/newsfirstlive-kannada/media/post_attachments/wp-content/uploads/2025/04/Bumrah_RCB.jpg)
ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಸೋಲು ಮೇಲೆ ಸೋಲು ಕಾಣುತ್ತಿದೆ. ಸಾಲು ಸಾಲು ಟ್ರೋಫಿಗಳಿಗೆ ಮುತ್ತಿಕ್ಕಿದ್ದ ಮುಂಬೈ ಸದ್ಯ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಭಾರೀ ಅವಮಾನಗಳನ್ನು ಎದುರಿಸುತ್ತಿದೆ. ಲಕ್ನೋ ಜೊತೆ ಕೇವಲ 12 ರನ್ಗಳಿಂದ ಸೋತಿರುವುದು ಸಾಕಷ್ಟು ಟೀಕೆಗೆ ಒಳಗಾಗಿದೆ. ಸಂಕಷ್ಟದಲ್ಲಿರುವ ಮುಂಬೈ ಇಂಡಿಯನ್ಸ್ಗೆ ಯಾರ್ಕರ್ ಸ್ಪೆಷಲಿಸ್ಟ್, ಒರ್ಲ್ಡ್ ನಂಬರ್-1 ಬೌಲರ್ ಜಸ್ಪ್ರಿತ್ ಬೂಮ್ರಾ ಅವರು ಅಧಿಕೃತವಾಗಿ ಎಂಟ್ರಿಯಾಗಿದ್ದಾರೆ.
ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾ ಅವರು ಕೆಲವು ತಿಂಗಳುಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದರಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಆದರೆ ಈಗ ಎಲ್ಲ ರೀತಿಯಲ್ಲೂ ಚೇತರಿಸಿಕೊಂಡು 2025ರ ಐಪಿಎಲ್ ಅಖಾಡಕ್ಕೆ ಕಾಲಿಟ್ಟಿದ್ದಾರೆ. ಇದರಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಆನೆ ಬಲ ಬಂದಂತೆ ಆಗಿದೆ. ಈಗಾಗಲೇ ಸೋತು ಸೊರಗಿರುವ ಮುಂಬೈಗೆ, ಒರ್ಲ್ಡ್ ಬೆಸ್ಟ್ ಬೌಲರ್ ಆಗಮನದಿಂದ ಸಂತಸದಲ್ಲಿ ತೇಲಾಡುತ್ತಿದೆ.
ಇದನ್ನೂ ಓದಿ: RCB ಸಮರಾಭ್ಯಾಸ, ಲೈವ್ ಪಂದ್ಯದಲ್ಲೇ ಫ್ಲಡ್ ಲೈಟ್ಸ್ ಆಫ್, ಪಾಕ್ಗೆ ಅವಮಾನ; ಇವು ಕ್ರಿಕೆಟ್‌ನ ಟಾಪ್- 6
ಈ ಕುರಿತು ಮುಂಬೈ ಇಂಡಿಯನ್ಸ್ ಸ್ಪೆಷಲ್ ವಿಡಿಯೋ ಮೂಲಕ ಜಸ್ಪ್ರಿತ್ ಬೂಮ್ರಾ ಅವರ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋದಲ್ಲಿ ಬೂಮ್ರಾ ಬಾಲ್ ಹಿಡಿದುಕೊಂಡು ಸಿಂಹಾಸನದ ಮೇಲೆ ಕುಳಿತುಕೊಳ್ಳುವ ದೃಶ್ಯ ಸಿನಿಮಾ ಸ್ಟೈಲ್ನಲ್ಲಿ ಬ್ಯಾಗ್ಗ್ರೌಂಡ್ ಮ್ಯೂಸಿಕ್, ವಾಯ್ಸ್ ಇದೆ. ಇಷ್ಟೇ ಅಲ್ಲದೇ ವಿಡಿಯೋಗೆ 𝑹𝑬𝑨𝑫𝒀 𝑻𝑶 𝑹𝑶𝑨𝑹 ಎನ್ನುವ ಟ್ಯಾಗ್ ಲೈನ್ ಸಖತ್ ಕಿಕ್ ಕೊಡುತ್ತಿದೆ.
ನಾಳೆ ವಾಂಖೆಡೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ನಡೆಯುವ ಪಂದ್ಯದಲ್ಲಿ ಮುಂಬೈ ಪರ ಬೂಮ್ರಾ ಅಖಾಡಕ್ಕೆ ಧುಮಕಲಿದ್ದಾರೆ. ಬೂಮ್ರಾ ಆಗಮನದಿಂದ ಆರ್ಸಿಬಿ ರನ್ಗಳಿಗೆ ಕಡಿವಾಣ ಬೀಳಬಹದು. ಏಕೆಂದರೆ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಬೂಮ್ರಾ ಬೌಲಿಂಗ್ ಎದುರಿಸಲು ಸ್ಟಾರ್ ಬ್ಯಾಟರ್ಗಳೇ ಸ್ಟ್ರಗಲ್ ಆಗ್ತಾರೆ. ಅದರಂತೆ ಐಪಿಎಲ್ ಪಂದ್ಯದಲ್ಲಿ ಬೂಮ್ರಾ ಅವರ 4 ಓವರ್ನಲ್ಲಿ ಆರ್ಸಿಬಿ ಬ್ಯಾಟರ್ಸ್ ಬ್ಯಾಟ್ ಬೀಸುವುದು ತುಸು ಕಷ್ಟವೇ ಆಗಿರುತ್ತದೆ.
ಬೂಮ್ರಾ ಬೌಲಿಂಗ್ ಆಡುವುದು ಎಂದರೆ ಆರ್ಸಿಬಿಗೆ ಚಾಲೆಂಜ್ ಆಗಿಯೇ ಇರುತ್ತದೆ. ಇನ್ನು ಇಷ್ಟು ದಿನ ಬೆಂಗಳೂರಿನಲ್ಲಿದ್ದ ಯಾರ್ಕರ್ ಸ್ಪೆಷಲಿಸ್ಟ್ ಸತತ ಅಭ್ಯಾಸ ನಡೆಸಿ ಫಿಟ್ ಆಗಿದ್ದಾರೆ. ಬಿಸಿಸಿಐನಿಂದ ಅಂತಿಮ ವೈದ್ಯಕೀಯ ಹಾಗೂ ಫಿಟ್ನೆಸ್ ಪ್ರಮಾಣ ಪತ್ರ ಪಡೆದ ಬಳಿಕ ಇದೀಗ ಮುಂಬೈ ತಂಡಕ್ಕೆ ಬೂಮ್ರಾ ಬಂದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ