ಕ್ರಿಕೆಟ್ ಅಭಿಮಾನಿಗಳಿಗೆ ಬುಮ್ರಾ ಶಾಕ್.. ಅಚ್ಚರಿಯ ನಿರ್ಧಾರಕ್ಕೆ ಮುಂದಾದ್ರಾ..?

author-image
Ganesh
Updated On
ಕ್ಯಾಪ್ಟನ್ ಬೂಮ್ರಾ ಮೇಲೆ ಎಲ್ಲರ ಚಿತ್ತ.. ಮತ್ತೆ ಆತಂಕಕ್ಕೆ ಕಾರಣವಾಗ್ತಾರಾ ಬೂಮ್ ಬೂಮ್ ಬೂಮ್ರಾ..!?
Advertisment
  • ಫ್ಯಾನ್ಸ್​ಗೆ ಶಾಕ್ ನೀಡ್ತಾರಾ ಜಸ್​ಪ್ರೀತ್ ಬೂಮ್ರಾ..?
  • ಬೂಮ್ರಾ ಬೌಲಿಂಗ್​ನಲ್ಲಿಲ್ಲ ಮೊದಲಿನ ಖದರ್​​
  • ಟೆಸ್ಟ್​ ಕ್ರಿಕೆಟ್​ನಿಂದ ದೂರ ಸರೀತಾರಾ ಬೂಮ್ರಾ..?

ರೋಹಿತ್ ಶರ್ಮಾ.. ವಿರಾಟ್ ಕೊಹ್ಲಿ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಹೇಳಿದ್ದಾಯ್ತು. ಈಗ ಜಸ್​ಪ್ರೀತ್ ಬೂಮ್ರಾ ಸರದಿ ಬಂದಿದ್ಯಾ? ಇಂಥದ್ದೊಂದು ಪ್ರಶ್ನೆ ಈಗ ಕಾಡಲಾರಂಭಿಸಿದೆ. ಟೀಮ್ ಇಂಡಿಯಾದ ಬೌಲಿಂಗ್ ಬಲವಾಗಿರುವ ಬೂಮ್ರಾ ಯಾಕೆ ನಿವೃತ್ತಿ ಹೇಳ್ತಾರೆ ಎಂಬ ಪಶ್ನೆ ಶುರುವಾಗಿದೆ.

ಟೆಸ್ಟ್​ ಕ್ರಿಕೆಟ್​​ಗೆ ಬೂಮ್ರಾ ಗುಡ್ ಬೈ

ಸದ್ಯ ನಡೀತಿರೋ ಇಂಗ್ಲೆಂಡ್ ಪ್ರವಾಸದಲ್ಲಿ ಜಸ್​ಪ್ರೀತ್​ ಬೂಮ್ರಾ 2 ಬಾರಿ 5 ವಿಕೆಟ್ ಪಡೆದಿದ್ದಾರೆ. ಗರಿಷ್ಠ ವಿಕೆಟ್ ಟೇಕರ್​​ಗಳಲ್ಲಿ ಒಬ್ಬರಾಗಿದ್ದಾರೆ. ಉತ್ತಮ ಪ್ರದರ್ಶನ ನೀಡ್ತಾ ಇರೋ ಮ್ಯಾಚ್ ವಿನ್ನರ್​​ ಬೂಮ್ರಾ ಕ್ರಿಕೆಟ್​​ನಿಂದ ದೂರ ಸರೀತಾರೆ ಅಂದ್ರೆ ಎಂಥವರಿಗೂ ಶಾಕ್​ ಆಗುತ್ತೆ. ಈ ಸುದ್ದಿ ನಿಜವಾದ್ರೂ ಅಚ್ಚರಿಪಡಬೇಕಿಲ್ಲ.

ಇದನ್ನೂ ಓದಿ: ಸೊಸೆ ವಿರುದ್ಧ ಅತ್ತೆಗೆ ವಿಷ ನೀಡಿ ಜೀವ ತೆಗೆದ ಆರೋಪ; ಭಾರೀ ಸಂಚಲನ ಸೃಷ್ಟಿಸಿದ ಪತಿ, ಪತ್ನಿ ಪ್ರತ್ಯಾರೋಪಗಳು

publive-image

ಇಂಗ್ಲೆಂಡ್ ಪ್ರವಾಸದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಬೌಲಿಂಗ್ ಅಟ್ಯಾಕ್​ನ ಭರವಸೆಯಾಗಿದಿದ್ದೇ ಬೂಮ್ರಾ.! 5 ವಿಕೆಟ್​ ಪಡೆದಿರೋದ್ರ ಹೊರತಾಗಿಯೂ ಬೂಮ್ರಾ, ಇಂಗ್ಲೆಂಡ್ ಸರಣಿಯಲ್ಲಿ ಎಫೆಕ್ಟ್​ಲೆಸ್ ಆಗಿದ್ದಾರೆ. ಇದೇ ವಿಚಾರವಾಗಿಯೇ ಮಾಜಿ ಕ್ರಿಕೆಟರ್ ಮೊಹಮ್ಮದ್ ಕೈಫ್ ಸ್ಫೋಟಕ ಬಾಂಬ್ ಸಿಡಿಸಿದ್ದಾರೆ.

ಬೂಮ್ರಾ ಮುಂಬರುವ ಟೆಸ್ಟ್ ಪಂದ್ಯಗಳಲ್ಲಿ ಆಡುವುದನ್ನ ನೋಡದಿರಬಹದು. ನಿವೃತ್ತಿ ಹೊಂದಬಹುದು. ಬೂಮ್ರಾ, ತಮ್ಮ ದೇಹದೊಂದಿಗೆ ಹೋರಾಡ್ತಿದ್ದಾರೆ. ಈ ಟೆಸ್ಟ್ ಪಂದ್ಯದಲ್ಲಿ ಸೀಮ್ ಇರಲಿಲ್ಲ. ನಾನು ದೇಶಕ್ಕಾಗಿ 100ರಷ್ಟು ನೀಡಲು ಸಾಧ್ಯವಿಲ್ಲ. ಪಂದ್ಯ ಗೆಲ್ಲಲ್ಲು ಆಗಲಿಲ್ಲ. ವಿಕೆಟ್‌ ತೆಗೆದುಕೊಳ್ಳಲಾಗಲಿಲ್ಲ ಎಂದು ಭಾವಿಸಿದರೆ, ನಿವೃತ್ತಿ ತೆಗೆದುಕೊಳ್ತಾರೆ ಎಂಬುದುವುದು ನನ್ನ ಭಾವನೆ. ಬೂಮ್ರಾಗೆ ಅದೇ ಉತ್ಸಾಹವಿದೆ. ದೇಶಕ್ಕಾಗಿ ಆಡಬೇಕೆಂಬ ಹಂಬಲವಿದೆ. ದೈಹಿಕವಾಗಿ ಸೋತಿದ್ದಾರೆ. ಫಿಟ್ನೆಸ್ ಕಳೆದುಕೊಂಡಿದ್ದಾರೆ. ದೇಹ ಸ್ಪಂದಿಸುತ್ತಿಲ್ಲ. ಈ ಟೆಸ್ಟ್ ಪಂದ್ಯವೇ ಸ್ಪಷ್ಟ ಸಾಕ್ಷಿಯಾಗಿದೆ. ಮುಂದೆ ಸಮಸ್ಯೆಗಳು ಉಂಟಾಗುತ್ತವೆ ಎಂದು ನಾನು ಭಾವಿಸುತ್ತೇನೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೋದ್ರು. ಅಶ್ವಿನ್ ಇಲ್ಲ. ಈಗ ಬಹುಶಃ ಬೂಮ್ರಾ ಸರದಿ. ಫ್ಯಾನ್ಸ್​ ಅವರಿಲ್ಲದೆ ಟೆಸ್ಟ್ ಪಂದ್ಯಗಳನ್ನ ನೋಡಲು ಒಗ್ಗಿಕೊಳ್ಳಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಿಡಿಕ್ಷನ್​​ ತಪ್ಪಾಗಲಿ ಎಂದು ಪ್ರಾರ್ಥಿಸುತ್ತೇನೆ-ಮೊಹಮ್ಮದ್ ಕೈಫ್​, ಮಾಜಿ ಕ್ರಿಕೆಟರ್

ಇದನ್ನೂ ಓದಿ: ಇಂಜಿನಿಯರ್​ಗಳಿಗೆ ಜಾಬ್ ಮಾಡಲು ಯಾವ ದೇಶ ಬೆಸ್ಟ್​.. ಭಾರತ, ದುಬೈ..? ಉತ್ತರ ಯಾವುದು?

publive-image

ಮಾಜಿ ಕ್ರಿಕೆಟರ್ ಮೊಹಮ್ಮದ್ ಕೈಫ್​ ಹೇಳಿಕೆಯಲ್ಲಿ ಸತ್ಯವಿದೆ. ಲೋವರ್ ಬ್ಯಾಕ್ ಇಂಜುರಿಯಿಂದ ಚೇತರಿಸಿಕೊಂಡಿದ್ರೂ, ಬೂಮ್ರಾ ಫುಲ್​ ಫಿಟ್​ ಇಲ್ಲ. ಸರಣಿ ಮುಗಿದ ಬೆನ್ನಲ್ಲೇ ನೇರವಾಗಿ ಬೆಂಗಳೂರಿನ ಎನ್​ಸಿಎಗೆ ಬರ್ತಿದ್ದಾರೆ. 6 ತಿಂಗಳು ಕ್ರಿಕೆಟ್, 6 ತಿಂಗಳು ಮನೆಯಲ್ಲಿರುವ ಬೂಮ್ರಾ ಹಳೆ ಖದರ್​ನಲ್ಲಿಲ್ಲ. ಈ ಸರಣಿಯ ಅಂಕಿ-ಅಂಶಗಳೇ ಬೂಮ್ರಾ ಖದರ್​ ಮಾಯವಾಗಿರೋದನ್ನ ತಿಳಿಸ್ತಿವೆ.

ಬೂಮ್ರಾ ಬಿರುಗಾಳಿ ಮಾಯ

ಇಂಗ್ಲೆಂಡ್ ಪ್ರವಾಸದ ಹೆಡಿಂಗ್ಲೆ ಟೆಸ್ಟ್​ನಲ್ಲಿ 266 ಎಸೆತ ಬೌಲ್​ ಮಾಡಿದ್ದ ಬೂಮ್ರಾ, 106 ಎಸೆತಗಳನ್ನ 140 ಪ್ಲಸ್ ವೇಗದಲ್ಲಿ ಎಸೆದಿದ್ದರು. ಅಂದ್ರೆ ಶೇಖಡ 39.84ರಷ್ಟು ಎಸೆತಗಳನ್ನು 140 ವೇಗದಲ್ಲಿದ್ದವು. ಲಾರ್ಡ್ಸ್​ ಟೆಸ್ಟ್​ನಲ್ಲಿ 42 ಓವರ್​​ ಬೌಲಿಂಗ್ ಮಾಡಿದ್ದ ಬೂಮ್ರಾ, 69 ಎಸೆತಗಳನ್ನ 140ಕ್ಕೂ ಹೆಚ್ಚಿನ ವೇಗದಲ್ಲಿ ಹಾಕಿದ್ದಾರೆ. ಮ್ಯಾಂಚೆಸ್ಟರ್​ನ ಓಲ್ಡ್​ ಟ್ರಾಫರ್ಡ್​ನಲ್ಲಿ 3ನೇ ದಿನದಾಟದ ತನಕ 28 ಓವರ್​​ ಬೌಲ್​ ಮಾಡಿದ್ದ ಬೂಮ್ರಾ, ಕೇವಲ ಒಂದೇ ಒಂದು ಎಸೆತವನ್ನಷ್ಟೇ 140 ಪ್ಲಸ್​ ವೇಗದಲ್ಲಿ ಎಸೆದಿದ್ದರು.

ಈ ಅಂಕಿ ಅಂಶಗಳು ಜಸ್​ಪ್ರೀತ್ ಬೂಮ್ರಾ ಬೌಲಿಂಗ್​​ನಲ್ಲಿ ಧಮ್ ಮಾಯವಾಗಿದೆ ಅನ್ನೋದನ್ನ ಸಾರಿ ಸಾರಿ ಹೇಳ್ತಿದೆ. ಈ ಹಿಂದೆ ಬೂಮ್ರಾ ಹೇಳಿದ್ದ ಮಾತು ಕೂಡ, ನಿವೃತ್ತಿಯಾಗೋ ಸಾಧ್ಯತೆ ದಟ್ಟವಾಗಿಸಿದೆ.

ಇದನ್ನೂ ಓದಿ: ಹರಿದ್ವಾರದ ಮಾನಸ ದೇವಿ ದೇಗುಲದಲ್ಲಿ ಘೋರ ದುರಂತ; 6 ಭಕ್ತರು ಬಲಿ

publive-image

ಯಾವುದೇ ವ್ಯಕ್ತಿ ದೀರ್ಘಕಾಲ ಆಡುವುದು ಕಷ್ಟ. ನಾನು ಸ್ವಲ್ಪ ಸಮಯದಿಂದ ಆಡುತ್ತಿದ್ದೇನೆ. ನಿಮ್ಮ ದೇಹ ಎಲ್ಲಿಗೆ ಹೋಗುತ್ತಿದೆ. ಯಾವ ಪ್ರಮುಖ ಟೂರ್ನಿಗಳಿವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ನಿಮ್ಮ ದೇಹವನ್ನ ಹೇಗೆ ಬಳಸುತ್ತೀರಿ ಎಂಬುದರ ಬಗ್ಗೆ ನೀವು ಸ್ವಲ್ಪ ಜಾಣ್ಮೆಯಿಂದ ಇರಬೇಕು. ಕ್ರಿಕೆಟಿಗನಾಗಿ, ನಾನು ಏನನ್ನೂ ಬಿಟ್ಟುಕೊಡಲು ಬಯಸುವುದಿಲ್ಲ. ಯಾವಾಗಲೂ ಆಡುತ್ತಿರಲು ಬಯಸುತ್ತೇನೆ. ಈ ಪ್ರಯಾಣ ಶಾಶ್ವತವಾಗಿ ಇರುವುದಿಲ್ಲ. ಸದಾ ಕ್ರಿಕೆಟ್ ಆಡಲು ಬಯಸುತ್ತೇನೆ. ಆದರೆ ಯಾವುದೇ ವ್ಯಕ್ತಿ ಎಲ್ಲವನ್ನೂ ದೀರ್ಘಕಾಲದವರೆಗೆ ಆಡುವುದು ಕಷ್ಟ. ತಮ್ಮ ದೇಹವು ಸಹಕರಿಸದಿದ್ದಾಗ ನಿವೃತ್ತಿ ಹೊಂದುವೆ-ಜಸ್​ಪ್ರಿತ್ ಬೂಮ್ರಾ, ವೇಗಿ

ಇಂಗ್ಲೆಂಡ್ ಪ್ರವಾಸದ ಬಳಿಕ ಟೆಸ್ಟ್​ ಕ್ರಿಕೆಟ್​ಗೆ ಗುಡ್​ ಬೈ?

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ದೇಹ ಸಹಕರಿಸದಿದ್ದಲ್ಲಿ ನಿವೃತ್ತಿ ಹೇಳ್ತೇನೆ ಎಂಬ ಮಾತುಗಳನ್ನ ಬೂಮ್ರಾ ಆಡಿದ್ರು. ಇದೀಗ ಈ ಸರಣಿಯಲ್ಲಿ ಬೂಮ್ರಾ ಫಿಟ್​ನೆಸ್​ ಸಮಸ್ಯೆಯನ್ನ ಎದುರಿಸಿದ್ದಾರೆ. ಹೀಗಾಗಿ ವರ್ಕ್​ಲೋಡ್​​ ಮ್ಯಾನೇಜ್​ಮೆಂಟ್​ ದೃಷ್ಟಿಯಿಂದ ಬೂಮ್ರಾ ಟೆಸ್ಟ್​ಗೆ ಗುಡ್​ ಬೈ ಹೇಳಿ, ವೈಟ್​​ ಬಾಲ್​ನಲ್ಲಿ ಮಾತ್ರ ಉಳಿಯೂ ನಿರ್ಧಾರ ಮಾಡಿದ್ರೆ, ಅಚ್ಚರಿ ಪಡಬೇಕಿಲ್ಲ.

ಇದನ್ನೂ ಓದಿ: ಮಹಾನಟಿ ವೇದಿಕೆ ಮೇಲೆ ಅಪ್ಪ, ಅವ್ವನ ಮದ್ವೆ ಮಾಡಿಸಿದ ವರ್ಷ ಡಿಗ್ರಜೆ; ಆ ಕ್ಷಣ ಹೇಗಿತ್ತು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment