/newsfirstlive-kannada/media/post_attachments/wp-content/uploads/2024/06/BHUMRAH-2.jpg)
ಟಿ20 ವಿಶ್ವಕಪ್​​ನಲ್ಲಿ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಜಸ್​ಪ್ರೀತ್ ಬೂಮ್ರಾ ಅವರು, ಪ್ಲೇಯರ್ ಆಫ್ ದ ಟೂರ್ನಮೆಂಟ್​ ಪ್ರಶಸ್ತಿಗೆ ಭಾಜನರಾದರು. ಈ ವಿಶ್ವಕಪ್‌ನಲ್ಲಿ ಬೂಮ್ರಾ ಎಂಟು ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದರು. ಸೋಲಿಗೆ ಸಿಲುಕಿದ್ದ ಭಾರತ ತಂಡವನ್ನು ಅನೇಕ ಬಾರಿ ಗೆಲುವಿನ ಹಳಿಗೆ ತಂದಿದ್ದಾರೆ.
/newsfirstlive-kannada/media/post_attachments/wp-content/uploads/2024/06/ROHIT_SHARMA_T20.jpg)
ಟಿ20 ವಿಶ್ವಕಪ್​​ನಲ್ಲಿ 15 ವಿಕೆಟ್​​ಗಳನ್ನು ಪಡೆದು ಸಾಧನೆ ಮಾಡಿರುವ ಬೂಮ್ರಾ ಪಂದ್ಯ ಮುಗಿದ ಬಳಿಕ ಮಾತನಾಡಿದರು. ಸಾಮಾನ್ಯವಾಗಿ ನಾನು ಎಮೋಷನಲ್​ ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತೇನೆ. ಇಂದು ನನಗೆ ಹೆಚ್ಚು ಪದಗಳು ಬರುತ್ತಿಲ್ಲ. ಸಾಮಾನ್ಯವಾಗಿ ಆಟದ ನಂತರ ನಾನು ಅಳುವುದಿಲ್ಲ. ಕೆಲವೊಮ್ಮೆ ಭಾವನೆಗಳು ಹಾಗೆ ಮಾಡಿಬಿಡುತ್ತದೆ. ನನ್ನ ಕುಟುಂಬ ಇಲ್ಲಿದೆ. ನಾವು ಕೆಲಸವನ್ನು ಪೂರ್ಣಗೊಳಿಸಿದ್ದೇವೆ. ಇದಕ್ಕಿಂತ ಸಂತೋಷ ಇನ್ನೊಂದಿಲ್ಲ ಎಂದಿದ್ದಾರೆ.
ಇನ್ನು ಫೈನಲ್ ಪಂದ್ಯದಲ್ಲಿ ಬೂಮ್ರಾ ಅವರು ತಮ್ಮ ಕೋಟಾದ 4 ಓವರ್​ಗಳಲ್ಲಿ ಅದ್ಭುತ್ ಸ್ಪೆಲ್ ಮಾಡಿದರು. ಕೇವಲ 18 ರನ್​​ಗಳನ್ನು ಮಾತ್ರ ನೀಡಿ, ಎರಡು ವಿಕೆಟ್ ಪಡೆದುಕೊಂಡರು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us