ಗಂಭೀರ್​ ಮುಂದೆ ನಡೆಯದ ಜಯ್​ ಶಾ ಆಟ.. ಕೊನೆಗೂ ಗೆದ್ದ ಹೆಡ್​ ಕೋಚ್​!

author-image
Ganesh Nachikethu
Updated On
ಜಯ್ ಶಾಗೆ ಕ್ರಿಕೆಟ್ ‘ಏನು ಗೊತ್ತು’ ಅಂತಾ ಹಂಗಿಸೋರು ಓದಲೇಬೇಕಾದ ಸ್ಟೋರಿ ಇದು..!
Advertisment
  • ಟೀಮ್​ ಇಂಡಿಯಾ ಕೋಚ್​ ಆಗುತ್ತಿದ್ದಂತೆ ದೊಡ್ಡ ಡಿಮ್ಯಾಂಡ್ ಇಟ್ಟಿದ್ದ ಗಂಭೀರ್​​..!
  • ಕೊನೆಗೂ ಮುಖ್ಯ ಕೋಚ್​ ಗೌತಮ್​​ ಗಂಭೀರ್​ ಮುಂದೆ ಮಂಡಿಯೂರಿದ ಬಿಸಿಸಿಐ
  • ತನ್ನ ಡಿಮ್ಯಾಂಡ್​ನಂತೆ ಬಿಸಿಸಿಐನಿಂದ ಟೀಮ್​ ಇಂಡಿಯಾಗೆ ಹೊಸ ಬೌಲಿಂಗ್​ ಆಯ್ಕೆ

ಬರೋಬ್ಬರಿ 17 ವರ್ಷಗಳ ಬಳಿಕ ಟೀಮ್​ ಇಂಡಿಯಾ 2024ರ ಟಿ20 ವಿಶ್ವಕಪ್‌ ಚಾಂಪಿಯನ್​ ಆಗಿದೆ. ಇದರ ಜತೆಗೆ ಕೋಚ್‌ ಆಗಿ ರಾಹುಲ್ ದ್ರಾವಿಡ್ ಅಧಿಕಾರಾವಧಿ ಕೂಡ ಪೂರ್ಣಗೊಂಡಿತ್ತು. ಈ ಬೆನ್ನಲ್ಲೇ ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡದ ಹೊಸ ಕೋಚ್ ಆಗಿ ಗೌತಮ್‌ ಗಂಭೀರ್‌ ಅವರನ್ನು ನೇಮಕ ಮಾಡಲಾಗಿತ್ತು.

ಇನ್ನು, ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಗೌತಮ್​ ಗಂಭೀರ್​ ಅವರನ್ನು ಟೀಮ್​ ಇಂಡಿಯಾ ಹೆಡ್​​​ ಕೋಚ್​​ ಆಗಿ ಅನೌನ್ಸ್​ ಮಾಡಲಾಗಿತ್ತು. ಗಂಭೀರ್​​​​​ ಶ್ರೀಲಂಕಾ ಪ್ರವಾಸದಿಂದ ಟೀಮ್​ ಇಂಡಿಯಾ ಮುಖ್ಯ ಕೋಚ್​​​ ಜವಾಬ್ದಾರಿ ವಹಿಸಿಕೊಂಡರು. ಜತೆಗೆ ಒಂದು ಸರಣಿಯಲ್ಲಿ ಟೀಮ್​ ಇಂಡಿಯಾವನ್ನು ಮುನ್ನಡೆಸಿದ್ರು. ಇದಕ್ಕೂ ಮುನ್ನವೇ ಗಂಭೀರ್ ಬಿಸಿಸಿಐ ಮುಂದೆ ದೊಡ್ಡ ಬೇಡಿಕೆ ಒಂದು ಇಟ್ಟಿದ್ದರು.

publive-image

ಟೀಮ್​​ ಇಂಡಿಯಾ ಮುಖ್ಯ ಕೋಚ್​ ಆಗಿರೋ ಗಂಭೀರ್​​ ತನ್ನ ಕೋಚಿಂಗ್​ ಸ್ಟ್ಯಾಫ್​​ನಲ್ಲಿ ಮೊರ್ನೆ ಮೊರ್ಕೆಲ್ ಅವರನ್ನು ಸೇರಿಸಿ ಎಂದು ಡಿಮ್ಯಾಂಡ್​ ಇಟ್ಟಿದ್ದರು. ಕೊನೆಗೂ ಗಂಭೀರ್​​ ಡಿಮ್ಯಾಂಡ್​ಗೆ ಒಪ್ಪಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈಗ ಸೌತ್​ ಆಫ್ರಿಕಾದ ದಿಗ್ಗಜ ಬೌಲರ್ ಮೊರ್ನೆ ಮೊರ್ಕೆಲ್ ಅವರನ್ನು ಭಾರತದ ಹೊಸ ಬೌಲಿಂಗ್ ಕೋಚ್ ಆಗಿ ಅನೌನ್ಸ್​ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ..

ಮೋರ್ನೆ ಮೊರ್ಕೆಲ್ ಸೆಪ್ಟೆಂಬರ್ 1ನೇ ತಾರೀಕಿನಿಂದ ಟೀಮ್​ ಇಂಡಿಯಾ ಬೌಲಿಂಗ್​ ಕೆಲಸ ಶುರು ಮಾಡಲಿದ್ದಾರೆ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟ್ರೈನಿಂಗ್​ ನೀಡಿರೋ ಅನುಭವ ಹೊಂದಿದ್ದಾರೆ. ಮೊರ್ಕೆಲ್​​ ಪಾಕ್‌ ತಂಡದ ಬೌಲಿಂಗ್ ಕೋಚ್ ಆಗಿದ್ದರು.

ಮೊರ್ನೆ ಮೊರ್ಕೆಲ್ ಕರಿಯರ್​ ಹೇಗಿತ್ತು?

ಮೊರ್ನೆ ಮೊರ್ಕೆಲ್ ಸೌತ್​ ಆಫ್ರಿಕಾದ ಸ್ಟಾರ್ ಬೌಲರ್​ ಆಗಿದ್ದರು. ತಾನು ಆಡಿರೋ 86 ಟೆಸ್ಟ್ ಪಂದ್ಯಗಳಲ್ಲಿ ಮೊರ್ಕೆಲ್​ 309 ವಿಕೆಟ್‌ ಕಬಳಿಸಿದ್ದಾರೆ. ಇನ್ನು 117 ಏಕದಿನ ಪಂದ್ಯಗಳನ್ನು ಆಡಿದ್ದು, 188 ವಿಕೆಟ್‌ ಪಡೆದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment