/newsfirstlive-kannada/media/post_attachments/wp-content/uploads/2024/07/BUMRAH.jpg)
ಟೀಂ ಇಂಡಿಯಾದ ಬೌಲಿಂಗ್ ವಿಭಾಗದ ಬೆನ್ನೆಲುಬು ಜಸ್​​ಪ್ರಿತ್ ಬೂಮ್ರಾಗೆ ಬಿಗ್ ಶಾಕ್ ನೀಡಲು ಬಿಸಿಸಿಐ ಮುಂದಾಗಿದೆ ಎಂಬ ಸುದ್ದಿ ಗುಲ್ ಎದ್ದಿದೆ. ಮುಂಬರುವ ಟೆಸ್ಟ್​ ಸರಣಿಗಳಿಗೆ ಶುಬ್ಮನ್ ಗಿಲ್​ಗೆ ಉಪನಾಯಕನ ಪಟ್ಟ ಕಟ್ಟಲು ತೆರೆಮರೆಯಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ವರದಿಯಾಗಿದೆ.
ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಟೆಸ್ಟ್ ತಂಡವನ್ನು ಮುನ್ನಡೆಸಲು ಗಿಲ್ ಅವರಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಟೀಂ ಇಂಡಿಯಾ ಕೆಲವೇ ದಿನಗಳಲ್ಲಿ ಬಾಂಗ್ಲಾ ದೇಶದ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಲಿದೆ. ಈ ಟೂರ್ನಿಯಲ್ಲಿ ಗಿಲ್ ಉಪನಾಯಕರಾಗಿ ತಂಡದ ಜವಾಬ್ದಾರಿ ಹೊರಲಿದ್ದಾರೆ. ಸೆಪ್ಟೆಂಬರ್ 19 ರಂದು ಚೆನ್ನೈನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 27 ರಂದು ನಾಗ್ಪುರದಲ್ಲಿ ನಡೆಯಲಿದೆ.
ಇದನ್ನೂ ಓದಿ:Breaking: ಕುಸಿದು ಬಿದ್ದ 3 ಅಂತಸ್ತಿನ ಕಟ್ಟಡ.. 24 ಕುಟುಂಬ ವಾಸವಿದ್ದ ಮಾಹಿತಿ.. ಭಾರೀ ಸಾವು ನೋವಿನ ಆತಂಕ
ಇನ್ನು ಗಿಲ್ ಅವರು ಟಿ-20 ಮತ್ತು ಏಕದಿನ ಪಂದ್ಯಗಳಿಗೂ ಉಪನಾಯಕರಾಗಿದ್ದಾರೆ. ಆ ಮೂಲಕ ಗಿಲ್ ಅವರನ್ನು ಮೂರು ಫಾರ್ಮ್ಯಾಟ್​​ಗೂ ಉಪನಾಯಕನಾಗಿ ಮಾಡಿ, ಮುಂದಿನ ದಿನಗಳಲ್ಲಿ ಕ್ಯಾಪ್ಟನ್ ಆಗಿ ಬೆಳೆಸುವ ಇರಾದೆಯಲ್ಲಿ ಬಿಸಿಸಿಐ ಇದೆ. ಎಲ್ಲಾ ಮಾದರಿ ಕ್ರಿಕೆಟ್ ಪಂದ್ಯಗಳಿಗೂ ನಾಯಕರಾಗಿ ಮುನ್ನಡೆಸುತ್ತಿದ್ದ ರೋಹಿತ್ ಶರ್ಮಾ, ವಿಶ್ವಕಪ್ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಅವರ ನಂತರ ಟೀಂ ಇಂಡಿಯಾ ಸಾರಥಿ ಯಾರು ಅನ್ನೋ ಪ್ರಶ್ನೆ ಇದೆ.
ಇದನ್ನೂ ಓದಿ:ಹಾಸನದಲ್ಲಿ ಬೆಳ್ಳಂಬೆಳಗ್ಗೆ ಅನಾಹುತ.. ರೈಲು ಬರುತ್ತಿದ್ದಾಗಲೇ ಕುಸಿದ ಗುಡ್ಡ, ಹಳಿಯಿಂದ ಜಾರಿದ ಟ್ರೈನ್..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us