ಟೆಸ್ಟ್​ ಕ್ರಿಕೆಟ್​​ಗೆ ನಾಯಕನ ಹೆಸರು ಫೈನಲ್.. ಅಧಿಕೃತ ಘೋಷಣೆ ಒಂದೇ ಬಾಕಿ..!

author-image
Ganesh
ಟೆಸ್ಟ್​ ಕ್ರಿಕೆಟ್​​ಗೆ ನಾಯಕನ ಹೆಸರು ಫೈನಲ್.. ಅಧಿಕೃತ ಘೋಷಣೆ ಒಂದೇ ಬಾಕಿ..!
Advertisment
  • ಟೆಸ್ಟ್ ತಂಡದ ನೂತನ ನಾಯಕನ ಹೆಸರು ಅಂತಿಮ
  • ಯಂಗ್​ಸ್ಟಾರ್​ಗೆ ಪಟ್ಟ ಕಟ್ಟಲು ಮುಂದಾದ ಬಿಸಿಸಿಐ
  • BCCIನಿಂದ ಅಧಿಕೃತ ಘೋಷಣೆಯೊಂದೇ ಬಾಕಿ

ರೋಹಿತ್ ಶರ್ಮಾ ಟೆಸ್ಟ್​ ನಿವೃತ್ತಿ ಬೆನ್ನಲ್ಲೇ ಟೆಸ್ಟ್​ ತಂಡದ ನಾಯಕ ಯಾರ್​ ಆಗ್ತಾರೆ ಎಂಬ ಪ್ರಶ್ನೆ ಕಾಡಿತ್ತು. ಇದೀಗ ನೂತನ ನಾಯಕನ ನೇಮಕ ಬಹುತೇಕ ಫೈನಲ್​ ಆಗಿದೆ. ಪಟ್ಟಾಭೀಷೇಕಕ್ಕೆ ಮಹೂರ್ತ ಫಿಕ್ಸ್​ ಮಾಡೋದೊಂದೇ ಬಾಕಿ ಉಳಿದಿರೋದು. ಯುವರಾಜ ಶುಭ್​ಮನ್​ ಗಿಲ್​​, ಟೆಸ್ಟ್​ ತಂಡದ ಸಿಂಹಾಸನವೇರಲಿದ್ದಾರೆ.

ಹೆಸರು ಫೈನಲ್​..!

ರೋಹಿತ್ ನಿವೃತ್ತಿಯ ಬಳಿಕ ಮುಂದಿನ ಟೆಸ್ಟ್ ತಂಡದ ಸಾರಥಿ ಯಾರು? ಎಂಬ ಚರ್ಚೆ ಜೋರಾಗಿತ್ತು. ಹಲವು ಹೆಸರುಗಳು ನಾಯಕತ್ವದ ರೇಸ್​​ನಲ್ಲಿದ್ವು. ಇದೀಗ ಈ ನಾಯಕನ ಸ್ಥಾನಕ್ಕೆ ಯಂಗ್ ಬ್ಯಾಟರ್ ಶುಭ್​ಮನ್ ಗಿಲ್ ಹೆಸರು ಬಹುತೇಕ ಅಂತಿಮವಾಗಿದೆ. ಈಗಾಗಲೇ ಈ ಬಗ್ಗೆ ಹಲವು ಸುತ್ತಿನ ಸಭೆ ನಡೆಸಿ ಚರ್ಚಿಸಿರುವ ಬಿಗ್​ಬಾಸ್​ಗಳು, ಟೆಸ್ಟ್ ತಂಡದ ನಾಯಕನ ಪಟ್ಟ ಕಟ್ಟಲು ರೆಡಿಯಾಗಿದ್ದಾರೆ. ಬಿಸಿಸಿಐನಿಂದ ಅಧಿಕೃತ ಘೋಷಣೆಯೊಂದಷ್ಟೇ ಬಾಕಿಯಿದೆ. ಅಂದ್ಹಾಗೆ ಗಿಲ್​ಗೆ ನಾಯಕತ್ವ ನೀಡೋ ಬಿಸಿಸಿಐನ ನಿರ್ಧಾರದ ಹಿಂದೆ ಹಲವು ಲೆಕ್ಕಾಚಾರಗಳಿವೆ.

ಇದನ್ನೂ ಓದಿ: RCB ಪ್ಲೇ ಆಫ್ ಸುಲಭವಲ್ಲ, ಮತ್ತಷ್ಟು ಕಷ್ಟ ಕಷ್ಟ.. 5 ಟೀಮ್​ಗಳ ಪಾಯಿಂಟ್ಸ್​ ಹೇಗಿದೆ​?

ಭವಿಷ್ಯದ ಬಗ್ಗೆ ಚಿಂತನ.. ಮಂಥನ..!

ಗಿಲ್​ಗೆ ಪಟ್ಟ ಕಟ್ಟಲು ಬಿಸಿಸಿಐ ವಲಯದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆಯೇ ಹೆಡ್ ಕೋಚ್ ಗೌತಮ್ ಗಂಭೀರ್, ಗಿಲ್​ ಜೊತೆಗೆ ಮಹತ್ವದ ಮೀಟಿಂಗ್ ನಡೆಸಿದ್ದಾರೆ. ಸುಮಾರು ನಾಲ್ಕೈದು ಗಂಟೆಗಳ ಕಾಲ ನಡೆದ ಈ ಮೀಟಿಂಗ್​ನಲ್ಲಿ ಟೆಸ್ಟ್​ ತಂಡದ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಶುಭ್​ಮನ್ ಗಿಲ್​ರ ಚಿಂತನೆಗಳ ಬಗ್ಗೆ ಗಂಭೀರ್ ಕೂಡ ಇಂಪ್ರೆಸ್ ಆಗಿದ್ದಾರೆ ಎನ್ನಲಾಗಿದೆ. ಸಭೆ ಬಳಿಕ ಬಿಸಿಸಿಐಗೆ ಗಂಭೀರ್​​ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ನಿನ್ನೆಯ ಪಂದ್ಯ ರದ್ದು.. ಅಭಿಮಾನಿಗಳಿಗೆ ಬಿಗ್​ ಅಪ್​ಡೇಟ್ಸ್​ ಕೊಟ್ಟ ಆರ್​ಸಿಬಿ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment