newsfirstkannada.com

ಟೀಮ್ ಇಂಡಿಯಾದಲ್ಲಿ ಕೇಳಿ ಬಂದ ಅಪಸ್ವರ.. ತಂಡದ ನಾಯಕನ ಸ್ಥಾನಕ್ಕಾಗಿ ಬೂಮ್ರಾ ಓಪನ್ ಚಾಲೆಂಜ್!

Share :

Published July 28, 2024 at 2:37pm

    ಬೌಲರ್​ಗಳ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಬಿಚ್ಚಿಟ್ಟಿದ್ದು ಕುತೂಹಲ

    ಹೋರಾಟ ಧೈರ್ಯಶಾಲಿಯಾಗಿಸುತ್ತೆ, ನಾಯಕತ್ವಕ್ಕೆ ಧೈರ್ಯ ಬೇಕು

    ಪಾಕ್​ನ ಮಾಜಿ ಪ್ರಧಾನಿ ಹೆಸರು ಪ್ರಸ್ತಾಪಿಸಿದ ಜಸ್​ಪ್ರಿತ್ ಬೂಮ್ರಾ

ಸೂರ್ಯಕುಮಾರ್​​ ಟಿ20 ಕ್ಯಾಪ್ಟನ್. ರೋಹಿತ್​ ಶರ್ಮಾ ಏಕದಿನ ಹಾಗೂ ಟೆಸ್ಟ್​​ ಫಾರ್ಮೆಟ್​​​​ನ ನಾಯಕ​​​. ಸದ್ಯಕ್ಕಂತೂ ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ಸಿ ಸೀಟ್ ಖಾಲಿ ಇಲ್ಲ. ಈಗಿದ್ರೂ ಸ್ಟಾರ್ ಬೌಲರ್​ವೊಬ್ಬರು ನನಗೆ ಕ್ಯಾಪ್ಟನ್ಸಿ ಕೊಡಿ ಎಂದು ಬಿಸಿಸಿಐಗೆ ಡಿಮ್ಯಾಂಡ್ ಮಾಡಿದ್ದಾರೆ.

ಇದನ್ನೂ ಓದಿ: ಗಂಗಾವಳಿ ನದಿ ರಭಸಕ್ಕೆ ಮುಳುಗು ತಜ್ಞ ಈಶ್ವರ್ ಮಲ್ಪೆ ಶಾಕ್​.. 3 ಮೃತದೇಹಗಳ ಬಗ್ಗೆ ಏನ್ ಹೇಳಿದ್ದಾರೆ?

ಜಸ್​ಪ್ರೀತ್ ಬೂಮ್ರಾ ಟೀಮ್ ಇಂಡಿಯಾದ ಯಶಸ್ವಿ ಬೌಲರ್​​. ಹಂಗಾಮಿ ನಾಯಕನಾಗಿ ತಂಡವನ್ನ ಮುನ್ನಡೆಸಿದ ಹಮ್ಮೀರ. ಆದ್ರೆ ಬಿಸಿಸಿಐ ಯಾವತ್ತೂ ಸ್ಟಾರ್ ವೇಗಿಯನ್ನ ಕ್ಯಾಪ್ಟನ್​​ ಆಯ್ಕೆಯಲ್ಲಿ ಸಿರೀಸ್ ಆಗಿ ತೆಗೆದುಕೊಳ್ಳಲೇ ಇಲ್ಲ. ರೋಹಿತ್ ಉತ್ತರಾಧಿಕಾಯಾಗಿ ಪಾಂಡ್ಯ ಹಾಗೂ ಸೂರ್ಯಕುಮಾರ್ ಹೆಸರು ಕೇಳಿ ಬಂದ್ವು. ಆಗಲೂ ಬೂಮ್ರಾ ಹೆಸರು ನಾಪತ್ತೆ. ಇದೀಗ ಈ ಸ್ಟಾರ್ ವೇಗಿ ಕ್ಯಾಪ್ಟನ್ಸಿ ಕನಸನ್ನ ಬಿಚ್ಚಿಟ್ಟಿದ್ದು, ಬಿಗ್​​ಬಾಸ್​ಗಳಿಗೆ ಗೂಗ್ಲಿ ಎಸೆದಿದ್ದಾರೆ.

ಇದನ್ನೂ ಓದಿ: ಗೆಲುವು ಟೀಮ್ ಇಂಡಿಯಾದಿಂದ ಕೈಜಾರಿತ್ತು.. ಕೊನೆಯಲ್ಲಿ 22 ರನ್​ಗೆ 7 ವಿಕೆಟ್ ಕಿತ್ತು ರೋಚಕ ಫಿನಿಶಿಂಗ್..!

ಕ್ಯಾಪ್ಟನ್ಸಿ ನೀಡಲು ಬಿಸಿಸಿಐಗೆ ಓಪನ್ ಡಿಮ್ಯಾಂಡ್​..?​​​

ಮೊದಲ ಬಾರಿ ನಾಯಕತ್ವದ ಬಗ್ಗೆ ಆಸೆ ವ್ಯಕ್ತಪಡಿಸಿರೋ ಬೂಮ್ರಾ ಬಿಸಿಸಿಐಗೆ ಕ್ಯಾಪ್ಟನ್ಸಿ ನೀಡುವಂತೆ ಡಿಮ್ಯಾಂಡ್​​​ ಮಾಡಿದ್ದಾರೆ. ನಾನು ತಂಡದ ಹಿರಿಯ ಆಟಗಾರ. ಉನ್ನತ ಗ್ರೇಡ್ ಕೂಡ​​ ಹೊಂದಿದ್ದೇನೆ. ಹೀಗಾಗಿ ನನಗೆ ಕ್ಯಾಪ್ಟನ್ಸಿ ಕೊಡಿ ಎಂದು ಬಿಗ್​​ಬಾಸ್​ಗಳಿಗೆ ಮನದಾಳ ವ್ಯಕ್ತಪಡಿಸಿದ್ದಾರೆ.

ನೀವು ನನ್ನನ್ನ ನಾಯಕನನ್ನಾಗಿ ಮಾಡಿ ಎಂದು ತಂಡಕ್ಕೆ ಹೋಗಿ ಹೇಳಲು ಸಾಧ್ಯವಿಲ್ಲ. ಇದು ನನ್ನ ವೇತನ ಶ್ರೇಣಿಗಿಂತ ಮೇಲಿದ್ದು. ಬೌಲರ್ಸ್​ ನಿಜಕ್ಕೂ ಬುದ್ಧಿವಂತರು ಎಂದು ಭಾವಿಸುತ್ತೇನೆ, ಯಾಕೆಂದರೆ ನಾವು ಬ್ಯಾಟ್ಸ್​​ಮನ್​ಗಳನ್ನ ಔಟ್ ಮಾಡಬೇಕು. ಬ್ಯಾಟ್ಸ್​​​ಮನ್​​​​​​ಗಳು ಉತ್ತಮವಾಗಿ ಆಡುವುದರಿಂದ, ಸಣ್ಣ ಮೈದಾನದಲ್ಲಿ ಸದಾ ಹೋರಾಡುತ್ತೇವೆ. ಚೆಂಡನ್ನ ಸ್ವಿಂಗ್ ಮಾಡಲು ಬರುವ ಯಾವುದೇ ಆರ್ಟಿಕಲ್​​​​ ಅಥವಾ ತಂತ್ರಜ್ಞಾನ ನನಗೆ ನೆನಪಿಗೆ ಬರಲ್ಲ. ಜನರು ಬಾಲ್​​​​​​​​​ ಎಸೆಯುವುದನ್ನ ಖುಷಿ ಪಡುತ್ತಾರೆ ಹಾಗೂ ಸಿಕ್ಸರ್​ಗಳನ್ನ ಹೊಡೆಯುವುದನ್ನ ಕೂಡ ಆನಂದಿಸುತ್ತಾರೆ.

ಜಸ್​ಪ್ರಿತ್ ಬೂಮ್ರಾ, ಕ್ರಿಕೆಟಿಗ

ಬೌಲರ್​ಗಳು ಹಾರ್ಡ್​​ವರ್ಕ್​ ಮಾಡ್ತಾರೆ, ಚಾಲೆಂಜ್​ಗೆ ಹೆದರಲ್ಲ

ಇನ್ನು ಆನ್​ಫೀಲ್ಡ್​ನಲ್ಲಿ ಬೌಲರ್​ಗಳ ಪಾತ್ರ ಬಗ್ಗೆ ಬೂಮ್ರಾ ಇಂಟ್ರಸ್ಟಿಂಗ್ ಸಂಗತಿಗಳನ್ನ ಬಿಚ್ಚಿಟ್ಟಿದ್ದಾರೆ. ಯಾವ ಸವಾಲುಗಳಿಗೂ ಅಂಜದೇ ಹೊಸ ದಾರಿ ಕಂಡುಕೊಂಡು ಮುನ್ನುಗ್ಗುತ್ತಾರೆ ಎಂದು ಹೇಳಿದ್ದಾರೆ.

ಬೌಲರ್​ಗಳು ಕಠಿಣ ಕೆಲಸ ನಿರ್ವಹಿಸುತ್ತಾರೆ. ಅವರು ಬ್ಯಾಟ್​​​ನ ಹಿಂದೆ ಅಡಗಲ್ಲ. ಫ್ಲ್ಯಾಟ್​ ವಿಕೆಟ್​ ಹಿಂದೆ ಕೂಡ ಅಡಗಲ್ಲ. ಆಟದಲ್ಲಿ ಸೋತಾಗ ಬೌಲರ್​ಗಳನ್ನ ದೂಷಣೆ ಮಾಡಲಾಗುತ್ತೆ. ನಿಜಕ್ಕೂ ಬೌಲಿಂಗ್ ಮಾಡೋದು ಕಠಿಣ ಕೆಲಸ, ತುಂಬಾ ಹೆಮ್ಮೆ ಪಡುತ್ತೇನೆ. ಈ ಸವಾಲುಗಳಿಗಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಬೌಲರ್‌ಗಳು ಯಶಸ್ಸು ಕಾಣಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಹೋರಾಟ ನಿಮ್ಮನ್ನ ಧೈರ್ಯಶಾಲಿಯನ್ನಾಗಿಸುತ್ತೆ, ನಾಯಕತ್ವಕ್ಕೆ ಧೈರ್ಯದ ಅಗತ್ಯವಿದೆ.

ಜಸ್​ಪ್ರಿತ್ ಬೂಮ್ರಾ, ಕ್ರಿಕೆಟಿಗ

ಬೌಲರ್ಸ್​ ಕ್ಯಾಪ್ಟನ್ ಆಗೋದ್ರಲ್ಲಿ ತಪ್ಪೇನಿದೆ..?
​​​​
ಟೀಮ್ ಇಂಡಿಯಾದಲ್ಲಿ ಬೌಲರ್​ಗಳು ಕ್ಯಾಪ್ಟನ್ ಆಗೋದು ವಿರಳವಾಗಿದೆ. ಬ್ಯಾಟ್ಸ್​​​ಮನ್​ಗಳೇ ಹೆಚ್ಚಾಗಿ ತಂಡ ಮುನ್ನಡೆಸುತ್ತಾರೆ. ಇದಕ್ಕೆ ಮ್ಯಾಚ್ ವಿನ್ನರ್​​ ಬೂಮ್ರಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಎಲ್ಲಿ ಪಿನ್ ಇಟ್ರೆ ಏನಾಗುತ್ತೆಂದು ಗೊತ್ತು.. ಬೆಂಗಳೂರನ್ನೇ ಶಿವಾ ಅನಿಸಿಬಿಡ್ತೀನಿ..’ ಆತಂಕ ಹುಟ್ಟಿಸಿದ ಯುವಕ

ಪ್ಯಾಟ್​ ಕಮಿನ್ಸ್​​ ಉತ್ತಮವಾಗಿ ನಾಯಕತ್ವ ನಿಭಾಯಿಸೋದನ್ನ ನೋಡಿದ್ದೇವೆ. ನಾಯಕರಾಗಿ ವಾಸಿಂ ಅಕ್ರಂ ಕೂಡ ತಂಡ ಮುನ್ನಡೆಸಿದ್ದಾರೆ. ಕಪಿಲ್ ದೇವ್​ ಮತ್ತು ಇಮ್ರಾನ್ ಖಾನ್​​​ ನಾಯಕರಾಗಿ ವಿಶ್ವಕಪ್​​ ಗೆಲ್ಲಿಸಿ ಕೊಟ್ಟಿದ್ದಾರೆ. ಬೌಲರ್ಸ್​ ನಿಜಕ್ಕೂ ಬುದ್ಧಿವಂತರು. ಕೆಲವೊಮ್ಮೆ ದೈಹಿಕವಾಗಿ ಆಯಾಸಗೊಳ್ಳುತ್ತಾರೆ. ಹೀಗಾಗಿ ಬ್ಯಾಟ್ಸ್​​ಮನ್​ಗಳು ಕ್ಯಾಪ್ಟನ್ ಆಗುತ್ತಾರೆ.

ಜಸ್​ಪ್ರಿತ್ ಬೂಮ್ರಾ, ಕ್ರಿಕೆಟಿಗ

ನಾಯಕತ್ವ ಹೊರೆಯಲ್ಲ, ಜವಾಬ್ದಾರಿ ಹೊರಬೇಕು

ಇನ್ನು ನಾಯಕನಾದ ಮಾತ್ರಕ್ಕೆ ಒತ್ತಡ ಹೆಚ್ಚಾಗುತ್ತೆ ಅನ್ನೋ ಮಾತಿದೆ. ಅದಕ್ಕೆ ಬೂಮ್ರಾ ಕೂಡ ಧ್ವನಿಗೂಡಿಸಿದ್ದು, ನಾಯಕರಾಗಿ ಎಲ್ಲ ತೆರೆನಾದ ಜವಾಬ್ದಾರಿ ಹೊರಲು ಸಿದ್ಧನಾಗಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಮಹಿಳಾ ಅಧಿಕಾರಿ ಹಣೆಗೆ ಕುಂಕುಮ ಇಟ್ಟ ಸುನೀಲ್ ಬೋಸ್​.. ಸಂಸದನ ನಡೆ ಬಗ್ಗೆ ಭಾರೀ ಚರ್ಚೆ..! 

ಗ್ರಹಿಕೆಯಿಂದ ಫಲಿತಾಂಶ ಬದಲಾಗುತ್ತೆ. ಈ ಬೌಲಿಂಗ್ ಕೆಲಸ ಮಾಡಲ್ಲ ಎಂಬ ಗ್ರಹಿಕೆಯಿಂದ ನಾನು ಬಂದಿದ್ದೇನೆ. ಆದರೆ ಈಗ ಜನರು ಅದನ್ನು ಕಾಪಿ ಮಾಡಲು ಪ್ರಯತ್ನಿಸುತ್ತಾರೆ. ನೀವು ವಿಷಯಗಳನ್ನು ಹೇಳಲು ಪ್ರಯತ್ನಿಸಬೇಡಿ; ನಿಮ್ಮ ಫಲಿತಾಂಶ ಮಾತನಾಡಲಿ. ಪ್ಯಾಟ್ ಕಮಿನ್ಸ್ ಇದಕ್ಕೆ ಒಂದು ದೊಡ್ಡ ಉದಾಹರಣೆ. ಏಕದಿನ ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟ್ರೋಫಿ ಗೆದ್ದಿದ್ದಾರೆ. ನಾಯಕತ್ವ ನಿಜಕ್ಕೂ ಹೊರೆಯಲ್ಲ, ಕ್ರಿಕೆಟ್ ಆಡುವಾಗ ನೀವು ಜವಾಬ್ದಾರಿ ಹೊರಬೇಕು.

ಜಸ್​ಪ್ರಿತ್ ಬೂಮ್ರಾ, ಕ್ರಿಕೆಟಿಗ

ಜಸ್​ಪ್ರೀತ್​ ಬೂಮ್ರಾರ ಕ್ಯಾಪ್ಟನ್ಸಿ ಮಾತುಗಳು ಬಿಸಿಸಿಐಗೆ ಬಿಸಿತುಪ್ಪ ಆಗಿರೋದಂತೂ ನಿಜ. ಆದ್ರೆ ಸದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ಸಿ ಸೀಟ್ ಖಾಲಿ ಇಲ್ಲ. ಭವಿಷ್ಯದಲ್ಲಾದ್ರು ಬೂಮ್ರಾಗೆ ಕ್ಯಾಪ್ಟನ್ಸಿ ಪಟ್ಟ ಒಲಿಯುತ್ತಾ?. ಸ್ಟಾರ್​ ವೇಗಿಯ ಓಪನ್ ಡಿಮ್ಯಾಂಡ್​ ವರ್ಕ್​ ಆಗುತ್ತಾ ಅನ್ನೋದನ್ನ ಕಾದು ನೋಡೋಣ…

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್ ಇಂಡಿಯಾದಲ್ಲಿ ಕೇಳಿ ಬಂದ ಅಪಸ್ವರ.. ತಂಡದ ನಾಯಕನ ಸ್ಥಾನಕ್ಕಾಗಿ ಬೂಮ್ರಾ ಓಪನ್ ಚಾಲೆಂಜ್!

https://newsfirstlive.com/wp-content/uploads/2024/07/Bumrah-1.jpg

Load More