/newsfirstlive-kannada/media/post_attachments/wp-content/uploads/2025/04/Jasprit_Bumrah_RCB.jpg)
ಐಪಿಎಲ್ ಆರಂಭವಾಗಿ 2ನೇ ವಾರದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. 10 ತಂಡಗಳು ಗೆಲುವನ್ನೇ ಟಾರ್ಗೆಟ್ ಮಾಡಿದ್ದು ಟ್ರೋಫಿಗಾಗಿ ಬಿಗ್ ಫೈಟ್ ನಡೆಸಿವೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಓರ್ವ ಸ್ಟಾರ್ ಪ್ಲೇಯರ್ ಇಲ್ಲದೇ ಐಪಿಎಲ್ ಪಂದ್ಯಗಳಲ್ಲಿ ಏಳು ಬೀಳಿನ ದಾರಿಯಲ್ಲಿ ಸಾಗುತ್ತಿದೆ. ಇದರ ಮಧ್ಯೆ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾ ಮುಂಬೈ ಇಂಡಿಯನ್ಸ್ಗೆ ಬಿಗ್ ಶಾಕ್ ಕೊಟ್ಟಿದ್ದಾರೆ.
ಜಸ್ಪ್ರಿತ್ ಬೂಮ್ರಾ ಬಾಲ್ ಹಿಡಿದು ದಾಳಿಗೆ ಇಳಿದರೆ ಎದುರಾಳಿ ಬ್ಯಾಟ್ಸ್ಮನ್ಗಳು ಬ್ಯಾಟ್ ಬೀಸಲು ಹೆಣಗಾಡುತ್ತಾರೆ. ಇಂತಹ ಮೇನ್ ಬೌಲರ್ ಇಲ್ಲದೇ ಮುಂಬೈ ಇಂಡಿಯನ್ಸ್ ಸದ್ಯ ಸಂಕಷ್ಟಕ್ಕೆ ಒಳಗಾಗಿದೆ. ಆಡಿರುವ 3 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಸೋತಿದೆ. ಲಕ್ನೋ ವಿರುದ್ಧದ ಇಂದಿನ ಪಂದ್ಯಕ್ಕೆ ಜಸ್ಪ್ರಿತ್ ಬೂಮ್ರಾ ಎಂಟ್ರಿ ಕೊಡುತ್ತಾರೆ ಎನ್ನಲಾಗಿತ್ತು. ಆದರೆ ಬೂಮ್ರಾ ಇಂದಿನ ಪಂದ್ಯ ಆಡುತ್ತಿಲ್ಲ.
ಇದನ್ನೂ ಓದಿ: ಕೋಟಿ ಕೋಟಿ ದುಡ್ಡು ಜೇಬಿಗಿಳಿಸಿದ್ದ ಸ್ಟಾರ್ ಪ್ಲೇಯರ್ಸ್.. IPL ಆರಂಭದಿಂದಲೇ ಠುಸ್!
ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬೂಮ್ರಾ ಇಂದಿನ ಪಂದ್ಯ ಮಾತ್ರವಲ್ಲ, ಏಪ್ರಿಲ್ 7 ರಂದು ವಾಂಖೆಡೆಯಲ್ಲಿ ನಡೆಯುವ ಆರ್ಸಿಬಿ ವಿರುದ್ಧದ ಪಂದ್ಯ ಕೂಡ ಆಡುವುದು ಅನುಮಾನ. ಆರ್ಸಿಬಿ ಪಂದ್ಯದ ಜೊತೆಗೆ ಈ ಐಪಿಎಲ್ನ ಇನ್ನಷ್ಟು ಪಂದ್ಯಗಳನ್ನು ಜಸ್ಪ್ರಿತ್ ಬೂಮ್ರಾ ಮಿಸ್ ಮಾಡಿಕೊಳ್ಳಲಿದ್ದಾರೆ. 2025ರ ಆರಂಭದಿಂದ ಕ್ರಿಕೆಟ್ಗೆ ಮರಳಲು ಕಷ್ಟ ಪಡುತ್ತಿರುವ ಬೂಮ್ರಾ, ತಮ್ಮ ಇಂಜುರಿಗೆ ಚಿಕಿತ್ಸೆಗಾಗಿ ಇನ್ನಷ್ಟು ಸಮಯ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಬೆಂಗಳೂರಲ್ಲಿ ಜಸ್ಪ್ರಿತ್ ಬೂಮ್ರಾ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಐಪಿಎಲ್ನಲ್ಲಿ ಆಡಲು ಫುಲ್ ಫಿಟ್ ಆಗಿದ್ದೇನೆ ಎಂದು ಬಿಸಿಸಿಐನಿಂದ ವೈದ್ಯಕೀಯ ಅನುಮತಿ ಪಡೆಯಲು ಕಾಯುತ್ತಿದ್ದಾರೆ. ಬಿಸಿಸಿಐ ಫುಲ್ ಫಿಟ್ ಎಂದು ಹೇಳಿದ ಮೇಲೆ ಬೂಮ್ರಾ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಐಪಿಎಲ್ ಮುಗಿದ ಮೇಲೆ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಇರುವುದರಿಂದ ಬೂಮ್ರಾ ಮೇಲೆ ಹೆಚ್ಚು ಭಾರ ಹಾಕದೇ ಅಳೆದು ತೂಗಿ ಬಿಸಿಸಿಐ ಅನುಮತಿ ನೀಡಲಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ