Advertisment

ಟೀಂ ಇಂಡಿಯಾಗೆ ದೊಡ್ಡ ಆಘಾತ; ಚಾಂಪಿಯನ್ಸ್ ಟ್ರೋಫಿಯಿಂದ ಬುಮ್ರಾ ಮಿಸ್​..!

author-image
Ganesh
Updated On
ನನಗೆ ಈ ಬೌಲರ್​ನಾ ಕಂಡ್ರೆ ಭಯ ಎಂದ ವಿರಾಟ್​​​; ಕೊಹ್ಲಿಯನ್ನೇ ಕಾಡುತ್ತಿರೋ ವೇಗಿ ಯಾರು?
Advertisment
  • ಚಾಂಪಿಯನ್ಸ್​ ಟ್ರೋಫಿಗೆ ಫೈನಲ್ ತಂಡ ಪ್ರಕಟ
  • ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿರುವ ಬುಮ್ರಾ
  • ಬುಮ್ರಾ ಬದಲಿಗೆ ಯಾರನ್ನು ಆಯ್ಕೆ ಮಾಡಲಾಗಿದೆ..?

ಚಾಂಪಿಯನ್ಸ್​ ಟ್ರೋಫಿ ಎದುರು ನೋಡುತ್ತಿರುವ ಟೀಂ ಇಂಡಿಯಾಗೆ ದೊಡ್ಡ ಆಘಾತವಾಗಿದೆ. ಭಾರತ ತಂಡದ ಬೆನ್ನೆಲುಬು ಜಸ್​ಪ್ರಿತ್ ಬುಮ್ರಾ ಚಾಂಪಿಯನ್ಸ್​ ಟ್ರೋಫಿಯನ್ನು ಆಡುವುದಿಲ್ಲ ಎಂದು ಬಿಸಿಸಿಐ ಅಧಿಕೃತವಾಗಿ ಹೇಳಿದೆ.

Advertisment

ಬುಮ್ರಾ ಚಾಂಪಿಯನ್ಸ್ ಟ್ರೋಫಿ ಆಡುತ್ತಾರೋ, ಇಲ್ಲವೋ ಎಂಬ ಅನುಮಾನಗಳಿದ್ದವು. ಇದೀಗ ಈ ಎಲ್ಲಾ ಅನುಮಾನಗಳಿಗೆ ಬಿಸಿಸಿಐ ತೆರೆ ಎಳೆದಿದೆ. ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿರುವ ಬುಮ್ರಾರನ್ನು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿಸದಿರಲು ಬಿಸಿಸಿಐ ನಿರ್ಧರಿಸಿದೆ.
ಬುಮ್ರಾ ಸ್ಥಾನಕ್ಕೆ 23 ವರ್ಷದ ಹರ್ಷಿತ್ ರಾಣಾರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಂತಿಮವಾಗಿ 15 ಸದಸ್ಯರುಳ್ಳ ಬಲಿಷ್ಠ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಆಯ್ಕೆಯಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಔಟ್ ಆಗಿದ್ದಾರೆ. ಅವರ ಬದಲಿಗೆ 33 ವರ್ಷದ ವರುಣ್ ಚಕ್ರವರ್ತಿಗೆ ಬಿಸಿಸಿಐ ಮಣೆ ಹಾಕಿದೆ.

ಇದನ್ನೂ ಓದಿ: ನಟಿ ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟ.. ಸಿಸಿಬಿ ಅಧಿಕಾರಿಗಳಿಂದ ಬಿಗ್ ಶಾಕ್..!

publive-image

ಬಾರ್ಡರ್ ಗವಾಸ್ಕರ್ ಟೂರ್ನಿ ವೇಳೆ ಬುಮ್ರಾ ಗಾಯಕ್ಕೆ ಒಳಗಾಗದರು. ಅಲ್ಲಿಂದ ವಿಶ್ರಾಂತಿಯಲ್ಲಿ ಬುಮ್ರಾ ಇತ್ತೀಚೆಗೆ ಚೇತರಿಸಿಕೊಂಡು ಫಿಟ್ನೆಸ್​ಗಾಗಿ ಬೆಂಗಳೂರಿನ ಎನ್​ಸಿಎಗೆ ಆಗಮಿಸಿದ್ದರು. ಆದರೆ ಅವರಿಗೆ ಚೇತರಿಸಿಕೊಳ್ಳಲು ಇನ್ನೂ ಕೆಲವು ದಿನಗಳ ಅಗತ್ಯ ಇದೆ ಎಂದು ವರದಿಯಾಗಿದೆ.

Advertisment

ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ..!

ರೋಹಿತ್ ಶರ್ಮಾ (ಕ್ಯಾಪ್ಟನ್), ಶುಬ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.

ಇದನ್ನೂ ಓದಿ: ಭೀಮಾ ತೀರದಲ್ಲಿ ಬರೀ ರಕ್ತ ಚರಿತ್ರೆ.. ನಟೋರಿಯಸ್ ಬಾಗಪ್ಪನ ಕ್ರೈಂ ಡೈರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment