್​ ಕಬಳಿಸಿದ ಸಾಧನೆ ಮಾಡಿದರು.

47 ಟೆಸ್ಟ್​​, 15 ಬಾರಿ 5 ವಿಕೆಟ್​, ಬೂಮ್ರಾ ಬೊಂಬಾಟ್​​.!

ಬೂಮ್ರಾ ಲಾರ್ಡ್ಸ್​ನಲ್ಲಿ ಆಡ್ತಿರೋದು ಕರಿಯರ್​​ನ 47ನೇ ಟೆಸ್ಟ್​​ ಪಂದ್ಯ. ಈ 47 ಪಂದ್ಯಗಳಲ್ಲೇ 15 ಬಾರಿ ಬೂಮ್ರಾ 5 ವಿಕೆಟ್​ ಕಬಳಿಸಿದ ಸಾಧನೆ ಮಾಡಿದ್ದಾರೆ. ನೀವು ನಂಬ್ತಿರೋ ಇಲ್ವೋ, ಬೂಮ್ರಾ ಜೊತೆಗೆ ಯಾವಾಗಲೂ ಹೋಲಿಕೆ ಮಾಡೋ ಆಸ್ಟ್ರೇಲಿಯಾದ ವೇಗಿ ಮಿಚೆಲ್​ ಸ್ಟಾರ್ಕ್​ ಈ ಸಾಧನೆಯನ್ನ ಮಾಡೋಕೆ 99 ಟೆಸ್ಟ್​ ತೆಗೆದುಕೊಂಡಿದರು.

ವಿದೇಶಿ ಪಿಚ್​ಗಳಲ್ಲಿ ಬೂಮ್ರಾನೇ ಬಾಸ್​​.!

ಟೀಮ್​ ಇಂಡಿಯಾದ ಬೌಲರ್​​ಗಳಿಗೆ ಫಾರಿನ್​ ಪಿಚ್​​ಗಳಲ್ಲಿ ಹೆಚ್ಚು ಸಕ್ಸಸ್​ ಸಿಕ್ಕಿದ್ದಿಲ್ಲ. ಕಪಿಲ್​ದೇವ್​ ಬಳಿಕ ಟೀಮ್​ ಇಂಡಿಯಾದ ಯಾವ ಬೌಲರ್​​ಗಳೂ ವಿದೇಶದಲ್ಲಿ ಆರ್ಭಟಿಸಿರಲಿಲ್ಲ. ಇದೀಗ ವಿದೇಶದಲ್ಲಿ ಬೂಮ್ರಾನೇ ಬಾಸ್​ ಆಗಿದ್ದಾರೆ. ಟೆಸ್ಟ್​ ಮಾದರಿಯಲ್ಲಿ 15 ಬಾರಿ 5 ವಿಕೆಟ್​ ಸಾಧನೆ ಮಾಡಿದ್ದಾರಲ್ವಾ.? ಈ ಪೈಕಿ 13 ಬಾರಿ 5 ವಿಕೆಟ್​ ಕಬಳಿಸಿರೋದು ವಿದೇಶದಲ್ಲೇ.

Advertisment

ವಿದೇಶದಲ್ಲಿ 5 ವಿಕೆಟ್​ ಸಾಧನೆ

ವಿದೇಶದಲ್ಲಿ 35 ಟೆಸ್ಟ್​ ಪಂದ್ಯಗಳನ್ನಾಡಿರುವ ಬೂಮ್ರಾ 13 ಬಾರಿ ಇನ್ನಿಂಗ್ಸ್​ವೊಂದರಲ್ಲಿ 5 ವಿಕೆಟ್​ ಕಬಳಿಸಿದ ಸಾಧನೆ ಮಾಡಿದ್ದಾರೆ. 66 ಟೆಸ್ಟ್​ ಪಂದ್ಯಗಳನ್ನಾಡಿದ್ದ ಕಪಿಲ್​ ದೇವ್​ 12 ಬಾರಿ ಈ ಸಾಧನೆ ಮಾಡಿದರು. ಅನಿಲ್​ ಕುಂಬ್ಳೆ 69 ಟೆಸ್ಟ್​​ ಪಂದ್ಯಗಳಿಂದ 10 ಬಾರಿ ಇನ್ನಿಂಗ್ಸ್​ವೊಂದರಲ್ಲಿ 5 ವಿಕೆಟ್​ ಕಬಳಿಸಿದ ಸಾಧನೆ ಮಾಡಿದ್ರೆ, ಇಶಾಂತ್​​ ಶರ್ಮಾ 63 ಪಂದ್ಯಗಳಿಂದ 9 ಬಾರಿ ಈ ಸಾಧನೆ ಮಾಡಿದ್ದಾರೆ.

ದಿಗ್ಗಜರನ್ನೇ ಹಿಂದಿಕ್ಕಿದ ಜಸ್​ಪ್ರಿತ್​​ ಬೂಮ್ರಾ.!

ಬೂಮ್ರಾ ಬೌಲಿಂಗ್ ತಾಕತ್ತು​ ಏನು ಅನ್ನೋದಕ್ಕೆ ಇದೇ ಬೆಸ್ಟ್​ ಎಕ್ಸಾಂಪಲ್. ಪಂದ್ಯದಿಂದ ಪಂದ್ಯಕ್ಕೆ ಬೊಂಬಾಟ್​ ಸ್ಪೆಲ್​ಗಳನ್ನ ಹಾಕ್ತಿರೋ ಬೂಮ್ರಾ ದಿಗ್ಗಜರನ್ನೇ ಹಿಂದಿಕ್ಕಿದ್ದಾರೆ.

ಇದನ್ನೂ ಓದಿ: ಬೆಣ್ಣೆಯಂತೆ ಕೊಬ್ಬು ಕರಗಿಸೋ ಬಟರ್​ ಫ್ರೂಟ್.. ಇದರ ಆರೋಗ್ಯ ಪ್ರಯೋಜನ ಕೇಳಿದ್ರೆ ಶಾಕ್ ಆಗ್ತೀರಾ!

Advertisment

publive-image

ಬೆಸ್ಟ್​​ ಬೌಲಿಂಗ್​ ಎವರೇಜ್​

ಇಂಟರ್​ನ್ಯಾಷನಲ್​​ ಕ್ರಿಕೆಟ್​ನಲ್ಲಿ ಬೆಸ್ಟ್​ ಬೌಲಿಂಗ್​ ಎವರೇಜ್​ ಹೊಂದಿರುವ ಬೌಲರ್​ಗಳ ಪಟ್ಟಿಯಲ್ಲಿ ಬೂಮ್ರಾಗೆ ಅಗ್ರಸ್ಥಾನ 20.49ರ ಸರಾಸರಿಯೊಂದಿಗೆ ಬೂಮ್ರಾ ನಂಬರ್ 1 ಸ್ಥಾನದಲ್ಲಿದ್ರೆ, 21.76ರ ಸರಾಸರಿ ಹೊಂದಿರೋ ಗ್ಲೇನ್​ ಮೆಗ್ರಾತ್​​ 2ನೇ ಸ್ಥಾನದಲ್ಲಿದ್ದಾರೆ. 3ನೇ ಸ್ಥಾನದಲ್ಲಿರೋ ಅಲಾನ್​ ಡೊನಾಲ್ಡ್​​ 22.04, 4ನೇ ಸ್ಥಾನದಲ್ಲಿರೋ ರಿಚರ್ಡ್​ ಹಾಡ್ಲೆ 22.10ರ ಸರಾಸರಿ ಹೊಂದಿದ್ದಾರೆ.

ಲಾರ್ಡ್ಸ್​​ ಟೆಸ್ಟ್​ನ ಫಸ್ಟ್​ ಇನ್ನಿಂಗ್ಸ್​ನಲ್ಲಿ ಬೂಮ್ರಾ ಮತ್ತೊಮ್ಮೆ ತನ್ನ ಅಸಾಧಾರಣ ಸಾಮರ್ಥ್ಯವನ್ನ ಅನಾವರಣಗೊಳಿಸಿದ್ದಾರೆ. ಇದೇ ಪರ್ಫಾಮೆನ್ಸ್​ ಅನ್ನ ಬೂಮ್ರಾ ಮುಂದುವರೆಸಲಿ. ಟೀಮ್​ ಇಂಡಿಯಾ ಲಾರ್ಡ್ಸ್​ ಟೆಸ್ಟ್​ ಗೆಲ್ಲಲಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment