ಬೂಮ್ ಬೂಮ್ ಬೂಮ್ರಾ ಭವಿಷ್ಯ ಇವತ್ತು.. BCCI ಮೇಲೆ ವಿಶ್ವ ಕ್ರಿಕೆಟ್ ತಂಡಗಳ ಕಣ್ಣು..!

author-image
Ganesh
Updated On
‘ಇದು ನನ್ನ ಕೊನೆಯ ಪಂದ್ಯ..’ ಕೊಹ್ಲಿ, ಬೂಮ್ರಾ, ಪಾಂಡ್ಯ ಬಗ್ಗೆಯೂ ಮಾತನಾಡಿದ ರೋಹಿತ್..
Advertisment
  • ವರ್ಕ್​​ಲೋಡ್​ ಮ್ಯಾನೇಜ್​ಮೆಂಟ್​ಗೆ ಸ್ಪೆಷಲ್​ ಪ್ಲಾನ್
  • NCA​ ರಿಪೊರ್ಟ್​ ಮೇಲೆ ನಿಂತಿದೆ ಅಂತಿಮ ನಿರ್ಧಾರ
  • ಬೂಮ್ರಾ ಚಾಂಪಿಯನ್ಸ್​ ಟ್ರೋಫಿ ಆಡ್ತಾರಾ? ಇಲ್ವಾ?

ಇಂಗ್ಲೆಂಡ್​ ವಿರುದ್ಧ ಮೊದಲ 2 ಏಕದಿನ ಪಂದ್ಯಗಳನ್ನ ಗೆದ್ದಿರೋ ಟೀಮ್ ಇಂಡಿಯಾ ಚಾಂಪಿಯನ್ಸ್​ ಟ್ರೋಫಿ ಟೂರ್ನಿಗೆ ಭರ್ಜರಿಯಾಗಿ ಸಜ್ಜಾಗಿದ್ದಾರೆ. ಮತ್ತೊಂದು ಐಸಿಸಿ ಟೂರ್ನಿ ಗೆಲ್ಲಲು ಇಂಡಿಯನ್​ ಟೀಮ್​ ತುದಿಗಾಲಲ್ಲಿ ನಿಂತಿದೆ. ವೇಗಿ ಜಸ್​​ಪ್ರಿತ್​ ಬೂಮ್ರಾ ಲಭ್ಯತೆ ಸದ್ಯ ದೊಡ್ಡ ಪ್ರಶ್ನೆಯಾಗಿ ಟೀಮ್​ ಮ್ಯಾನೇಜ್​ಮೆಂಟ್​ನ ಕಾಡ್ತಿದೆ. ಆ ಪ್ರಶ್ನೆಗೆ ಉತ್ತರ ಇಂದು ಸಿಗಲಿದೆ.

ಬೂಮ್ರಾ ಚಾಂಪಿಯನ್ಸ್​ ಟ್ರೋಫಿ ಆಡಲ್ವಾ?

ಕಳೆದ ಆಸ್ಟ್ರೇಲಿಯಾ ಸರಣಿಯ ಕೊನೆಯ ಟೆಸ್ಟ್​ ವೇಳೆ ಜಸ್​ಪ್ರಿತ್​ ಬೂಮ್ರಾ ಇಂಜುರಿಗೆ ತುತ್ತಾಗಿದ್ರು. ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್​ ಮುಗಿಸಿ ಬಂದಿದ್ದ ಬೂಮ್ರಾ, ಆ ಬಳಿಕ ಬೌಲಿಂಗ್​ ಮಾಡಿರಲಿಲ್ಲ. ಭಾರತಕ್ಕೆ ವಾಪಾಸ್ಸಾದ ಬಳಿಕವೂ ಸಂಪೂರ್ಣ ವಿಶ್ರಾಂತಿಗೆ ಬೂಮ್ರಾ ಜಾರಿದ್ರು. ಇಂಜುರಿಯ ಹೊರತಾಗಿಯೂ ಬೂಮ್ರಾನ, ಚಾಂಪಿಯನ್ಸ್​ ಟ್ರೋಫಿ ತಂಡಕ್ಕೆ ಸೆಲೆಕ್ಟ್​ ಮಾಡಲಾಗಿದೆ. ಆದ್ರೆ, ಈವರೆಗೆ ಬೂಮ್ರಾ ಲಭ್ಯತೆಯ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಇಂದು ಬೂಮ್ರಾ ಆಡ್ತಾರಾ? ಇಲ್ವಾ? ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

ತಂಡದಲ್ಲಿ ಬದಲಾವಣೆಗೆ ಇಂದು ಕೊನೆಯ ದಿನ

ಜನವರಿ 18ಕ್ಕೆ ಚಾಂಪಿಯನ್ಸ್​ ಟ್ರೋಫಿ ಟೂರ್ನಿಗೆ ಟೀಮ್​ ಇಂಡಿಯಾ ಅನೌನ್ಸ್​ ಆಗಿದೆ. ಅದ್ರಲ್ಲಿ ಬದಲಾವಣೆ ಮಾಡಲು ಐಸಿಸಿ ಇಂದು ರಾತ್ರಿಯವರೆಗೆ ಅವಕಾಶ ನೀಡಿದೆ. ಹೀಗಾಗಿ ಬೂಮ್ರಾ ಲಭ್ಯತೆ, ಅಲಭ್ಯತೆಯ ಬಗ್ಗೆ ಇಂದು ಸ್ಪಷ್ಟತೆ ಸಿಗಲಿದೆ. ಇಂದು ಬೆಂಗಳೂರಿನ ಎನ್​ಸಿಎ ಫಿಟ್​ನೆಸ್​ ರಿಪೋರ್ಟ್​ ನೀಡಲಿದ್ದು, ಇದ್ರ ಆಧಾರದ ಮೇಲೆ ಬಿಸಿಸಿಐನ ನಿರ್ಧಾರ ನಿಂತಿದೆ.

ಇದನ್ನೂ ಓದಿ: 2025ರ ಐಪಿಎಲ್​​: RCB ಬಿಟ್ಮೇಲೂ ಫಾಫ್​​ ಡುಪ್ಲೆಸಿಸ್​​ಗೆ ಖುಲಾಯಿಸಿದ ಅದೃಷ್ಟ

publive-image

ಜನವರಿ 3ರಂದು ಇಂಜುರಿಗೆ ತುತ್ತಾಗಿದ್ದ ಬೂಮ್ರಾ, ಭಾರತಕ್ಕೆ ಬಂದ ಬಳಿಕ ಸಂಪೂರ್ಣ ವಿಶ್ರಾಂತಿಯ ಮೊರೆ ಹೋಗಿದ್ರು. ಅಭ್ಯಾಸ, ಜಿಮ್​ ಎಲ್ಲರದಿಂದ 5 ವಾರ ದೂರ ಉಳಿಯುವಂತೆ ತಂಡದ ಮೆಡಿಕಲ್​ ಟೀಮ್​ ಸೂಚಿಸಿತ್ತು. ಈ ತಿಂಗಳ ಆರಂಭದಲ್ಲಿ ಬೆಂಗಳೂರಿನ ಎನ್​ಸಿಎಗೆ ಬಂದಿರೋ ಬೂಮ್ರಾ, ಇಲ್ಲಿ ಮತ್ತೊಮ್ಮೆ ಸ್ಕ್ಯಾನಿಂಗ್​ಗೆ ಒಳಗಾಗಿದ್ರು. ಸ್ಕ್ಯಾನ್​ ರಿಪೋರ್ಟ್​ ಬಂದ ಬಳಿಕ ಎನ್​​ಸಿಎ ಮೆಡಿಕಲ್​ ಟೀಮ್​ ಬಿಸಿಸಿಐ ಜೊತೆ ಚರ್ಚಿಸಿದ್ದು, ನಿನ್ನೆಯಿಂದ ಬೂಮ್ರಾ ಸಣ್ಣ ಪ್ರಮಾಣದಲ್ಲಿ ಬೌಲಿಂಗ್​ ಹಾಗೂ ಜಿಮ್​ ವರ್ಕೌಟ್​ ಸ್ಟಾರ್ಟ್​​ ಮಾಡಿದ್ದಾರೆ. ಇಂದೂ ಕೂಡ ಇದೇ ಅಭ್ಯಾಸ ಮುಂದುವರೆಯಲಿದ್ದು, ಈ ಅಭ್ಯಾಸದ ವೇಳೆ ಯಾವುದೇ ನೋವು ಕಾಣಿಸಿಕೊಳ್ಳದಿದ್ರೆ, ಬೂಮ್ರಾ ಚಾಂಪಿಯನ್ಸ್​ ಟ್ರೋಫಿ ಆಡೋದು ಪಕ್ಕಾ.

1% ಅವಕಾಶವಿದ್ರೂ ಬೂಮ್ರಾ ಆಡ್ತಾರೆ

ಎನ್​ಸಿಎ ಮೂಲಗಳಿಂದ ಬಂದಿರೋ ಮಾಹಿತಿ ಪ್ರಕಾರ ಬಿಸಿಸಿಐ ಕಾದು ನೋಡೋ ತಂತ್ರದ ಮೊರೆ ಹೋಗಿದೆ. ಬೂಮ್ರಾ ಫಿಟ್​​ ಆಗ್ತಾರೆ ಅನ್ನೋ 1 ಪರ್ಸೆಂಟ್ ಅವಕಾಶವಿದ್ರೂ, ಬಿಸಿಸಿಐ ಹಾಗೂ ಟೀಮ್​ ಮ್ಯಾನೇಜ್​ಮೆಂಟ್​ ಕಾದು ನೋಡಲು ರೆಡಿ ಎಂಬ ಸಂದೇಶವನ್ನ ಈಗಾಗಲೇ ಎನ್​ಸಿಎಗೆ ರವಾನೆ ಮಾಡಲಾಗಿದೆ. ಈ ಹಿಂದೆ ಏಕದಿನ ವಿಶ್ವಕಪ್​ ವೇಳೆ ಹಾರ್ದಿಕ್​ ಪಾಂಡ್ಯ ಇಂಜುರಿಗೆ ತುತ್ತಾದಾಗಲೂ ಬಿಸಿಸಿಐ ಇದೇ ನಿಲುವು ತಳೆದಿತ್ತು. ಅಂತಿಮವಾಗಿ ಹಾರ್ದಿಕ್​​​ ಫಿಟ್​ ಆಗೋಕೆ ಸಾಧ್ಯಾನೇ ಇಲ್ಲ ಎಂದ ಬಳಿಕ ರಿಪ್ಲೇಸ್​ಮೆಂಟ್​ ಪ್ಲೇಯರ್​ನ ಅನೌನ್ಸ್​ ಮಾಡಿತ್ತು.

ವರ್ಕ್​​ಲೋಡ್ ಸ್ಪೆಷಲ್​ ಪ್ಲಾನ್​.!

ಈ ಹಿಂದೆ ಇಂಜುರಿಗೆ ತುತ್ತಾಗಿರೋ ಬೂಮ್ರಾ ಚೇತರಿಸಿಕೊಂಡು ಇಂಗ್ಲೆಂಡ್​ ಸರಣಿಯಲ್ಲಿ ಆಡಿ ಫಿಟ್​ನೆಸ್​ ಪ್ರೂವ್​ ಮಾಡ್ತಾರೆ ಎನ್ನಲಾಗಿತ್ತು. ಆದ್ರೀಗ ಬೂಮ್ರಾ ನೇರವಾಗಿ ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ ಆಡಲಿದ್ದಾರೆ. ಹೀಗಾಗಿ ಬೂಮ್ರಾ ವರ್ಕ್​ಲೋಡ್​ ಮ್ಯಾನೇಜ್​ಮೆಂಟ್​ ಸ್ಪೆಷಲ್​ ಪ್ಲಾನ್​ ರೂಪಿಸಲಾಗಿದೆ. ಪ್ಲಾನ್​ನಂತೆ ಗ್ರೂಪ್​ ಸ್ಟೇಜ್​​ನಲ್ಲಿ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಮಾತ್ರ ಕಣಕ್ಕಿಳಿಯೋ ಬೂಮ್ರಾ, ನಂತರ ಸೆಮಿಫೈನಲ್​ ಹಾಗೂ ಫೈನಲ್​ನಲ್ಲಿ ಮಾತ್ರ ಆಡಲಿದ್ದಾರೆ.

ವೇಗಿ ಜಸ್​ಪ್ರಿತ್​ ಬೂಮ್ರಾ ಇಲ್ಲದ ಟೀಮ್​ ಇಂಡಿಯಾ ಬೌಲಿಂಗ್​ ಅಟ್ಯಾಕ್​ ದುರ್ಬಲ ಅನ್ನೋದು ಓಪನ್​ ಸೀಕ್ರೆಟ್​. ಅನುಭವಿ ವೇಗಿ ಮೊಹಮ್ಮದ್​ ಶಮಿ ಕಮ್​ಬ್ಯಾಕ್​ ಮಾಡಿದ್ರೂ ಹಳೇ ಖದರ್​ ಕಾಣಿಸ್ತಿಲ್ಲ. ಹೀಗಾಗಿ ಬೂಮ್ರಾ ಬಂದ್ರೆ ಮಾತ್ರ ಟೀಮ್​ ಇಂಡಿಯಾ ಬೌಲಿಂಗ್​ಗೆ ಬರಲಿದೆ. ಅಂತಿಮವಾಗಿ ಈ ಮ್ಯಾಚ್​ ವಿನ್ನರ್​ ಬೂಮ್ರಾ ಆಡ್ತಾರಾ? ಇಲ್ವಾ? ಅನ್ನೋ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ. ಜೊತೆಗೆ ಬೂಮ್ರಾ ಔಟ್​ ಆದ್ರೆ, ರಿಪ್ಲೇಸ್​ಮೆಂಟ್​ ಪ್ಲೇಯರ್​​ ಆಗಿ ಯಾರು ಚಾನ್ಸ್​ ಗಿಟ್ಟಿಸಿಕೊಳ್ಳಲಿದ್ದಾರೆ ಅನ್ನೋ ಕುತೂಹಲಕ್ಕೂ ಬ್ರೇಕ್​ ಬೀಳಲಿದೆ.

ಇದನ್ನೂ ಓದಿ: ಜೂನಿಯರ್ ರಮ್ಯಾ ಆಗ್ತಾರಾ ದುನಿಯಾ ವಿಜಿ ಪುತ್ರಿ..? ಹೋಲಿಕೆ ಬಗ್ಗೆ ಮೋನಿಷಾ ವಿಜಯ್ ಮಾತು..! Video

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment