ಬೂಮ್ರಾ ಇಂಜುರಿ, ಭಾರತಕ್ಕೆ ದೊಡ್ಡ ಎಫೆಕ್ಟ್​.. ಮ್ಯಾನೇಜ್​ಮೆಂಟ್ ವಿರುದ್ಧ ಮಾಜಿ ಕ್ರಿಕೆಟರ್ ಗರಂ

author-image
Bheemappa
Updated On
ರೋಹಿತ್ ಶರ್ಮಾಗೆ ಬಿಗ್ ಶಾಕ್‌.. ಭಾರತ-ಆಸ್ಟ್ರೇಲಿಯಾ ಸಿಡ್ನಿ ಟೆಸ್ಟ್‌ಗೆ ಮಹತ್ವದ ನಿರ್ಧಾರ; ವಿಶ್ರಾಂತಿ ಫಿಕ್ಸ್‌?
Advertisment
  • ಆಟಗಾರರಿಗೆ ವಿಶ್ರಾಂತಿ ನೀಡುವ ಕುರಿತು ಶುರುವಾದ ಚರ್ಚೆ
  • ಜಸ್​ಪ್ರಿತ್ ಬೂಮ್ರಾ ಬಗ್ಗೆ ಸೂಕ್ಷ್ಮ ವಿಷಯ ಹೇಳಿದ ಸ್ಪಿನ್ನರ್
  • ಟೀಮ್ ಇಂಡಿಯಾ ವಿರುದ್ಧ ಮಾಜಿ ಕ್ರಿಕೆಟರ್ ಫುಲ್ ಆಕ್ರೋಶ

ಟೀಮ್​ ಇಂಡಿಯಾ ವೇಗಿ ಜಸ್​​ಪ್ರಿತ್ ಬೂಮ್ರಾ ಇಂಜುರಿ ಭಾರತೀಯ ಕ್ರಿಕೆಟ್​ ವಲಯದಲ್ಲಿ ಟೆನ್ಶನ್​ ಹೆಚ್ಚಿಸಿದೆ. ಬೂಮ್ರಾ ಮೇಲೆ ಓವರ್​​ಲೋಡ್​ ಹಾಕಿದ ಮ್ಯಾನೇಜ್​ಮೆಂಟ್​​ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ವೇಗಿಗಳ ವರ್ಕ್​ಲೋಡ್​​ ಮ್ಯಾನೇಜ್​ಮೆಂಟ್​ ಬಗ್ಗೆ ಪ್ರಶ್ನೆ ಎದ್ದಿದೆ. ಇದರ ನಡುವೆ ನಿಜಕ್ಕೂ ಟೀಮ್​ ಇಂಡಿಯಾ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಬೇಕಾ ಎನ್ನುವ ಚರ್ಚೆ ಶುರುವಾಗಿದೆ. ಪರ-ವಿರೋಧದ ಚರ್ಚೆ ಇಲ್ಲಿದೆ.

ಬಾರ್ಡರ್​​-ಗವಾಸ್ಕರ್​ ಟೆಸ್ಟ್​ ಸರಣಿ ಈಗ ಮುಗಿದ ಅಧ್ಯಾಯ.. ಟೀಮ್​ ಇಂಡಿಯಾ ಸೋತಿದ್ದು ಆಯಿತು. ಆಸಿಸ್​ ಟ್ರೋಫಿ ಗೆದ್ದಿದ್ದೂ ಆಯಿತು. ಇದೀಗ ಆ ಸರಣಿಯ ಸೈಡ್​ ಎಫೆಕ್ಟ್​​ ಭಾರತೀಯ ಕ್ರಿಕೆಟ್​ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಸರಣಿಯಲ್ಲಿ ಇಡೀ ಟೀಮ್​ ಇಂಡಿಯಾವನ್ನ ಹೆಗಲ ಮೇಲೆ ಹೊತ್ತಿದ್ದ ವೇಗಿ ಜಸ್​​ಪ್ರಿತ್​ ಬೂಮ್ರಾ ಇಂಜುರಿ ಸದ್ಯ ಟೆನ್ಶನ್​ ಹೆಚ್ಚಿಸಿದೆ.

publive-image

ಮತ್ತೆ ಶುರುವಾಯ್ತು ಬೆನ್ನುನೋವು.. ಇಂಜುರಿ ಆತಂಕ.!

ಬೂಮ್ರಾ, ಬಾರ್ಡರ್​-ಗವಾಸ್ಕರ್​ ಸರಣಿಯ ಕೊನೆಯ ಪಂದ್ಯದಲ್ಲಿ ಬ್ರೇಕ್​ಡೌನ್​ ಆಗಿದ್ದು ಗೊತ್ತಿದೆ. ಪಂದ್ಯದ ನಡುವೆ ಮೈದಾನ ತೊರೆದ ಬೂಮ್ರಾ, ಆಸ್ಪತ್ರೆಗೆ ಹೋಗಿ ಸ್ಕ್ಯಾನಿಂಗ್​ಗೂ ಒಳಗಾಗಿದ್ರು. ಬಳಿಕ ತಂಡ ಕೂಡಿಕೊಂಡರು ಬೌಲಿಂಗ್​ ಮಾಡಲಿಲ್ಲ. ಸ್ಕ್ಯಾನ್​ ರಿಪೋರ್ಟ್​​ ಬ್ಯಾಕ್​​ ಸ್ಪ್ಯಾಸಮ್​ ಅನ್ನೋ ಉತ್ತರವನ್ನ ಕೊಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ. ಯಾಕಂದ್ರೆ, ಸುದೀರ್ಘ ಕಾಲ ಬೆನ್ನುನೋವಿನಿಂದ ಬಳಲಿದ್ದ ಬೂಮ್ರಾ, 2023ರಲ್ಲಿ ಮೇಜರ್​ ಬ್ಯಾಕ್​ ಸರ್ಜರಿಗೆ ಒಳಗಾಗಿದ್ದರು. ಸದ್ಯಕ್ಕೆ ಇಂಜುರಿ ಸಣ್ಣ ಪ್ರಮಾಣದ್ದು ಎನ್ನಲಾಗಿದೆ. ಈ ಹಿಂದೆ ಸರ್ಜರಿ ಆಗಿದ್ದರಿಂದ ಗಾಯ ಉಲ್ಬಣವಾಗೋ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಬೂಮ್ರಾ ಮೇಲೆ ಓವರ್​​ಲೋಡ್​​.. ಹರ್ಭಜನ್​ ಗರಂ.!

ಬೂಮ್ರಾ ಇಂಜುರಿಗೆ ತುತ್ತಾದ ಬೆನ್ನಲ್ಲೇ ಟೀಮ್​ ಮ್ಯಾನೇಜ್​ಮೆಂಟ್​ ವಿರುದ್ಧ ಆಕ್ರೋಶ ವ್ಯಕ್ತವಾಗ್ತಿದೆ. ಬೂಮ್ರಾ ಟೀಮ್​ ಇಂಡಿಯಾದ ರಿಯಲ್​ ಮ್ಯಾಚ್​ ವಿನ್ನರ್.! ಬೂಮ್ರಾ ಇಲ್ಲದ ಭಾರತ ತಂಡ ದುರ್ಬಲ ಅನ್ನೋದು ಕ್ರಿಕೆಟ್​ ಜಗತ್ತಿಗೆ ಗೊತ್ತು. ಆದ್ರೂ, ವರ್ಕ್​​ಲೋಡ್​ ಮ್ಯಾನೇಜ್​ ಮಾಡುವಲ್ಲಿ ಟೀಮ್​ ಮ್ಯಾನೇಜ್​ಮೆಂಟ್​ ಎಡವಿದೆ. ಸರಣಿಯಲ್ಲಿ ಬೂಮ್ರಾ ಮೇಲೆ ಓವರ್​ಲೋಡ್​ ಹಾಕಿದ್ದಕ್ಕೆ ಕ್ರಿಕೆಟ್​ ಫ್ಯಾನ್ಸ್​, ಕ್ರಿಕೆಟ್​ ಎಕ್ಸ್​ಪರ್ಟ್ಸ್​, ಮಾಜಿ ಕ್ರಿಕೆಟರ್ಸ್​ ಗರಂ ಆಗಿದ್ದಾರೆ. ಹರ್ಭಜನ್​ ಸಿಂಗ್​ ಮ್ಯಾನೇಜ್​ಮೆಂಟ್​ ನಡೆಯನ್ನ ಪ್ರಶ್ನಿಸಿದ್ದಾರೆ.

‘ಕಬ್ಬಿನಿಂದ ರಸ ಹಿಂಡಿದಂತೆ ಬೂಮ್ರಾನ ಬಳಸಲಾಯ್ತು’

ಕಬ್ಬಿನಿಂದ ರಸ ಹಿಂಡಿದಂತೆ ಬೂಮ್ರಾನ ಬಳಸಲಾಗಿದೆ. ಹೆಡ್​ ಬ್ಯಾಟಿಂಗ್​ ಬಂದ್ರೆ, ಬೂಮ್ರಾಗೆ ಬಾಲ್​ ನೀಡು. ಲಬುಶೇನ್​ ಬಂದ್ರೆ, ಬೂಮ್ರಾಗೆ ಬಾಲ್​ ನೀಡು. ಸ್ಟೀವ್​ ಸ್ಮಿತ್​ ಬಂದ್ರೆ, ಬೂಮ್ರಾಗೆ ಬಾಲ್ ನೀಡು. ಬೂಮ್ರಾ ಎಷ್ಟು ಓವರ್​ ಬೌಲ್​ ಮಾಡಬಲ್ಲರು.? ಬೌಲ್​ ಮಾಡಿ ಮಾಡಿ ಅಂತ್ಯದಲ್ಲಿ ಅಲಭ್ಯರಾದ್ರು. ಬೂಮ್ರಾ ಇದ್ದಿದ್ರೆ ಆಸ್ಟ್ರೇಲಿಯಾ 5 ಟೆಸ್ಟ್​ನಲ್ಲಿ ಗೆಲ್ಲುತ್ತಿತ್ತೋ ಏನೋ. ಆದ್ರೆ, 8 ವಿಕೆಟ್​ಗಳಂತೂ ಉರುಳುತ್ತಿದ್ವು. ಈಗ ಬೆನ್ನು ನೋವು ಬಂದಿದೆ. ಮ್ಯಾನೇಜ್​ಮೆಂಟ್​​ ಈಗಲೇ ಬೂಮ್ರಾ, ಒಂದು ಪಂದ್ಯದಲ್ಲಿ ಎಷ್ಟು ಓವರ್​ ಬಾಲ್​ ಮಾಡಬೇಕು ಎಂದು ನಿರ್ಧರಿಸಬೇಕು.

ಹರ್ಭಜನ್​ ಸಿಂಗ್​, ಮಾಜಿ ಕ್ರಿಕೆಟಿಗ

ಬೂಮ್ರಾ v/s ಸಿರಾಜ್​.. ನಿಜಕ್ಕೂ ಯಾರಿಗೆ ಬೇಕಿದೆ ರೆಸ್ಟ್​.?

ಜಸ್​​ಪ್ರಿತ್​ ಬೂಮ್ರಾಗೆ ಬೆನ್ನುನೋವು ಕಾಣಿಸಿಕೊಂಡ ಬೆನ್ನಲ್ಲೇ ವರ್ಕ್​​ಲೋಡ್​ ಮ್ಯಾನೇಜ್​ಮೆಂಟ್​ ಬಗ್ಗೆ ಪ್ರಶ್ನೆ ಎದ್ದಿದೆ. ಬೂಮ್ರಾಗೆ ವಿಶ್ರಾಂತಿ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗ್ತಿದೆ. ಅಸಲಿಗೆ ಬೂಮ್ರಾಗಲ್ಲ.. ನಿಜವಾಗಲೂ ವಿಶ್ರಾಂತಿ ಬೇಕಾಗಿರೋದು ಮೊಹಮ್ಮದ್​ ಸಿರಾಜ್​​ಗೆ.

2023ರಿಂದ ಅತಿ ಹೆಚ್ಚು ಬೌಲಿಂಗ್​

2023 ರಿಂದ ಈವರಗೆ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತದ ಪರ ಮೊಹಮ್ಮದ್​ ಸಿರಾಜ್​ ಹೆಚ್ಚು ಓವರ್​ ಬೌಲಿಂಗ್​ ಹಾಕಿದ್ದಾರೆ. ಸಿರಾಜ್​ 681.4 ಓವರ್​ ಬೌಲಿಂಗ್​ ಮಾಡಿದ್ರೆ, ಸಿರಾಜ್​ಗಿಂತ 121 ಓವರ್​ ಕಡಿಮೆ ಅಂದ್ರೆ, ಬೂಮ್ರಾ 560.1 ಓವರ್​ ಬೌಲಿಂಗ್ ಮಾಡಿದ್ದಾರೆ. ಇನ್ನು, 247.3 ಓವರ್​, ಹಾರ್ದಿಕ್​ ಪಾಂಡ್ಯ 180.3, ಆರ್ಷ್​​ದೀಪ್​ ಸಿಂಗ್​ 177.3 ಓವರ್​ ಬೌಲಿಂಗ್​ ಮಾಡಿದ್ದಾರೆ.

ಬೂಮ್ರಾಗೆ ಹೋಲಿಸಿದ್ರೆ, ಮೊಹಮ್ಮದ್​ ಸಿರಾಜ್ ಹೆಚ್ಚು ದಣಿದಿದ್ದಾರೆ. 2023ರಿಂದ ಬೂಮ್ರಾಗಿಂತ ಹೆಚ್ಚು ಓವರ್​ ಬೌಲಿಂಗ್​ ಮಾಡಿದ್ದಾರೆ. ಈ ಲೆಕ್ಕಾಚಾರ ನೋಡಿದ್ರೆ, ಸಿರಾಜ್​ಗೆ​ ವಿಶ್ರಾಂತಿ ನೀಡಲೇಬೇಕಿದೆ.

ಮಾಜಿ ವೇಗಿ ಬಲ್ವಿಂದರ್​ ಸಂಧು ಖಡಕ್​ ಪ್ರಶ್ನೆ.!

ದಣಿದ ವೇಗಿಗಳಿಗೆ ವಿಶ್ರಾಂತಿ ನೀಡಬೇಕು ಎಂಬ ಒತ್ತಾಯದ ನಡುವೆ ಯಾಕೆ ವಿಶ್ರಾಂತಿ ನೀಡಬೇಕು ಅನ್ನೋ ಪ್ರಶ್ನೆ ಹುಟ್ಟಿದೆ. ವರ್ಕ್​ಲೋಡ್​​ ಮ್ಯಾನೇಜ್​​ಮೆಂಟ್​ ಎಂದವರಿಗೆ ಮಾಜಿ ಕ್ರಿಕೆಟಿಗ, ವಿಶ್ವಕಪ್​ ವಿನ್ನರ್​ ಬಲ್ವಿಂದರ್​​ ಸಿಂಗ್​ ಸಂಧು ಮರು ಪ್ರಶ್ನೆ ಎಸೆದಿದ್ದಾರೆ. ಬೌಲರ್​ಗಳ ಕೆಲಸಾನೇ ಬೌಲಿಂಗ್​ ಮಾಡೋದು ಎಂಬರ್ಥದಲ್ಲಿ ಮಾತನಾಡಿರೋ ಸಂಧು, ಇನ್ನಿಂಗ್ಸ್​​ನಲ್ಲಿ 20 ಓವರ್​​ ಬೌಲಿಂಗ್​ ಮಾಡೋಕೆ ಆಗಲ್ಲ ಅಂದ್ರೆ ಹೇಗೆ.? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಭಿಕ್ಷುಕನ ಜತೆ ಓಡಿ ಹೋಗಿದ್ದ 6 ಮಕ್ಕಳ ತಾಯಿ ಕೇಸ್​ಗೆ ಬಿಗ್​ ಟ್ವಿಸ್ಟ್​.. ಮಹಿಳೆ ಪತ್ತೆ, ಅಸಲಿಗೆ ಆಗಿದ್ದೇನು?

publive-image

‘ಭಾರತೀಯ ಕ್ರಿಕೆಟ್​ ಮರೆಯೋದೆ ಒಳ್ಳೆಯದು’

ವರ್ಕ್​ಲೋಡ್​.? ಬೂಮ್ರಾ ಎಷ್ಟು ಓವರ್​ ಬೌಲ್​ ಮಾಡಿದ್ದಾರೆ.? ಸುಮಾರು 150 ಅಲ್ವಾ.? ಆದ್ರೆ, ಅದು ಎಷ್ಟು ಪಂದ್ಯ.? ಎಷ್ಟು ಇನ್ನಿಂಗ್ಸ್​ನಿಂದ.? 5 ಪಂದ್ಯ ಅಥವಾ 9 ಇನ್ನಿಂಗ್ಸ್​ನಿಂದ ಅಲ್ವಾ.? ಅಂದ್ರೆ ಇನ್ನಿಂಗ್ಸ್​​ಗೆ 15 ಓವರ್​​, ಪಂದ್ಯಕ್ಕೆ 30 ಓವರ್​ ಆಯ್ತು. ಆ 15 ಓವರ್​ಗಳನ್ನೂ ಒಂದೇ ಸಲ ಹಾಕಿಲ್ಲ. ದಿನಕ್ಕೆ 15 ಓವರ್​ ಬೇರೆ ಬೇರೆ ಸ್ಪೆಲ್​​ಗಳಲ್ಲಿ ಹಾಕೋದು ಬೌಲರ್​ಗಳಿಗೆ ದೊಡ್ಡ ವಿಷಯವಲ್ಲ. ಟೆಸ್ಟ್​ನ​ ಐದೂ ದಿನ ನೀವೇನು ಬೌಲಿಂಗ್​ ಮಾಡಲ್ಲ. ಬೂಮ್ರಾ ಆ ಓವರ್​ ಹಾಕಲು 3 ರಿಂದ 4 ಸ್ಪೆಲ್​ ತೆಗೆದುಕೊಂಡಿದ್ದಾರೆ. ಈಗ ತಂಡದಲ್ಲಿ ಒಳ್ಳೆ ಫಿಸಿಯೋ, ಮಸಾಜರ್​, ಅದ್ಭುತ ಡಾಕ್ಟರ್​​ಗಳಿದ್ದಾರೆ. ಇಷ್ಟಿದ್ರೂ, ಇನ್ನಿಂಗ್ಸ್​ನಲ್ಲಿ 20 ಓವರ್​ ಬೌಲಿಂಗ್​ ಮಾಡೋಕೆ ಆಗಲ್ಲ ಅಂದ್ರೆ, ಆತ ಭಾರತೀಯ ಕ್ರಿಕೆಟ್​ ಮರೆಯೋದೆ ಒಳ್ಳೆಯದು.

ಬಲ್ವಿಂದರ್​ ಸಿಂಗ್​ ಸಂಧು, ಮಾಜಿ ಕ್ರಿಕೆಟಿಗ

ಬಲ್ವಿಂದರ್​ ಸಿಂಗ್​ ಸಂಧು ಮಾತಿನಲ್ಲಿ ಅರ್ಥವಿದೆ. ಆದ್ರೆ, ಪ್ರಾಕ್ಟಿಕಲಿ ಇದು ಅಸಾಧ್ಯದ ಮಾತೇ. ಬೂಮ್ರಾ ಸತತವಾಗಿ ಬೌಲಿಂಗ್ ಮಾಡಿ​ ದಣಿದು ಇಂಜುರಿ ಆಗಿರೋದು ಸತ್ಯ. ಬೂಮ್ರಾ ಅಥವಾ ಸಿರಾಜ್​ ಅಂತಲ್ಲ, 2023ರ ವಿಶ್ವಕಪ್​ ವೇಳೆ ಗಾಯಗೊಂಡು ಸರ್ಜರಿಗೆ ಒಳಗಾದ ಮೊಹ್ಮದ್​ ಶಮಿ ಇನ್ನೂ ಸಂಪೂರ್ಣ ಫಿಟ್​ ಆಗಿಲ್ಲ. ಈ ಎಲ್ಲಾ ಉದಾಹರಣೆ ಎದುರಿಗಿದೆ. ಹೀಗಾಗಿ ಮುಂದಾದ್ರೂ, ವೇಗಿಗಳ ವರ್ಕ್​​ಲೋಡ್​​ ಮ್ಯಾನೇಜ್​​ಮೆಂಟ್​​ ವಿಚಾರದಲ್ಲಿ ಟೀಮ್​ ಮ್ಯಾನೇಜ್​ಮೆಂಟ್​ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment