/newsfirstlive-kannada/media/post_attachments/wp-content/uploads/2025/01/Bumrah-1.jpg)
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದನೇ ಮತ್ತು ಕೊನೆಯ ಟೆಸ್ಟ್​ನಲ್ಲಿ ಭಾರತಕ್ಕೆ ದೊಡ್ಡ ಆಘಾತ ಆಗಿದೆ. ನಾಯಕ ಜಸ್ಪ್ರೀತ್ ಬುಮ್ರಾ ಇದ್ದಕ್ಕಿದ್ದಂತೆ ಮೈದಾನದಿಂದ ನಿರ್ಗಮಿಸಿದ್ದಾರೆ.
ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ಬುಮ್ರಾ ಆಟದಿಂದ ಹೊರಗೆ ಉಳಿದಿದ್ದಾರೆ. ಅವರ ಬದಲಿಗೆ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬುಮ್ರಾ ಮೈದಾನದಿಂದ ಹೊರಹೋದ ಮೇಲೆ ನೇರವಾಗಿ ಕಾರು ಹತ್ತಿ ಆಸ್ಪತ್ರೆಗೆ ಹೊರಟಿರುವ ದೃಶ್ಯವನ್ನು ತೋರಿಸಲಾಗಿದೆ. ಹೀಗಾಗಿ ಅವರಿಗೆ ಬಲವಾದ ಗಾಯ ಆಗಿರುವ ಅನುಮಾನ ಕಾಡಿದೆ. ಒಂದು ವೇಳೆ ಹಾಗೇನಾದರೂ ಆಗಿದ್ದರೆ ತಂಡಕ್ಕೆ ಭಾರಿ ಹೊಡೆತ ಬೀಳಲಿದೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಪಾಲಿಗೆ ಲಕ್ಕಿ ವರ್ಷ 2024! ಹೆಂಗೆ ಅನ್ನೋ ವಿವರ ಇಲ್ಲಿದೆ..!
ಸುಮಾರು ಅರ್ಧ ಗಂಟೆಯ ನಂತರ ಅವರು ವೈದ್ಯಕೀಯ ತಂಡದೊಂದಿಗೆ ಹೊರಬಂದಿದ್ದಾರೆ. ಕಾಮೆಂಟರಿ ಮಾಡುತ್ತಿದ್ದ ರವಿಶಾಸ್ತ್ರಿ, ಬಹುಶಃ ಬುಮ್ರಾ ಅವರನ್ನು ಸ್ಕ್ಯಾನ್ ಮಾಡಿಸಲು ಕರೆದುಕೊಂಡು ಹೋಗಲಾಗಿದೆ ಎಂದು ಊಹಿಸಿದ್ದಾರೆ. ಸಿಡ್ನಿ ಟೆಸ್ಟ್‌ನ ಎರಡನೇ ದಿನದ ಹೊತ್ತಿಗೆ ಬುಮ್ರಾ 10 ಓವರ್‌ಗಳನ್ನು ಬೌಲ್ ಮಾಡಿದ್ದರು. ಅದರಲ್ಲಿ 2 ವಿಕೆಟ್ ಪಡೆದುಕೊಂಡಿದ್ದಾರೆ. ಎರಡನೇ ದಿನದಲ್ಲಿ ಬುಮ್ರಾ ಬೌಲಿಂಗ್ ಮಾಡುತ್ತಿಲ್ಲ. ಬುಮ್ರಾ ಹೊರಗುಳಿಯುತ್ತಿರುವುದು ಟೀಂ ಇಂಡಿಯಾಗೆ ಆತಂಕ ತಂದಿದೆ.
ಇದನ್ನೂ ಓದಿ:‘ನನ್ನ ನಿರ್ಧಾರ ಏನೆಂದರೆ..’ ಕೊನೆಗೂ ಉತ್ತರ ಕೊಟ್ಟ ಕ್ಯಾಪ್ಟನ್ ರೋಹಿತ್ ಶರ್ಮಾ
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us