newsfirstkannada.com

ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಲ್ಲೋಲ-ಕಲ್ಲೋಲ; ಹಾರ್ದಿಕ್​​ಗೆ ಬಿಗ್​ ಶಾಕ್​ ಕೊಟ್ಟ ಬೂಮ್ರಾ..!

Share :

Published March 20, 2024 at 4:08pm

  2024ರ ಇಂಡಿಯನ್ ಪ್ರೀಮಿಯರ್ ಲೀಗ್‌ 17ನೇ ಸೀಸನ್​​..!

  ಐಪಿಎಲ್​ 17ನೇ ಸೀಸನ್​ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ

  ಹಾರ್ದಿಕ್​ ಪಾಂಡ್ಯಗೆ ಶುರುವಾಯ್ತು ಮತ್ತೊಂದು ತಲೆನೋವು

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ 17ನೇ ಸೀಸನ್​​ ಆರಂಭಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ನಾಳೆ ಅಲ್ಲ ನಾಡಿದ್ದು ಅಂದರೆ ಮಾರ್ಚ್​​ 22ನೇ ತಾರೀಕು MA ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮಧ್ಯೆ ಐಪಿಎಲ್​ ಮೊದಲ ಪಂದ್ಯ ಶುರುವಾಗಲಿದೆ. ಇದಾದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್​​ ಇದೇ ಭಾನುವಾರ ಸಂಜೆ ಗುಜರಾತ್​ ಟೈಟಾನ್ಸ್​ ವಿರುದ್ಧ ಸೆಣಸಾಡಲಿದೆ. ಈ ಮಧ್ಯೆ ಮುಂಬೈ ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯಗೆ ದೊಡ್ಡ ಕಂಟಕ ಎದುರಾಗಿದೆ.

ಹೌದು, ಮುಂಬೈ ಇಂಡಿಯನ್ಸ್ ತಂಡದ ಹೊಸ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯಗೆ ಹೊಸ ತಲೆನೋವು ಒಂದು ಶುರುವಾಗಿದೆ. ಇದಕ್ಕೆ ಕಾರಣ ತಂಡದ ಸ್ಟಾರ್​ ಬೌಲರ್​ ಜಸ್ಪ್ರೀತ್ ಬುಮ್ರಾ ಇನ್ನೂ ಮುಂಬೈ ಇಂಡಿಯನ್ಸ್ ಕ್ಯಾಂಪ್​ಗೆ ಸೇರದಿರುವುದು. ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದರಲ್ಲೂ ಮುಂಬೈ ತಂಡದಲ್ಲಿ ಇನ್ನೂ ಎಲ್ಲವೂ ಸರಿಯಾಗಿಲ್ಲವೇ ಅನ್ನೋ ಮಾತುಗಳು ಕೇಳಿ ಬಂದಿವೆ.

ಇತ್ತೀಚೆಗೆ ಇಂಗ್ಲೆಂಡ್​ ವಿರುದ್ಧ ನಡೆದ ಟೆಸ್ಟ್​ ಸೀರೀಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಬೂಮ್ರಾ ನೇರ ಮುಂಬೈ ಇಂಡಿಯನ್ಸ್​ ಕ್ಯಾಂಪ್​ ಸೇರಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಕಳೆದೊಂದು ವಾರದಿಂದ ಮುಂಬೈ ಇಂಡಿಯನ್ಸ್​​ ಕ್ಯಾಂಪ್​​ ಶುರುವಾಗಿದ್ರೂ ಇನ್ನೂ ಬೂಮ್ರಾ ಬರದೇ ಇರುವುದು ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.

ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಈಗಾಗಲೇ ಕ್ಯಾಂಪ್​ಗೆ ಬಂದಿಳಿದಿದ್ದಾರೆ. ಸದ್ಯ ಎನ್‌ಸಿಎಯಲ್ಲಿ ಪುನರ್ವಸತಿ ಎದುರಿಸುತ್ತಿರುವ ಸೂರ್ಯಕುಮಾರ್ ಯಾದವ್ ಯಾವಾಗ ಬರುತ್ತಾರೋ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಇದರ ನಡುವೆ ಬೂಮ್ರಾ ಈವರೆಗೂ ಶಿಬಿರ ಸೇರಿಕೊಂಡಿಲ್ಲ. ಇದು ಮುಂಬೈ ತಂಡದಲ್ಲಿನ ಭಿನ್ನಾಭಿಪ್ರಾಯವನ್ನು ಎತ್ತಿ ತೋರಿಸುತ್ತಿದ್ದು, ನಾಯಕತ್ವದ ಬದಲಾವಣೆಯಿಂದ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಲ್ಲೋಲ-ಕಲ್ಲೋಲ; ಹಾರ್ದಿಕ್​​ಗೆ ಬಿಗ್​ ಶಾಕ್​ ಕೊಟ್ಟ ಬೂಮ್ರಾ..!

https://newsfirstlive.com/wp-content/uploads/2024/03/Hardik_Bumrah.jpg

Load More