newsfirstkannada.com

ರಾಂಚಿ ಟೆಸ್ಟ್​ನಿಂದ ಸ್ಟಾರ್ ವೇಗಿ ಔಟ್..!? BCCIಗೆ ಹಾಗೆ ಮಾಡ್ಲೇಬೇಡಿ ಎಂದು ಕೈಮುಗಿದ ಫ್ಯಾನ್ಸ್..!

Share :

Published February 20, 2024 at 12:28pm

    ಗೆಲುವಿನ ಹಳಿಯಲ್ಲಿರೋವಾಗ ಈ ನಿರ್ಧಾರ ಬೇಕಿತ್ತಾ..?

    ಈ ಆಟಗಾರ ಆಡದಿದ್ರೆ ಭಾರತಕ್ಕೆ ಬಿಗ್ ಲಾಸ್​

    ಇಂಗ್ಲೆಂಡ್ ವಿರುದ್ಧ ರಾಂಚಿಯಲ್ಲಿ 4ನೇ ಟೆಸ್ಟ್ ಪಂದ್ಯ

ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಪಂದ್ಯ ಗೆದ್ದಾಗಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ ಕಣ್ಣು ಇದೀಗ ಸರಣಿ ಮೇಲೆ ನೆಟ್ಟಿದೆ. ಆದ್ರೆ ಎಲ್ಲವೂ ಸರಿ ಇದೆ, ನೆಕ್ಸ್ಟ್​​ ಮ್ಯಾಚ್​ ಗೆಲ್ತಾರೆ ಅಂದುಕೊಳ್ಳುವಾಗ್ಲೇ ಸ್ಟಾರ್ ವೇಗಿ ತಂಡದಿಂದ ಬೀಳುವ ಸುದ್ದಿ ಕೇಳಿ ಬರ್ತಿದೆ. ಒಂದು ವೇಳೆ ಈ ಮ್ಯಾಚ್ ವಿನ್ನರ್​​​ ಅಲಭ್ಯರಾಗಿದ್ದೆ ಆದ್ರೆ ಭಾರತದ ಬೌಲಿಂಗ್​ ಲೈನ್​ಅಪ್​ ಹಳಿ ತಪ್ಪೋದು ಗ್ಯಾರಂಟಿ. ಅಷ್ಟಕ್ಕೂ ಆ ಸ್ಟಾರ್​ ಬೌಲರ್​?

ರಾಂಚಿ ಟೆಸ್ಟ್​ನಿಂದ ಜಸ್​ಪ್ರಿತ್ ಬೂಮ್ರಾ ಔಟ್​​..?
ಸೋಲಿನೊಂದಿಗೆ ಸರಣಿಯಲ್ಲಿ ಅಭಿಯಾನ ಆರಂಭಿಸಿದ್ದ ಟೀಮ್ ಇಂಡಿಯಾ 3 ಪಂದ್ಯಗಳ ಮುಕ್ತಾಯಕ್ಕೆ 2-1ರ ಮುನ್ನಡೆ ಸಾಧಿಸಿದೆ. ಹೈದ್ರಾಬಾದ್​​​​ನಲ್ಲಿ ಮುಗ್ಗರಿಸಿ, ವೈಜಾಗ್ ಹಾಗೂ ರಾಜ್​ಕೋಟ್​​ನಲ್ಲಿ ವಿಜಯ ಪತಾಕೆ ಹಾರಿಸಿದೆ. ರಾಂಚಿ ಪಂದ್ಯ ಗೆದ್ದರೆ ಸಾಕು ಸರಣಿ ಭಾರತದ ಪಾಲಾಗಲಿದೆ. ಕೋಟ್ಯಾನುಕೋಟಿ ಫ್ಯಾನ್ಸ್​​​​ ಪ್ರಾರ್ಥನೆ ಕೂಡ ಅದಕ್ಕಾಗಿ ಕಾಯ್ತಿದ್ದಾರೆ. ಇಂತ ಹೊತ್ತಲ್ಲೆ ತಂಡದ ಬೆಂಕಿ ಬೌಲರ್ ಜಸ್​ಪ್ರಿತ್ ಬೂಮ್ರಾ ರಾಂಚಿ ಟೆಸ್ಟ್​ ಆಡಲ್ಲ ಎಂಬ ಶಾಕಿಂಗ್​ ಸುದ್ದಿ ಕೇಳಿ ಬಂದಿದೆ.

ಭಾರತ ತಂಡ ಬ್ಯಾಕ್ ಟು ಬ್ಯಾಕ್​ ಪಂದ್ಯ ಗೆದ್ದ ಬೆನ್ನಲ್ಲೆ ಬಿಸಿಸಿಐ ಸ್ಟಾರ್ ವೇಗಿ ಜಸ್​ಪ್ರಿತ್ ಬೂಮ್ರಾಗೆ ವಿಶ್ರಾಂತಿ ನೀಡಲು ಮುಂದಾಗಿದೆ. ಸದ್ಯ ಬಗ್ಗೆ ಬಿಗ್ ಡಿಬೇಟ್ ನಡೀತಿದೆ. ಕೆಲವರು ಮ್ಯಾಚ್ ವಿನ್ನರ್​ಗೆ ರೆಸ್ಟ್​​​ ನೀಡ್ಬಾರ್ದು ಅಂತ ಹೇಳಿದ್ರೆ ಮತ್ತೆ ಕೆಲವರು ಸೀನಿಯರ್ ಬೌಲರ್​ಗೆ ವಿಶ್ರಾಂತಿ ನೀಡ್ಬೇಕು ಅಂತ ವಾದಿಸ್ತಿದ್ದಾರೆ. ಆದರೆ ಸರಣಿ ಗೆಲುವಿನ ದೃಷ್ಟಿಯಿಂದ ಬೂಮ್ರಾ ರಾಂಚಿ ಟೆಸ್ಟ್​​​ನಲ್ಲಿ ಕಣಕ್ಕಿಳಿಯಲೇಬೇಕು.

ಸ್ಟಾರ್​​ ಬೌಲರ್​ಗೆ ರೆಸ್ಟ್​​​​ ನೀಡೋದು ಬೇಡವೇ ಬೇಡ
ಜಸ್​ಪ್ರೀತ್ ಬೂಮ್ರ ಮ್ಯಾಚ್ ವಿನ್ನರ್ ಬೌಲರ್ ಅನ್ನೋದು ಎಲ್ಲರಿಗೂ ಗೊತ್ತಿದೆ. ಮಿಂಚಿನ ದಾಳಿ ನಡೆಸಿ ಎದುರಾಳಿಯನ್ನ ಮಣ್ಣು ಮುಕ್ಕಿಸ್ತಿದ್ದಾರೆ. ಇವರ ಬೆಂಕಿ ಬಿರುಗಾಳಿ ದಾಳಿಯನ್ನ ಎದುರಿಸಲಾಗದೇ ಸ್ಟೋಕ್ಸ್​ ಪಡೆ ಹೇಳ ಹೆಸರಿಲ್ಲದೇ ಬಿಲ ಸೇರ್ತಿದೆ. ಇದಕ್ಕೆ ಪ್ರಸಕ್ತ ಇಂಗ್ಲೆಂಡ್ ಸರಣಿಯಲ್ಲಿ ಅವರು ನೀಡಿದ ಅದ್ಭುತ ಪ್ರದರ್ಶನವೇ ಸಾಕ್ಷಿ

ಪ್ರಸಕ್ತ ಸರಣಿಯಲ್ಲಿ ಬೂಮ್ರಾ
ಸದ್ಯ ಇಂಗ್ಲೆಂಡ್ ಎದುರಿನ ಟೆಸ್ಟ್​​ ಸರಣಿಯಲ್ಲಿ ಜಸ್​ಪ್ರಿತ್ ಬೂಮ್ರಾ ಆರು ಇನ್ನಿಂಗ್ಸ್​ ಆಡಿದ್ದು 2.87ರ ಎಕಾನಮಿಯಲ್ಲಿ 17 ವಿಕೆಟ್ ಕಬಳಿಸಿದ್ದಾರೆ. 45 ರನ್​ಗೆ 6 ವಿಕೆಟ್ ಪಡೆದಿರೋದು ಬೆಸ್ಟ್ ಬೌಲಿಂಗ್ ಸಾಧನೆ ಆಗಿದೆ. ಇಂತಹ ಮ್ಯಾಚ್ ವಿನ್ನಿಂಗ್ ಬೌಲರ್​​ಗೆ ಬಿಸಿಸಿಐ ರೆಸ್ಟ್ ಕೊಡಲು ಹೋಗ್ತಿರೋದು ಸರಿನಾ ನೀವೆ ಹೇಳಿ? ಹೈದ್ರಾಬಾದ್​ ಟೆಸ್ಟ್​​ನಲ್ಲಿ ಭಾರತ ತಂಡ ಸೋತು ಸುಣ್ಣವಾಗಿತ್ತು. ವೈಜಾಗ್​ನಲ್ಲಿ ಗೆಲುವಿನ ಗಿಫ್ಟ್​​ ಕೊಟ್ಟಿದ್ದೇ ಈ ಬೂಮ್ ಬೂಮ್​​​ ಬೂಮ್ರ. ಎರಡು ಇನ್ನಿಂಗ್ಸ್ ಸೇರಿ 6 ವಿಕೆಟ್ ಕಬಳಿಸಿ ಆಂಗ್ಲರ ಹೆಡೆಮುರಿ ಕಟ್ಟಿದ್ರು. ರಾಜ್​ಕೋಟ್​​​ನಲ್ಲೂ ಅದೇ ಖದರ್​​​​ ಮರುಕಳಿಸ್ತು.

ಬೂಮ್ರಾ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ
ಬೂಮ್ರಾ ರಾಂಚಿ ಟೆಸ್ಟ್​ನಿಂದ ಹೊರಬಿದ್ರೆ ಅವರ ಸ್ಥಾನಕ್ಕೆ ಬೇರೆ ಆಟಗಾರ ಬರಬಹುದು. ಆದ್ರೆ ಅವರಂತೆ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ಬೌಲರ್​ಗಳಿಲ್ಲ. ವಿಕೆಟ್ ಟೇಕರ್​ ಮೊಹಮ್ಮದ್ ಶಮಿ ಸರಣಿ ಆಡುತ್ತಿಲ್ಲ. ಮುಖೇಶ್ ಕುಮಾರ್​​ ಇದ್ರೂ ಪರಿಣಾಮಕಾರಿ ಸ್ಪೆಲ್​ ನಡೆಸ್ತಿಲ್ಲ. ಉಮೇಶ್ ಯಾದವ್​ ತಂಡದಿಂದ ಹೊರಬಿದ್ದು ಅದೆಷ್ಟೋ ದಿನಗಳಾಗಿದೆ. ಹೀಗಾಗಿ ಬೂಮ್ರಾ ಮುಂದಿನ ಟೆಸ್ಟ್​ನಲ್ಲಿ ಆಡ್ಲೇಬೇಕು. ಇಲ್ಲವಾದ್ರೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಭಾರತದ ಫಾಸ್ಟ್​ ಬೌಲಿಂಗ್ ಡೆಪ್ತ್​​ ಮಾಯ
ಕಳೆದೆರಡು ವರ್ಷಗಳಿಂದ ಟೀಮ್ ಇಂಡಿಯಾದ ಫಾಸ್ಟ್ ಬೌಲಿಂಗ್​ ಡೆಪ್ತ್​ ಇಲ್ಲವಾಗಿದೆ. ಒಂದು ಟೈಮ್​ನಲ್ಲಿ ಬೂಮ್ರಾ, ಮೊಹಮ್ಮದ್​​ ಶಮಿ, ಉಮೇಶ್ ಯಾದವ್​​, ಇಶಾಂತ್​ ಶರ್ಮಾ, ಶಾರ್ದುಲ್ ಠಾಕೂರ್​​, ಭುವನೇಶ್ವರ್​ ಕುಮಾರ್​​, ಟಿ ನಟರಾಜನ್​​​, ಹೀಗೆ ಸಾಲು ಸಾಲು ಬೌಲರ್ಸ್​ ಟೆಸ್ಟ್​ ತಂಡದಲ್ಲಿದ್ರು. ಆದ್ರೀಗ, ಬೆರಳಣಿಕೆಯಷ್ಟೆ ಫಾಸ್ಟ್ ಬೌಲರ್​ಗಳಿದ್ದಾರೆ. ಇಂತಾ ಹೊತ್ತಲ್ಲಿ ಬಿಸಿಸಿಐ ಬೂಮ್ರಾಗೆ ರೆಸ್ಟ್​ ನೀಡುವ ನಿರ್ಧಾರ ಸರೀನಾ ಅನ್ನೋದು ಸದ್ಯ ಪ್ರಶ್ನೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ರಾಂಚಿ ಟೆಸ್ಟ್​ನಿಂದ ಸ್ಟಾರ್ ವೇಗಿ ಔಟ್..!? BCCIಗೆ ಹಾಗೆ ಮಾಡ್ಲೇಬೇಡಿ ಎಂದು ಕೈಮುಗಿದ ಫ್ಯಾನ್ಸ್..!

https://newsfirstlive.com/wp-content/uploads/2024/02/BHUMRAH-5.jpg

Load More