Advertisment

ಮಕ್ಕಳನ್ನು ಭೇಟಿ ಆಗಲು ಬಿಡಲ್ಲ- ಪತ್ನಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ ನಟ ಜಯಂ ರವಿ

author-image
Bheemappa
Updated On
ಮಕ್ಕಳನ್ನು ಭೇಟಿ ಆಗಲು ಬಿಡಲ್ಲ- ಪತ್ನಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ ನಟ ಜಯಂ ರವಿ
Advertisment
  • ಆ ಮಹಿಳಾ ಸಿಂಗರ್​​​ ಇಂದ ನನಗೆ ಮತ್ತೊಂದು ಲೈಫ್ ಸಿಕ್ಕಿದೆ
  • ದಾಂಪತ್ಯದಲ್ಲಿ ನಡೆದಂತ ದೌರ್ಜನ್ಯ ಹೇಳಿಕೊಂಡ ಜಯಂ ರವಿ
  • ಹೆಂಡತಿ ವಿರುದ್ಧ ಸಾಲು ಸಾಲು ಆರೋಪ ಮಾಡಿರುವ ನಟ

ತಮಿಳು ಸಿನಿ ಕ್ಷೇತ್ರಕ್ಕೆ ಹಿಟ್​ ಸಿನಿಮಾಗಳನ್ನು ಕೊಟ್ಟಂತಹ ಜಯಂ ರವಿ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ಈಗಾಗಲೇ ಗೊತ್ತಿರುವ ಸಂಗತಿಯೇ. ಜಯಂ ರವಿ ಹಾಗೂ ಇವರ ಹೆಂಡತಿ ಆರತಿ ಇಬ್ಬರು ಡಿವೋರ್ಸ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದು ಇದು ಇನ್ನು ನ್ಯಾಯಾಲಯದಲ್ಲಿ ಇದೆ. ಇದು ಈಗಿರುವಾಗಲೇ ಜಯಂ ರವಿ ಹಾಗೂ ಆರತಿ ನಡುವೆ ಮತ್ತೊಮ್ಮೆ ಜಗಳ ನಡೆದಿದೆ.

Advertisment

ಇತ್ತೀಚೆಗೆ ಮದುವೆ ಸಮಾರಂಭ ಒಂದರಲ್ಲಿ ನಟ ಜಯಂ ರವಿ ಅವರು ಸಿಂಗರ್​ ಕೆನಿಶಾ ಫ್ರಾನ್ಸಿಸ್ ಜೊತೆ ಕಾಣಿಸಿಕೊಂಡಿದ್ದರು. ಇವರಿಬ್ಬರು ಡೇಟಿಂಗ್​ನಲ್ಲಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸರಗೊಂಡಿದ್ದ ಜಯಂ ರವಿ ಪತ್ನಿ ಆರತಿ ಅವರು ದೂರಿದ್ದರು. ಇದಕ್ಕೆ ಇದೀಗ ಇನ್​ಸ್ಟಾದಲ್ಲಿ ಪ್ರತಿಕ್ರಿಯಿಸಿರುವ ಜಯಂ ರವಿ, ತನ್ನ ಹೆಂಡತಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಒಂದಲ್ಲ, ಎರಡಲ್ಲ 4 ಪುಟ ಬರೆದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: 6,000 ಕೋಟಿ ಹಣ ವಂಚನೆ ಕೇಸ್; ನೀರವ್ ಮೋದಿ ಈಗ ಎಲ್ಲಿದ್ದಾರೆ..? ಜಾಮೀನು ಅರ್ಜಿ ತಿರಸ್ಕಾರ

publive-image

ನಟ ತಮ್ಮ ದಾಂಪತ್ಯದಲ್ಲಿ ಭಾವನಾತ್ಮಕ ಹಾಗೂ ಆರ್ಥಿಕ ಕಿರುಕುಳದ ಕುರಿತು ಹೇಳಿಕೊಂಡಿದ್ದಾರೆ. ಈ ವೇಳೆ ಸಿಂಗರ್ ಕೆನೀಶಾ ಫ್ರಾನ್ಸಿಸ್ ಅವರಿಂದ ನಾನು ಇದುವರೆಗೆ ಇದ್ದೇನೆ. ಕೆನೀಶಾ ಫ್ರಾನ್ಸಿಸ್ ಜೀವನದಾತ (lifeline) ಎಂದು ನಟ ಕರೆದಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಊಹಿಸುವುದನ್ನು ನೋಡುವುದು ಆಘಾತಕಾರಿ ಎಂದು ರವಿ ಹೇಳಿದ್ದಾರೆ.

Advertisment

ಮದುವೆಯಾದ ಮೇಲೆ ನನ್ನ ಪೋಷಕರನ್ನು ನಾನನು ಭೇಟಿಯಾಗಲು ಆಗದಂತ ಪರಿಸ್ಥಿತಿ ಇತ್ತು. ಪಂಜರದಲ್ಲಿ ಕೂಡಿ ಹಾಕಿದಂತೆ ಇತ್ತು. ಹೀಗಾಗಿ ಬದುಕಲು ಯೋಗ್ಯವಾದ ದಾರಿ ಕಂಡುಕೊಂಡು ದೂರ ಬಂದಿದ್ದೇನೆ. ಕುಟುಂಬಸ್ಥರಿಗೆ, ಸ್ನೇಹಿತರಿಗೆ ನಾನು ಡಿವೋರ್ಸ್​ ಅಪ್ಲೇ ಮಾಡಿರುವುದರ ಸತ್ಯದ ಅರಿವು ಇದೆ. ಯಾವಾಗಲೂ ಸತ್ಯಕ್ಕೆ ಗೆಲುವು ಇದೆ. ನ್ಯಾಯಾಲಯದಲ್ಲಿ ನನಗೆ ಜಯ ಸಿಗುವು ವಿಶ್ವಾಸ ಎಂದು ಹೇಳಿದ್ದಾರೆ.

ಇಬ್ಬರು ದೂರ ದೂರ ಇರಲು ಪ್ರಾರಂಭಿಸಿದಾಗಿನಿಂದ ಮಕ್ಕಳನ್ನು ಆರ್ತಿ ತನ್ನ ಬಳಿಯೇ ಇಟ್ಟುಕೊಂಡಿದ್ದಾರೆ. ಬೇಕಂತಲೇ ನನ್ನ ಹತ್ತಿರ ಬಾರದಂತೆ, ನನ್ನಿಂದ ದೂರ ಮಾಡುತ್ತಿದ್ದಾರೆ. ಮಕ್ಕಳನ್ನು ನನ್ನಿಂದ ಮರೆ ಮಾಚಿ ಸಾರ್ವಜನಿಕವಾಗಿ ಸಹನಭೂತಿ ಮಪಡೆಯಲು ಪ್ರಯತ್ನಿಸುತ್ತಿದ್ದಾರೆ. ಮಕ್ಕಳನ್ನು ಭೇಟಿಯಾಗಲು ನನಗೆ ಅವಕಾಶ ಇಲ್ಲ ಎಂದು ಜಯಂ ರವಿ, ಆರತಿಯೊಂದಿಗಿನ ದಾಂಪತ್ಯದಲ್ಲಿ ನಡೆದ ದೌರ್ಜನ್ಯವನ್ನು ವಿವರವಾಗಿ ಹೇಳಿಕೊಂಡಿದ್ದಾರೆ.

Advertisment

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment