Advertisment

ಸೂರ್ಯ, ಬೂಮ್ರಾ ಗ್ಯಾರಂಟಿ.. ಈ ನಾಲ್ಕು ಆಟಗಾರರ ರಿಟೈನ್ ಮಾಡಿಕೊಳ್ಳಲು MI ನಿರ್ಧಾರ

author-image
Ganesh
Updated On
ಸೂರ್ಯ, ಬೂಮ್ರಾ ಗ್ಯಾರಂಟಿ.. ಈ ನಾಲ್ಕು ಆಟಗಾರರ ರಿಟೈನ್ ಮಾಡಿಕೊಳ್ಳಲು MI ನಿರ್ಧಾರ
Advertisment
  • ಮುಂದಿನ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ಗೆ ಹೊಸ ನಾಯಕ
  • ಮೆಗಾ ಹರಾಜಿಗೆ ತಯಾರಿ ನಡೆಸುತ್ತಿರುವ ಐಪಿಎಲ್ ಫ್ರಾಂಚೈಸಿಗಳು
  • ಮುಂಬೈ ಇಂಡಿಯನ್ಸ್​ನಿಂದ ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್..?

2024ರ ಐಪಿಎಲ್​ನಲ್ಲಿ ಕ್ಯಾಪ್ಟನ್ಸಿ ವಿಚಾರದಲ್ಲಿ ಭಾರೀ ಸುದ್ದಿಯಾಗಿದ್ದ ಮುಂಬೈ ಇಂಡಿಯನ್ಸ್​, ಈ ವರ್ಷ ಸೂರ್ಯ ಕುಮಾರ್ ಯಾದವ್​​​ಗೆ ಪಟ್ಟ ಕಟ್ಟುತ್ತದೆ ಎಂಬ ಮಾಹಿತಿ ಇದೆ. ಜೊತೆಗೆ ನಾಲ್ವರು ಪ್ರಮುಖ ಆಟಗಾರರನ್ನು ಉಳಿಸಿಕೊಂಡು ಉಳಿದ ಎಲ್ಲಾ ಆಟಗಾರರನ್ನು ಕೈಬಿಡುವ ಲೆಕ್ಕಾಚಾರದಲ್ಲಿದೆ.

Advertisment

ಮಾಹಿತಿಗಳ ಪ್ರಕಾರ.. ಸೂರ್ಯಕುಮಾರ್ ಯಾದವ್, ಬೂಮ್ರಾ, ರೋಹಿತ್ ಶರ್ಮಾ ಹಾಗೂ ತಿಲಕ್ ವರ್ಮಾರನ್ನು ಮಾತ್ರ ಮುಂಬೈ ಇಂಡಿಯನ್ಸ್ ಉಳಿಸಿಕೊಳ್ಳಲಿದೆ. ಇನ್ನುಳಿದಂತೆ ಹಾಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯರನ್ನು ತಂಡದಿಂದಲೇ ಕೈಬಿಡುವ ಸಾಧ್ಯತೆ ಇದೆ.

ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯ ಅವರನ್ನು ಬಿಡುಗಡೆ ಮಾಡುತ್ತದೆ. ಏಕೆಂದರೆ ಸೂರ್ಯಕುಮಾರ್ ಈಗ ಟಿ 20 ಸ್ವರೂಪದಲ್ಲಿ ದೇಶದ ನಾಯಕರಾಗಿದ್ದಾರೆ. ಹೀಗಾಗಿ ಅವರಿಗೇ ಮುಂಬೈ ಇಂಡಿಯನ್ಸ್ ತಂಡದ ಜಾವಾಬ್ದಾರಿಯನ್ನು ನೀಡಬಹುದು. 2024ರ ಐಪಿಎಲ್​ನಲ್ಲಿ ಹಾರ್ದಿಕ್ ಪಾಂಡ್ಯರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡು ನಾಯಕತ್ವ ಜವಾಬ್ದಾರಿಯನ್ನ ನೀಡಿತ್ತು. ರೋಹಿತ್ ಶರ್ಮಾ ಅವರಿಂದ ಕ್ಯಾಪ್ಟನ್ಸಿ ಕಿತ್ಕೊಂಡು ಪಾಂಡ್ಯಗೆ ನೀಡಿರೋದು ಭಾರೀ ಟೀಕೆಗೆ ಕಾರಣವಾಗಿತ್ತು.

ಇದನ್ನೂ ಓದಿ:ಹರಾಜಿಗೂ ಮುನ್ನ RCB ಉಳಿಸಿಕೊಳ್ಳುವ ಆಟಗಾರರ ಲಿಸ್ಟ್​; ಅಚ್ಚರಿಯ ರೀತಿಯಲ್ಲಿ ಫಾಫ್ ಹೆಸರು..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment