IPLಗೂ ಮುನ್ನ ಮುಂಬೈ ಇಂಡಿಯನ್ಸ್​ಗೆ ಆಘಾತ; ಬೂಮ್ರಾಗೆ ಶೇನ್​ ಬಾಂಡ್ ಎಚ್ಚರಿಕೆ..!

author-image
Ganesh
Updated On
IPLಗೂ ಮುನ್ನ ಮುಂಬೈ ಇಂಡಿಯನ್ಸ್​ಗೆ ಆಘಾತ; ಬೂಮ್ರಾಗೆ ಶೇನ್​ ಬಾಂಡ್ ಎಚ್ಚರಿಕೆ..!
Advertisment
  • ಆರಂಭಿಕ ಪಂದ್ಯಗಳಿಂದ ವೇಗಿ ಬೂಮ್ರಾ ಔಟ್
  • ಡೇಂಜರ್​.. ಡೇಂಜರ್​​.. ಬೂಮ್ರಾಗೆ ವಾರ್ನಿಂಗ್​
  • ಮತ್ತೆ ಇಂಜುರಿಯಾದ್ರೆ ಬೂಮ್ರಾ ಕರಿಯರ್​​ ಖತಂ?

ಟೀಮ್​ ಇಂಡಿಯಾ ವೇಗಿ ಜಸ್​ಪ್ರೀತ್​ ಬೂಮ್ರಾ ಕರಿಯರ್​​ಗೆ ಸಂಕಷ್ಟ ಎದುರಾಗಿದೆ. ಒಂದು ಸಣ್ಣ ಯಡವಟ್ಟು ಬೂಮ್ರಾ ಕರಿಯರ್​ನೇ ಫಿನಿಶ್​ ಮಾಡಲಿದೆ.

ಇಂಡಿಯನ್​ ಪ್ರೀಮಿಯರ್​​ ಲೀಗ್​ ಸೀಸನ್​ 18ಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಮಾರ್ಚ್​​ 22 ರಿಂದ ಕಲರ್​ಫುಲ್​ ಲೀಗ್​ ಆರಂಭವಾಗಲಿದ್ದು ಕ್ರಿಕೆಟ್​ ಹಬ್ಬಕ್ಕಾಗಿ ಫ್ಯಾನ್ಸ್​ ಕಾದು ಕುಳಿತಿದ್ದಾರೆ. ಈಗಾಗಲೇ ಟೂರ್ನಿಗೆ ಸಿದ್ಧತೆ ಆರಂಭಿಸಿರೋ ಫ್ರಾಂಚೈಸಿಗಳು ಕಪ್​ ಗೆಲುವಿನ ಮೇಲೆ ಕಣ್ಣಿಟ್ಟಿವೆ. IPLನ ಮೋಸ್ಟ್​ ಸಕ್ಸಸ್​ಫುಲ್​ ಫ್ರಾಂಚೈಸಿ ಮುಂಬೈ ಇಂಡಿಯನ್ಸ್​ ಕೂಡ ಐಪಿಎಲ್​ಗೆ ಸಿದ್ಧತೆ ಆರಂಭಿಸಿದೆ. ಆದ್ರೆ ಸಿದ್ಧತೆಯ ಹಂತದಲ್ಲಿರೋವಾಗ್ಲೇ ಆಘಾತ ಎದುರಾಗಿದೆ.

IPLಗೂ ಮುನ್ನ ಮುಂಬೈ ಇಂಡಿಯನ್ಸ್​ಗೆ ಆಘಾತ

ಈ ಸೀಸನ್​​ನ ಆರಂಭಕ್ಕೂ ಮೊದಲೇ ಮುಂಬೈಗೆ ಇಂಜುರಿಯ ಆಘಾತ ಎದುರಾಗಿದೆ. ಆರಂಭಿಕ ಕೆಲ ಪಂದ್ಯಗಳಿಂದ ಮ್ಯಾಚ್​ವಿನ್ನರ್​ ವೇಗಿ ಜಸ್​ಪ್ರಿತ್​ ಬೂಮ್ರಾ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂಜುರಿಗೆ ತುತ್ತಾದ ಬೂಮ್ರಾ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಫುಲ್​​ ಫಿಟ್​ ಆಗಲು ಇನ್ನೂ ಹೆಚ್ಚಿನ ಸಮಯದ ಅಗತ್ಯವಿದೆ. ಹೀಗಾಗಿ 18ನೇ ಸೀಸನ್​​ನ ಫಸ್ಟ್​ ಹಾಫ್​​ನಿಂದಲೇ ಬೂಮ್ರಾ ಹೊರಬೀಳುವ ಸಾಧ್ಯತೆಯಿದೆ.

ಇದನ್ನೂ ಓದಿ: ಮತ್ತೆ ವಿಘ್ನ.. ಕೊನೆ ಸೆಕೆಂಡ್​ನಲ್ಲಿ ಕೈಕೊಟ್ಟ ಮಷಿನ್; ಸುನಿತಾ ವಿಲಿಯಮ್ಸ್​​ ಭೂಮಿಗೆ ಬರೋದು ಮತ್ತೆ ವಿಳಂಬ!

publive-image

ಡೇಂಜರ್​.. ಡೇಂಜರ್​​.. ಡೆಂಜರ್​..!

ಫುಲ್​ ಫಿಟ್​ ಆಗಿಲ್ಲ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೇ ಲೆಜೆಂಡರಿ ವೇಗಿ ಶೇನ್​ ಬಾಂಡ್​ ಬೂಮ್ರಾಗೆ ವಾರ್ನಿಂಗ್​ ಕೊಟ್ಟಿದ್ದಾರೆ. ಸದ್ಯ ಬೂಮ್ರಾ ಬಳಲ್ತಿರುವಂತೆ ಶೇನ್​ ಬಾಂಡ್​ ಕೂಡ ಬ್ಯಾಕ್​ ಇಂಜುರಿಯ ಸಮಸ್ಯೆ ಎದುರಿಸಿದ್ರು. ಬಳಿಕ ಸರ್ಜರಿಗೆ ಒಳಗಾಗಿ ಕ್ರಿಕೆಟ್​ ಕಮ್​ಬ್ಯಾಕ್​ ಮಾಡಿದ್ರು. ಬೂಮ್ರಾ ಕೂಡ 2 ವರ್ಷದ ಹಿಂದೆ ಸರ್ಜರಿಗೆ ಒಳಗಾದವರೇ. ಇನ್​​ಫ್ಯಾಕ್ಟ್​​ ಶೇನ್​​ ಬಾಂಡ್​ಗೆ ಶಸ್ತ್ರಚಿಕಿತ್ಸೆ ಮಾಡಿದ್ರಲ್ವಾ? ನ್ಯೂಜಿಲೆಂಡ್​ನ ಆ ಖ್ಯಾತ ವೈದ್ಯರೇ ಬೂಮ್ರಾಗೂ ಸರ್ಜರಿ ಮಾಡಿದ್ದು. ಸರ್ಜರಿ ಬಳಿಕ ಕಮ್​ಬ್ಯಾಕ್​ ಮಾಡಿ 2 ವರ್ಷ ಆಗಿಲ್ಲ. ಅದಾಗಲೇ ಮತ್ತೆ ಇಂಜುರಿಯಾಗಿದೆ. ಇದ್ರ ಬೆನ್ನಲ್ಲೇ ಬಾಂಡ್​, ಈ ಇಂಜುರಿ ತೀವ್ರ ಅಪಾಯಕಾರಿ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಇನ್ನೊಂದು ಇಂಜುರಿಯಾದ್ರೆ ಕರಿಯರ್​​ ಖತಂ

ಬಾಂಡ್ ಹೇಳುವ ಪ್ರಕಾರ ಇನ್ನೊಂದು ಇಂಜುರಿಯಾದ್ರೆ ಬೂಮ್ರಾ ಕರಿಯರ್​ ಅಂತ್ಯವಾಗಲಿದ್ಯಂತೆ. ಬೂಮ್ರಾ ವಿಭಿನ್ನವಾದ ಬೌಲಿಂಗ್​ ಶೈಲಿ ಹೊಂದಿರೋದ್ರಿಂದ ಬೆನ್ನಿನ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಇದ್ರಿಂದಾಗಿ ಮತ್ತೊಮ್ಮೆ ಬ್ಯಾಕ್​ ಇಂಜುರಿಗೆ ತುತ್ತಾದ್ರೆ, ಕರಿಯರ್​​ ಅಂತ್ಯವಾಗಲಿದೆ ಎಂದು ಬಾಂಡ್​ ಎಚ್ಚರಿಸಿದ್ದಾರೆ. ಈಗಾಗಲೇ ಸರ್ಜರಿ ಮಾಡಿದ ಜಾಗಕ್ಕೆ ಮತ್ತೊಂದು ಸರ್ಜರಿ ಮಾಡೋದು ಅಸಾಧ್ಯದ ವಿಚಾರವಾಗಿದೆ. ಹೀಗಾಗಿ ಇಂಜುರಿ ವಿಚಾರದಲ್ಲಿ ಬೂಮ್ರಾ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ ಎಂದಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸವೇ ಬೂಮ್ರಾಗೆ ಮುಳು?

ಬೂಮ್ರಾ ಕರಿಯರ್​​ ಆತಂಕಕ್ಕೆ ಸಿಲುಕಿರೋದಕ್ಕೆ ಆಸ್ಟ್ರೇಲಿಯಾ ಪ್ರವಾಸವೇ ಕಾರಣ ಅಂತಿದ್ದಾರೆ ಶೇನ್​ ಬಾಂಡ್​. ಅಸ್ಟ್ರೇಲಿಯಾ ಪ್ರವಾಸದ 5 ಟೆಸ್ಟ್​ ಪಂದ್ಯಗಳಲ್ಲಿ ಬೂಮ್ರಾ ಒಟ್ಟಾರೆ 15.1 ಓವರ್​ ಬೌಲಿಂಗ್​ ಮಾಡಿದ್ರು. ಬಾಕ್ಸಿಂಗ್​ ಟೆಸ್ಟ್​ ಪಂದ್ಯವೊಂದರಲ್ಲೇ 52 ಓವರ್​ ಬೌಲಿಂಗ್​ ಮಾಡಿದ್ರು. ಹೀಗೆ ಸತತವಾಗಿ ಬೌಲಿಂಗ್​ ಮಾಡಿ ದಣಿದಿದ್ದೇ ಇಂಜುರಿಗೆ ಕಾರಣವಾಯ್ತು ಅನ್ನೋದು ಶೇನ್​ ಬಾಂಡ್​ ಹೇಳ್ತಿರೋ ಮಾತಾಗಿದೆ.

ಇದನ್ನೂ ಓದಿ: ಜಸ್ಟ್ 6 ನಿಮಿಷದಲ್ಲಿ 1 ಮಿಲಿಯನ್​ ಲೈಕ್ಸ್..! ಕೊಹ್ಲಿ ದಾಖಲೆ ಬ್ರೇಕ್ ಮಾಡಿದ ಪಾಂಡ್ಯರ ಈ ಪೋಸ್ಟ್..!

ವರ್ಕ್​ಲೋಡ್​ ಮ್ಯಾನೇಜ್​​ ಮಾಡದಿದ್ರೆ ಕಷ್ಟ

ಗಾಯದಿಂದ ಚೇತರಿಸಿಕೊಳ್ತಿರೋ ಬೂಮ್ರಾ, ಕಮ್​ಬ್ಯಾಕ್​ ಮಾಡಿದ ಬಳಿಕ ವರ್ಕ್​ಲೋಡ್​ ಮ್ಯಾನೇಜ್​ಮೆಂಟ್​​​ ಮಾಡಬೇಕಿದೆ. ಶೇನ್​ ಬಾಂಡ್ ಹೇಳ್ತಿರೋ ಪ್ರಕಾರ ಬೂಮ್ರಾ ಸತತವಾಗಿ 2ಕ್ಕಿಂತ ಹೆಚ್ಚು ಪಂದ್ಯವನ್ನ ಆಡುವಂತೇ ಇಲ್ಲ. ಪ್ರತಿ 2 ಟೆಸ್ಟ್​ ಪಂದ್ಯಕ್ಕೆ ವಿಶ್ರಾಂತಿ ಪಡೆಯಬೇಕು. ಸ್ಪೆಲ್​ನಿಂದ ಸ್ಪೆಲ್​ ನಡುವೆ ಗ್ಯಾಪ್​ ಇರಬೇಕು. ಏಕದಿನ ಹಾಗೂ ಟಿ20 ಫಾರ್ಮೆಟ್​​ನಲ್ಲೂ ರೊಟೆಶನ್​ ಆಧಾರದಲ್ಲಿ ಆಡಬೇಕು. ಹೀಗೆ ಮಾಡಿದ್ರೆ ಮಾತ್ರ ಇಂಜುರಿ ಫ್ರಿ ಆಗಿರಲು ಸಾಧ್ಯ ಅನ್ನೋದು ಶೇನ್​ ಬಾಂಡ್​ ಅಭಿಪ್ರಾಯವಾಗಿದೆ.

ಒಂದು ಫಾರ್ಮೆಟ್​ಗೆ ಸೀಮಿತವಾಗ್ತಾರಾ ಬೂಮ್ರಾ?

ಸದ್ಯ ಚೇತರಿಕೆಕೊಳ್ತಿರೋ ಜಸ್​ಪ್ರಿತ್​ ಬೂಮ್ರಾ ಕೆಲ ದಿನಗಳಲ್ಲಿ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡೋ ಸಾಧ್ಯತೆಯಿದೆ. ವರ್ಕ್​ಲೋಡ್​ ಮ್ಯಾನೇಜ್​ಮೆಂಟ್​ ದೃಷ್ಟಿಯಿಂದ ಮೂರೂ ಫಾರ್ಮೆಟ್​ಗಳಲ್ಲಿ ಕಾಣಿಸಿಕೊಳ್ಳೋದು ಅನುಮಾನವಾಗಿದೆ. ಒಂದು ವೇಳೆ ಮೂರೂ ಫಾರ್ಮೆಟ್​ನಲ್ಲಿ ಉಳಿದ್ರೂ ಮಹತ್ವದ ಸರಣಿಗಳಲ್ಲಿ ಬೂಮ್ರಾ ಆಡಲಿದ್ದಾರೆ. ದ್ವಿಪಕ್ಷೀಯ ಸರಣಿಗಳಿಂದ ಬೂಮ್ರಾ ದೂರ ಉಳಿಯೋ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ರಿಷಭ್ ಪಂತ್ ಸಹೋದರಿ ಮದುವೆ ಸಂಭ್ರಮ.. ಹಳ್ದಿ, ಸಂಗೀತದಲ್ಲಿ ಮಿಂದೆದ್ದೆ ಕ್ರಿಕೆಟ್ ಸ್ಟಾರ್ಸ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment