ಬುಮ್ರಾ ಸ್ಥಾನ ತುಂಬುವ ಶಕ್ತಿ ಇರೋದು ಕನ್ನಡಿಗನಿಗೆ ಮಾತ್ರ.. ಟ್ರಬಲ್​​​ನಲ್ಲಿರೋ ತಂಡಕ್ಕೆ ದೊಡ್ಡ ಭರವಸೆ

author-image
Ganesh
Updated On
ಟೀಮ್​​ ಇಂಡಿಯಾಗೆ ಬಿಗ್​ ಶಾಕ್​​; ಬುಮ್ರಾ 3ನೇ ಟೆಸ್ಟ್​ ಆಡೋದು ಡೌಟ್​​; ಕಾರಣವೇನು?
Advertisment
  • ಬೂಮ್ರಾ ಕೊರತೆ ನೀಗಿಸುವುದು ಯಾರು..?
  • ಇಂಗ್ಲೆಂಡ್​ ಕಂಡೀಷನ್ಸ್​ಗೆ ಪ್ರಸಿದ್ಧ್ ‘ಪರ್ಫೆಕ್ಟ್’​!
  • ಆ ಸ್ಪೆಲ್ ಹೇಳುತ್ತೆ ಪ್ರಸಿದ್ಧ್​ ಸಾಮರ್ಥ್ಯದ ಕಥೆ

ಟೀಮ್ ಇಂಡಿಯಾದಲ್ಲಿ ಜಸ್​​ಪ್ರೀತ್​​ ಬುಮ್ರಾ ಸ್ಥಾನ ತುಂಬೋದು ಸುಲಭವಲ್ಲ. ಆದ್ರೀಗ ಇಂಗ್ಲೆಂಡ್​ ಎದುರಿನ ಮೊದಲ ಟೆಸ್ಟ್​ ಪಂದ್ಯಕ್ಕೂ ಮುನ್ನವೇ ಈ ಪ್ರಶ್ನೆ ಎದುರಾಗಿದೆ. ಇದೇ ಪ್ರಶ್ನೆಯೇ ಟೀಮ್ ಮ್ಯಾನೇಜ್​ಮೆಂಟ್​ಗೂ ಹೊಸ ತಲೆನೋವು ಸೃಷ್ಟಿಸಿದೆ. ಆ ಕೊರತೆ ನೀಗಿಸಬಲ್ಲವನು ಕನ್ನಡಿಗ ಕೃಷ್ಣ ಮಾತ್ರ.

ಇಂಡೋ ಇಂಗ್ಲೆಂಡ್ ಟೆಸ್ಟ್​ ಸರಣಿಗೆ ಕೌಂಟ್​ಡೌನ್ ಶುರುವಾಗಿದೆ. ಈಗಾಗಲೇ ಭರ್ಜರಿ ಸಿದ್ದತೆ ನಡೆಸಿರುವ ಉಭಯ ತಂಡಗಳು, ಮೊದಲ ಟೆಸ್ಟ್​ ಪಂದ್ಯಕ್ಕೆ ಸಜ್ಜಾಗಿ ನಿಂತಿವೆ. ಮೊದಲ ಟೆಸ್ಟ್​ ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಅಘಾತದ ಜೊತೆಗೆ ಹೊಸ ತಲೆನೋವು ಎದುರಾಗಿದೆ. ಇದಕ್ಕೆ ಕಾರಣ ಮ್ಯಾಚ್ ವಿನ್ನರ್ ಜಸ್​ಪ್ರೀತ್ ಬೂಮ್ರಾ.

ಇದನ್ನೂ ಓದಿ: ಗೋಲ್ಡ್​ ಸುರೇಶ್​​ಗೆ ಬಿಗ್ ಶಾಕ್ ನೀಡಲು ಮುಂದಾದ ಯುವಕ.. ವಂಚನೆ ಕೇಸ್​​ಗೆ ಟ್ವಿಸ್ಟ್..!

publive-image

ಟೀಮ್ ಇಂಡಿಯಾ ಇನ್ ಟ್ರಬಲ್..!

ಜಸ್​​ಪ್ರೀತ್ ಬುಮ್ರಾ.. ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್. ಇಂಗ್ಲೆಂಡ್ ಟೆಸ್ಟ್​ ಸರಣಿಯಲ್ಲೇ ಟೀಮ್ ಇಂಡಿಯಾದ ಬ್ರಹಾಸ್ತ್ರ. ಟೀಮ್ ಇಂಡಿಯಾ ಗೆಲುವಿನ ಹಿಂದಿನ ಶಕ್ತಿ ಆಗಿರುವ ಬೂಮ್ರಾ. ಐದರ ಪೈಕಿ ಎರಡು ಟೆಸ್ಟ್​ಗಳಿಗೆ ಅಲಭ್ಯರಾಗಿದ್ದಾರೆ. ಇದೇ ಈಗ ಟೀಮ್ ಇಂಡಿಯಾದ ಚಿಂತೆ ಹೆಚ್ಚಿಸಿದೆ. ಪ್ರಮುಖವಾಗಿ ಬೂಮ್ರಾ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆಗಿಂತ ಆತನ ಕೊರತೆ ನೀಗಿಸುವುದ್ಯಾರು ಎಂಬ ಪ್ರಶ್ನೆಯೇ ಹೆಚ್ಚಾಗಿ ಕಾಡ್ತಿದೆ. ಇದಕ್ಕೆ ಕಾರಣ ಬೂಮ್ರಾಗೆ ಮ್ಯಾಚ್ ವಿನ್ನಿಂಗ್ ಸ್ಪೆಲ್​ಗಳು.

ಯಾವುದೇ ಕಂಡೀಷನ್ಸ್​ ಆಗಲಿ, ಎದುರಾಳಿ ಯಾರೇ ಆಗಿರಲಿ ಡೆಡ್ಲಿ ಸ್ಪೆಲ್ಸ್ ಹಾಕುವ ಬೂಮ್ರಾ, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ಇಂಗ್ಲೆಂಡ್​​ನಂಥ ಸೇನಾ ರಾಷ್ಟ್ರಗಳಲ್ಲಿ ಮೋಸ್ಟ್​ ಡೇಂಜರಸ್. ಇದೇ ಮ್ಯಾಚ್ ವಿನ್ನರ್​​​​​ ಇಲ್ಲದ ಕೊರತೆ ನೀಗಿಸುವುದ್ಯಾರು ಅನ್ನೋದೇ ದೊಡ್ಡ ತಲೆನೋವಾಗಿ ಕಾಡ್ತಿದೆ. ಈ ಕೊರತೆ ನೀಗಿಸಬಲ್ಲವರು ಒನ್ ಅಂಡ್ ಒನ್ಲಿ ಪ್ರಸಿದ್ಧ್ ಕೃಷ್ಣ.

ಇಂಗ್ಲೆಂಡ್​ ಕಂಡೀಷನ್ಸ್​ಗೆ ಕನ್ನಡಿಗ ಪ್ರಸಿದ್ಧ್ ‘ಪರ್ಫೆಕ್ಟ್’​

ಜಸ್​ಪ್ರೀತ್ ಬೂಮ್ರಾ ಅಲಭ್ಯತೆಯಲ್ಲಿ ಅರ್ಷದೀಪ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳುವ ಚಾನ್ಸ್​ ಇದ್ದೇ ಇದೆ. ಜಸ್​​ಪ್ರೀತ್​ ಬೂಮ್ರಾ ಇಲ್ಲದ ಕೊರತೆ ಯಾರು ನೀಗಿಸ್ತಾರೆ ಎಂಬ ಪ್ರಶ್ನೆಗೆ ಉತ್ತರ ಕನ್ನಡಿಗ ಪ್ರಸಿದ್ಧ ಕೃಷ್ಣನೇ ಆಗಿದ್ದಾರೆ. ಇದು ಸುಖಾಸುಮ್ಮನೆ ಹೇಳ್ತಿರುವ ಮಾತಲ್ಲ. ಇದಕ್ಕೆ ನಾನಾ ಕಾರಣಗಳೂ ಇವೆ.

ಇದನ್ನೂ ಓದಿ: ಗ್ರ್ಯಾಂಡ್​ ಆಗಿ ಪತ್ನಿ ಬರ್ತ್​ ಡೇ ಸೆಲೆಬ್ರೇಟ್ ಮಾಡಿದ ವಿನೋದ್ ಪ್ರಭಾಕರ್; ಫೋಟೋಸ್​ ಇಲ್ಲಿವೆ!

publive-image

ಇಂಗ್ಲೆಂಡ್​ನಲ್ಲಿ ಪ್ರಸಿದ್ಧ್​ ಕೃಷ್ಣ ಎಕ್ಸ್ ಫ್ಯಾಕ್ಟರ್ ಆಗ್ತಾರೆ. ಇಂಗ್ಲೆಂಡ್​ನಂತ ಪೇಸ್ ಅಂಡ್ ಬೌನ್ಸಿ ಪಿಚ್​ನಲ್ಲಿ 6.2 ಅಡಿಯ ಪ್ರಸಿದ್ಧ್​ ಕೃಷ್ಣ ಮೋಸ್ಟ್​ ಎಫೆಕ್ಟೀವ್ ಆಗಬಲ್ಲರು. ಸ್ವಿಂಗ್​, ಬೌನ್ಸ್, ಪೇಸ್, ಲೈನ್​​ ಆ್ಯಂಡ್ ಲೆನ್ತ್​ ಮೂಲಕ ಎದುರಾಳಿಯನ್ನ ಟ್ರಬಲ್ ಮಾಡಬಲ್ಲ ಪ್ರಸಿದ್ಧ್, 140ರ ವೇಗದಲ್ಲಿ ದಾಳಿ ಸಂಘಟಿಸ್ತಾರೆ. ಎರಡೂ ಕಡೆಯೂ ಸ್ವಿಂಗ್ ಮಾಡಬಲ್ಲ ಪ್ರಸಿದ್ಧ್​, ವೇರಿಯೇಷನ್ಸ್​ ಜೊತೆಗೆ ಯಾರ್ಕರ್ಸ್​ ಎಸೆಯೋ ಕಲೆಗಾರ. ಹೀಗಾಗಿ ಇಂಗ್ಲೆಂಡ್​ ಕಂಡೀಷನ್ಸ್​ಗೆ ಪ್ರಸಿದ್ ಹೇಳಿ ಮಾಡಿಸಿರುವ ಪ್ಲೇಯರ್ ಅನ್ನೋದ್ರಲ್ಲಿ ಡೌಟೇ ಇಲ್ಲ.

ಆ ಒಂದು ಸ್ಪೆಲ್ ಹೇಳುತ್ತೆ ಪ್ರಸಿದ್ಧ್​ ಕೃಷ್ಣರ ಸಾಮರ್ಥ್ಯದ ಕಥೆ..!

ಕೇವಲ 3 ಟೆಸ್ಟ್​ ಪಂದ್ಯಗಳನ್ನಾಡಿರುವ ಪ್ರಸಿದ್ಧ್​, ಇಂಗ್ಲೆಂಡ್​​ನಲ್ಲಿ ಏನ್ ಮಾಡಬಲ್ಲರು ಅನ್ನೋ ಪ್ರಶ್ನೆ ಕಾಡ್ತಿರಬಹುದು. ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಟೆಸ್ಟ್​ನಲ್ಲಿ ಪ್ರಸಿದ್ಧ್​ ಕೃಷ್ಣ ಹಾಕಿದ ಆ ಒಂದು ಸ್ಪೆಲ್, ಕನ್ನಡಿಗ ಸಾಮರ್ಥ್ಯದ ಕಥೆ ಹೇಳುತ್ತೆ. ಸಿಡ್ನಿ ಟೆಸ್ಟ್​ನ ಮೊದಲ ಇನ್ನಿಂಗ್ಸ್​ ಸ್ಟೀವ್ ಸ್ಮಿತ್, ವೆಬ್​ಸ್ಟರ್​ ಬಿಗ್ ಇನ್ನಿಂಗ್ಸ್ ಕಟ್ಟಿದ್ರು. ಟೀಮ್ ಇಂಡಿಯಾಗೆ ಕಾಡ್ತಿದ್ರು. ಈ ವೇಳೆ ಸ್ಟೀವ್ ಸ್ಮಿತ್, ವೆಬ್ ಸ್ಟರ್, ಅಲೆಕ್ಸ್​ ಕೇರಿ ವಿಕೆಟ್ ಬೇಟೆಯಾಡಿ ಟೀಮ್ ಇಂಡಿಯಾಗೆ ಮೇಲುಗೈ ತಂದುಕೊಟ್ಟಿದ್ದು, ಇದೇ ಪ್ರಸಿದ್ಧ ಕೃಷ್ಣ.

ಇದನ್ನೂ ಓದಿ: ಗ್ರ್ಯಾಂಡ್​ ಆಗಿ ಪತ್ನಿ ಬರ್ತ್​ ಡೇ ಸೆಲೆಬ್ರೇಟ್ ಮಾಡಿದ ವಿನೋದ್ ಪ್ರಭಾಕರ್; ಫೋಟೋಸ್​ ಇಲ್ಲಿವೆ!

publive-image

2ನೇ ಇನ್ನಿಂಗ್ಸ್​ನಲ್ಲಿ ಇಂಜುರಿ ಕಾರಣಕ್ಕೆ ಬೂಮ್ರಾ ಮೈದಾನದಿಂದ ದೂರ ಉಳಿಯಬೇಕಾಯ್ತು. ಈ ವೇಳೆ ಸಿರಾಜ್​ಗಿಂತ ಆಸ್ಟ್ರೇಲಿಯನ್ನರನ್ನು ಕಾಡಿದ್ದು ಪ್ರಸಿದ್ಧ್​ ಕೃಷ್ಣ. ಆರಂಭದಲ್ಲೇ ಅಪಾಯಕಾರಿ ಸ್ಯಾಮ್ ಕಾನ್‌ಸ್ಟಾಸ್‌ಗೆ ಪೆವಿಲಿಯನ್ ದಾರಿ ತೋರಿದ್ದ ಕನ್ನಡಿಗ, ಬ್ಯಾಕ್ ಟು ಬ್ಯಾಕ್ ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್​ಗೆ ಪೆವಿಲಿಯನ್​ಗೆ ಕಳುಹಿಸಿದ್ರು. ಅವತ್ತು ಪ್ರಸಿದ್ಧ್​ಗೆ ಇತರರಿಂದ ಉತ್ತಮ ಸಾಥ್ ಸಿಕ್ಕಿದ್ರೆ ಸಿಡ್ನಿ ಟೆಸ್ಟ್ ಗೆದ್ದು ಸರಣಿ ಡ್ರಾ ಮಾಡಿಕೊಳ್ಳುವ ಸುವರ್ಣವಕಾಶ ಟೀಮ್ ಇಂಡಿಯಾ ಸಿಕ್ತಿತ್ತು.

ಟೆಸ್ಟ್​ ಕರಿಯರ್​ ರೂಪಿಸಿಕೊಳ್ಳಲು ಗೋಲ್ಡನ್ ಚಾನ್ಸ್

2023ರ ಡಿಸೆಂಬರ್​ನಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಡೆಬ್ಯೂ ಮಾಡಿದ್ದ ಪ್ರಸಿದ್ದ್​, ಇದುವರೆಗೆ ಆಡಿರೋದು ಜಸ್ಟ್ ಮೂರೇ ಮೂರು ಟೆಸ್ಟ್​ ಪಂದ್ಯಗಳನ್ನ ಮಾತ್ರ. ಆಸ್ಟ್ರೇಲಿಯಾ ಟೆಸ್ಟ್​ನೊಂದಿಗೆ ಕಮ್​ಬ್ಯಾಕ್ ಮಾಡಿದ್ದ ಪ್ರಸಿದ್ಧ್​ ಕೃಷ್ಣ, ಈ ಹಿಂದೆಗಿಂತಲೂ ಪ್ರಬುದ್ಧರಾಗಿ ಕಾಣ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್​​ ಸೀಸನ್​-18ರ ಐಪಿಎಲ್ ಟೂರ್ನಿ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಇದು ಫಾರ್ಮೆಟ್ ಬೇರೆ ಇರಬಹುದು. ವೈಟ್​​ಬಾಲ್​​​​​​​​​​​​​​​​​​ಗಿಂತ ರೆಡ್​ ಬಾಲ್​ನಲ್ಲೇ ಪ್ರಸಿದ್ಧ್​​ ಕೃಷ್ಣ ಅಪಾಯಕಾರಿ. ಈ ಅವಕಾಶ ಸದ್ಭಳಕೆ ಮಾಡಿಕೊಂಡ್ರೆ ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಫಿಕ್ಸ್​. ಆಂಗ್ಲರ ನಾಡಿನಲ್ಲಿ ಪ್ರಸಿದ್ಧ ಪರಾಕ್ರಮ ತೋರಲಿ. ಜಬರ್​ದಸ್ತ್ ಪ್ರದರ್ಶನದಿಂದ ತಂಡಕ್ಕೆ ಗೆಲುವು ತಂದುಕೊಡಲಿ. ಆ ಮೂಲಕ ಕನ್ನಡಿಗರಿಗೆ ಹೆಮ್ಮೆ ತರಲಿ ಅನ್ನೋದೇ ನಮ್ಮ ಆಶಯ.

ಇದನ್ನೂ ಓದಿ: 38 ವರ್ಷಗಳ ಬಳಿಕ ನನಸಾಗುತ್ತಿದೆ ಅಣ್ಣಾವ್ರ ಕನಸು.. ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ ನಿರೀಕ್ಷೆ..

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment