/newsfirstlive-kannada/media/post_attachments/wp-content/uploads/2024/12/JAYADEVA-HOSPITAL-KALABURAGI.jpg)
ಕಲ್ಯಾಣ ಕರ್ನಾಟಕಕ್ಕೆ ರಾಜ್ಯ ಸರ್ಕಾರ ಗುಡ್ನ್ಯೂಸ್ ನೀಡಿದೆ. ಕಲಬುರಗಿಯಲ್ಲಿ 371 ಹಾಸಿಗೆಯುಳ್ಳ ಜಯದೇವ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡುವ ಮೂಲಕ, ಕಲ್ಯಾಣ ಕರ್ನಾಟಕದ ಜನತೆಗೆ ಅತ್ಯುತ್ತಮ ಆರೋಗ್ಯ ವ್ಯವಸ್ಥೆಗೆ ಅಡಿಗಲ್ಲನ್ನು ಹಾಕಲಾಗಿದೆ. ಇಂದು ಕಲಬುರಗಿಯಲ್ಲಿ ಉದ್ಘಾಟನೆಯಾಗಿರುವ ಈ ಒಂದು ಜಯದೇವ ಆಸ್ಪತ್ರೆ ಆ ಭಾಗದ ಜನರ ಆರೋಗ್ಯ ಕಾಪಾಡುವ ಕಾಮಧೇನು ಆಗಲಿರುವುದಂತೂ ನಿಶ್ಚಿತ
ಜಯದೇವ ಆಸ್ಪತ್ರೆ ಉದ್ಘಾಟನೆಯ ಬಳಿಕ ಮಾತನಾಡಿದ ಶಿಕ್ಷಣ ಸಚಿವ ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್, ಜಯದೇವ ಆಸ್ಪತ್ರೆ ಕಲಬುರಗಿಗೆ ಮಾತ್ರವಲ್ಲ ಕಲ್ಯಾಣ ಕರ್ನಾಟಕಕ್ಕೆ ಕಾಮದೇನು ಆಗಲಿದೆ ಎಂದು ಹೇಳಿದ್ದಾರೆ. ಇದೆಲ್ಲದಕ್ಕೂ ಕಾಣ 371ಜೆ ಕಲಂ ತಿದ್ದುಪಡಿ ಆಗಿದ್ದೇ ಕಾರಣ, ಮಲ್ಲಿಕಾರ್ಜುನ್ ಖರ್ಗೆ ಅವರ ತೀವ್ರ ಶ್ರಮದಿಂದಾಗಿ 371ಜೆ ಕಲಂ ತಿದ್ದುಪಡಿಯಾಗಿ ಜಾರಿ ಆಗಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಯತ್ತ ಸಾಗುತ್ತಿದೆ. 371ಜೆ ದಶಮಾನೋತ್ಸವದ ನೆನಪಿಗಾಗಿ 371 ಬೆಡ್ ಇರುವ ಆಸ್ಪತ್ರೆಯನ್ನು ನಿರ್ಮಿಸಿದ್ದೇವೆ, ಕಲಬುರಗಿಯನ್ನು ಹೆಲ್ತ್ ಹಬ್ ಮಡುವ ಗುರಿಯನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ಹೊಟ್ಟೆನೋವು ಅಂತ ಆಸ್ಪತ್ರೆಗೆ ಹೋದ ಯುವತಿ ದುರಂತ.. ಮೈಸೂರಲ್ಲಿ ಸಂಬಂಧಿಕರ ಆಕ್ರೋಶ; ಆಗಿದ್ದೇನು?
ಇನ್ನು ಇದೇ ವೇಳೆ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ. ಮೆಡಿಕಲ್ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿ ಈ ಭಾಗಕ್ಕೆ ಅನುಕೂಲ ಮಾಡಿಕೊಟ್ಟಿದ್ದೀರಿ, ಇನ್ನೂ ಎರಡು ಮೂರು ಕೆಲಸಗಳು ಆಗಬೇಕಿದೆ. ಅದನ್ನು ನಾನು ನಿಮ್ಮ ಮುಂದೆ ಇಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯನವರಿಗೆ ನಿವೇದಿಸಿಕೊಂಡರು.
ಇದನ್ನೂ ಓದಿ: 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಜಿಲ್ಲೆಯಲ್ಲಿ ನಡೆಯುತ್ತೆ..?
ಈ ಭಾಗದಲ್ಲಿ ನಿಮ್ಹಾನ್ಸ್ ಇನ್ಸ್ಟಿಟ್ಯೂಟ್ ಶಾಖೆ ಕೇಳುತ್ತಿದ್ದೇವೆ. ಏಳು ಜನ ಎಂಪಿಗಳನ್ನು ಈ ಭಾಗದದಿಂದ ಆರಿಸಿಕೊಟ್ಟಿದ್ದೇವೆ. ಒಂದು ನಿಮ್ಹಾನ್ಸ್ ಕಲಬುರಗಿಗೆ ಆಗಲಿ ಎಂದು ಕೇಳಿಕೊಂಡಿದ್ದಾರೆ. . ಇವೆರಡು ಆದಲ್ಲಿ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಗುಲಬುರ್ಗಾ ವಿಶ್ವವಿದ್ಯಾಲಯಗಳಲ್ಲಿ ಎಕ್ಸ್ಪರ್ಟ್ಗಳ ಕೊರೆ ಇದೆ, ಸಿಬ್ಬಂದಿಯ ಕೊರತೆಯಿದೆ ಈ ನಿಟ್ಟಿನಲ್ಲಿ ಸರ್ಕಾರ ವಿವಿಗೆ ಸಹಾಯ ಮಾಡಬೇಕು. ಪ್ರೋಫೆಸರ್ಗಳ ನೇಮಕಾತಿ ಮಾಡಿ ಅನೇಕ ಕೋರ್ಸ್ಗಳು ಬೆಳೆಯಬೇಕು. ಇವುಗಳ ವ್ಯವಸ್ಥೆಯನ್ನು ಮಾಡಬೇಕು ಎಂದು ಮಲ್ಲಿಕಾರ್ಜುನ್ ಖರ್ಗೆ ಸಿಎಂ ಅವರಲ್ಲಿ ಮನವಿ ಮಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ