newsfirstkannada.com

ತಲೆಮರೆಸಿಕೊಂಡ ನಟಿ ಜಯಪ್ರದಾ.. ಎವರ್​ ಗ್ರೀನ್ ಬ್ಯೂಟಿಗೆ ಬಂಧನದ ಭೀತಿ; ಕಾರಣವೇನು?

Share :

Published February 28, 2024 at 6:15pm

Update February 28, 2024 at 6:19pm

    ತನ್ನ ಫೋನ್ ಸ್ವಿಚ್ ಆಫ್ ಮಾಡಿರುವ ರಾಜಕಾರಣಿ ಜಯಪ್ರದಾ

    ಮಾರ್ಚ್​​ 6ರಂದು ಹಾಜರು ಪಡಿಸಬೇಕೆಂದು ಕೋರ್ಟ್​ ಸೂಚನೆ

    ನೀತಿ ಸಂಹಿತೆ ಜಾರಿ ಇದ್ರೂ ಉಲ್ಲಂಘನೆ ಮಾಡಿದ್ದ ನಟಿ ಜಯಪ್ರದಾ

ನವದೆಹಲಿ: 7 ಬಾರಿ ನೋಟಿಸ್ ಜಾರಿ ಮಾಡಿದರೂ ಹಾಜರಾಗದ ಹಿನ್ನೆಲೆಯಲ್ಲಿ ನಟಿ ಹಾಗೂ ರಾಜಕಾರಣಿ ಜಯಪ್ರದಾ ಅವರನ್ನು ತಲೆಮರೆಸಿಕೊಂಡವರು ಎಂದು ಉತ್ತರಪ್ರದೇಶದ ರಾಂಪುರದ ಜಿಲ್ಲಾ ಕೋರ್ಟ್ ಘೋಷಣೆ ಮಾಡಿದೆ.

ಜಾಮೀನು ರಹಿತ ವಾರಂಟ್ ಅನ್ನು ಹಲವಾರು ಬಾರಿ ಹೊರಡಿಸಿದರು ಜಯಪ್ರದಾ ಕೋರ್ಟ್​ಗೆ ಹಾಜರಾಗದ ಹಿನ್ನೆಲೆಯಲ್ಲಿ ಸಿಆರ್‌ಪಿಸಿ ಆದೇಶ 82 ಅನ್ನು ರಾಂಪುರದ ಎಂಪಿ/ಎಂಎಲ್‌ಎ ಕೋರ್ಟ್​​ನ ಜಡ್ಜ್​ ಶೋಭೀತಾ ಬನ್ಸಾಲ್ ಹೊರಡಿಸಿದ್ದಾರೆ. ಇನ್​​ಸ್ಪೆಕ್ಟರ್​ ಕಳುಹಿಸಿದ ವರದಿಯಲ್ಲಿ ಜಯಪ್ರದಾ ತಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದು ಮೊಬೈಲ್​ ಅನ್ನು ಸ್ವಿಚ್ ಆಫ್ ಮಾಡಿದ್ದಾರೆ ಎಂದು ತಿಳಿಸಲಾಗಿದೆ. ಹೀಗಾಗಿ ಸೆಕ್ಷನ್ 82ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಕೋರ್ಟ್​ ಸೂಚಿಸಿದ್ದು ಅವರನ್ನು ಅರೆಸ್ಟ್ ಮಾಡಿ, ಮಾರ್ಚ್​ 6ರಂದು ಹಾಜರು ಪಡಿಸಬೇಕು ಎಂದು ಕೋರ್ಟ್ ಹೇಳಿದೆ.

ಜಯಪ್ರದಾ ಅವರನ್ನು ಬಂಧಿಸಿ ಫೆ.27 ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶಿಸಲಾಗಿತ್ತು. ಆದ್ರೆ ಜಯಪ್ರದಾ ಪೊಲೀಸರ ಕೈಗೆ ಸಿಗದೆ ಓಡಾಡುತ್ತಿದ್ದಾರೆ. ಹೀಗಾಗಿ ಕೋರ್ಟ್ ಜಯಪ್ರದಾ ತಲೆಮರೆಸಿಕೊಂಡಿದ್ದಾರೆ ಎಂದು ಘೋಷಿಸಿದೆ. ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶದ ನಂತರ ರಾಂಪುರ ಪೊಲೀಸರು ನಟಿ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ.

2019ರ ಲೋಕಸಭೆ ಚುನಾವಣೆ ವೇಳೆ ಜಯಪ್ರದಾ ಬಿಜೆಪಿಯಿಂದ ರಾಂಪುರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಈ ವೇಳೆ ನೀತಿ ಸಂಹಿತೆ ಜಾರಿ ಇದ್ದರೂ ಗ್ರಾಮವೊಂದರಲ್ಲಿ ರಸ್ತೆ ಉದ್ಘಾಟನೆ ಮಾಡಿದ್ದಾರೆ ಎಂಬ ಆರೋಪವಿದೆ. ಮತ್ತೊಂದು ಕೇಮರಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಜಯಪ್ರದಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪ ಸಂಬಂಧ ಕೋರ್ಟ್​ಗೆ ಹಾಜರಾಗಬೇಕಿದೆ. ಆದರೆ ನಟಿ, ರಾಜಕಾರಣಿ ಜಯಪ್ರದಾ ಮಾತ್ರ ಹಾಜರಾಗದೇ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಲೆಮರೆಸಿಕೊಂಡ ನಟಿ ಜಯಪ್ರದಾ.. ಎವರ್​ ಗ್ರೀನ್ ಬ್ಯೂಟಿಗೆ ಬಂಧನದ ಭೀತಿ; ಕಾರಣವೇನು?

https://newsfirstlive.com/wp-content/uploads/2024/02/JAYAPRADA.jpg

Load More