/newsfirstlive-kannada/media/post_attachments/wp-content/uploads/2025/03/Bangalore-Jayadeva-Hospital.jpg)
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಕಂಡು ಬಂದಿರುವ ಹಾರ್ಟ್ ಅಟ್ಯಾಕ್ ಕೇಸ್‌ಗಳ ಬಗ್ಗೆ ಕೇಳಿದ್ರೆ ಜನರಿಗೆ ಆತಂಕ ಆಗೋದರಲ್ಲಿ ಅನುಮಾನವೇ ಇಲ್ಲ.
ಬೆಂಗಳೂರು ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಹೃದ್ರೋಗ ಸಮಸ್ಯೆಗಳಿಂದ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ 1 ವರ್ಷದಲ್ಲೇ 18,953 ಹೃದ್ರೋಗಿಗಳಿಗೆ ಜಯದೇವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪ್ರತಿ ನಿತ್ಯ ಸುಮಾರು 50ಕ್ಕೂ ಹೆಚ್ಚು ರೋಗಿಗಳು ಜಯದೇವ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳಿಗೆ ಇತ್ತೀಚೆಗೆ ನಡೆದ ಆಘಾತಕಾರಿ ಘಟನೆಗಳೇ ಸಾಕ್ಷಿಯಾಗಿದೆ.
ಘಟನೆ-1: ಕಳೆದ ಮಾರ್ಚ್ 24ರಂದು ದಾವಣಗೆರೆಯಲ್ಲಿ ಕಾರು ಚಲಾಯಿಸುತ್ತಿದ್ದಾಗಲೇ ವ್ಯಕ್ತಿಯೊಬ್ಬ ಹಾರ್ಟ್ ಅಟ್ಯಾಕ್‌ಗೆ ಬಲಿಯಾಗಿದ್ದಾರೆ.
ಘಟನೆ - 2: ಮಾರ್ಚ್ 19ರಂದು ಭಟ್ಕಳದ ವ್ಯಕ್ತಿ ದುಬೈಗೆ ಹೋಗುತ್ತಿದ್ದಾಗ ವಿಮಾನದಲ್ಲೇ ಆಗಿದ್ದ ಹೃದಯಾಘಾತವಾಗಿದೆ.
ಘಟನೆ - 3: ಕಳೆದ ಫೆ.12ರಂದು ಚಾಮರಾಜನಗರದಲ್ಲಿ ಗ್ರಾಹಕರಿಗೆ ಸ್ವೀಟ್ ಪಾರ್ಸೆಲ್ ಮಾಡುವಾಗ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಮತ್ತೊಬ್ಬ ಬಿಗ್‌ಬಾಸ್ ಸ್ಪರ್ಧಿಯ ಯಡವಟ್ಟು.. ಇಂದು ರಕ್ಷಕ್ ಬುಲೆಟ್ ವಿರುದ್ಧ ದೂರು ದಾಖಲು; ಆಗಿದ್ದೇನು?
ಹೃದಯಾಘಾತಕ್ಕೆ 7 ಕಾರಣಗಳು
1. ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆ & ಕೊಲೆಸ್ಟ್ರಾಲ್
2. ಅತಿಯಾದ ಧೂಮಪಾನ, ಮದ್ಯಪಾನ ಮಾಡುವುದು
3. ವ್ಯಾಯಾಮ ಸೇರಿದಂತೆ ದೈಹಿಕ ಚಟುವಟಿಕೆಗಳಿಂದ ದೂರ ಇರುವುದು
4. ನಿಗದಿತ ಸಮಯವಿಲ್ಲದೆ, ಸಿಕ್ಕ ಸಿಕ್ಕ ಜಂಕ್ ಫುಡ್ಗಳೂ ಸೇವನೆ
5. ವರ್ಕೌಟ್ಗೆ ಅಂತ ಜಿಮ್ಗೆ ಹೋದ್ರೂ ಅಲ್ಲಿ ಅಶಿಸ್ತಿನ ವ್ಯಾಯಾಮ
6. ಕುಟುಂಬ ಸದಸ್ಯರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಇದ್ದರೆ
7. ಹೆಚ್ಚುತ್ತಿರುವ ವಾಯು ಮಾಲಿನ್ಯವೂ ಹೃದಯಾಘಾತಕ್ಕೆ ಕಾರಣ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ