BCCI ಕೈ ಸೇರಿದ ರಿಪೋರ್ಟ್​.. ಗಂಭೀರ್ ವಿರುದ್ಧ ಗಂಭೀರ ವಿಚಾರ, ವರದಿಯಲ್ಲಿ ಏನಿದೆ?

author-image
Ganesh
Updated On
‘ನಿವೃತ್ತಿ ಅವರಿಗೆ ಬಿಟ್ಟದ್ದು, ನನಗೆ ಸಂಬಂಧ ಇಲ್ಲ’.. ರೋಹಿತ್, ಕೊಹ್ಲಿ ಭವಿಷ್ಯದ ಬಗ್ಗೆ ಗಂಭೀರ್ ಮಾತು
Advertisment
  • ಮ್ಯಾನೇಜರ್ ಜೈದೇವ್​ ಶಾ ಕೊಟ್ಟ ವರದಿಯಲ್ಲೇನಿದೆ..?
  • ಬಿಸಿಸಿಐ ಬಾಸ್​​ಗಳು ಕೋಚ್ ವಿರುದ್ಧ ಗರಂ ಆಗಿದ್ಯಾಕೆ..?
  • ಕ್ಯಾಪ್ಟನ್- ಕೋಚ್ ನಡುವೆ ಎಲ್ಲವೂ ಸರಿ ಇರಲಿಲ್ವಾ..?

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಮುಗಿದ್ರೂ ಸರಣಿ ಸೋಲಿನ ಬಗ್ಗೆ ಚರ್ಚೆ ಮಾತ್ರ ನಿಂತಿಲ್ಲ. ಸೆಲೆಕ್ಟರ್ಸ್ ಮತ್ತು ಕ್ಯಾಪ್ಟನ್ ಜೊತೆ ಬಿಸಿಸಿಐ ನಡೆಸಿದ ಸಭೆಯ ಪ್ರಮುಖ ಅಂಶಗಳು, ಇದೀಗ ಬಹಿರಂಗಗೊಂಡಿದೆ. ಮಂಡಳಿ ಮತ್ತು ಟೀಮ್ ಮ್ಯಾನೇಜ್ಮೆಂಟ್​​​​​​ ನಡುವೆ ನಡೆದ ರಿವ್ಯೂ ಮೀಟಿಂಗ್ ನಂತರ, ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಅಂತ ತಿಳಿದುಬಂದಿದೆ.

ಗಂಭೀರ್ ಟೀಮ್ ಇಂಡಿಯಾ ಕೋಚ್ ಆದ್ಮೇಲೆ ತಂಡದಲ್ಲಿ ಒಂದಲ್ಲ ಒಂದು ಕಿರಿಕ್ ನಡೆಯುತ್ತಲೇ ಇರುತ್ತದೆ. ಅದು ಕ್ಯಾಪ್ಟನ್ ಮತ್ತು ಕೋಚ್ ನಡುವೆ ಇರಬಹುದು. ಕೋಚ್ ಮತ್ತು ಆಟಗಾರರ ನಡುವೆ ಇರಬಹುದು. ಒಂದಲ್ಲ ಒಂದು ವಿವಾದ, ಕಾಮನ್ ಆಗ್ಬಿಟ್ಟಿದೆ. ಇಷ್ಟು ದಿನ ಒಳಜಗಳ, ನಾಲ್ಕು ಗೋಡೆಗಳ ಮಧ್ಯೆ ಇತ್ತು. ಬಿಸಿಸಿಐ ಯಾವಾಗ ರಿವ್ಯೂ ಮೀಟಿಂಗ್​ ನಡೆಸಿತೋ, ಎಲ್ಲವೂ ಬಟಾಬಯಲಾಗಿದೆ.

ಇದನ್ನೂ ಓದಿ: ಸೆಮಿಸ್​ನಲ್ಲಿ ಕರ್ನಾಟಕಕ್ಕೆ ಭರ್ಜರಿ ಗೆಲುವು.. ಫೈನಲ್​ಗೆ ಎಂಟ್ರಿ ಕೊಟ್ಟ ಮಯಾಂಕ್ ನೇತೃತ್ವದ ಟೀಮ್

publive-image

ರಿವ್ಯೂ ಮೀಟಿಂಗ್​ನಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲಿಗಿಂತ, ತಂಡದಲ್ಲಿ ನಡೆಯುತ್ತಿದ್ದ ಒಳಜಗಳಗಳ ಬಗ್ಗೆನೇ ಹೆಚ್ಚು ಚರ್ಚೆಯಾಗಿತ್ತು. ರವಿ ಶಾಸ್ತ್ರಿ, ರಾಹುಲ್ ದ್ರಾವಿಡ್ ಕೋಚ್​​ ಆಗಿದ್ದಾಗ ಇಲ್ಲದ ಅಸಮಾಧಾನ, ಈಗ ಯಾಕೆ ಬಂತು ಅಂತ ಬಿಗ್​ಬಾಸ್​​ಗಳು ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್ ಗೌತಮ್​ ಗಂಭೀರ್​​ಗೆ ಪ್ರಶ್ನೆ ಮಾಡಿದ್ರು. ಜೊತೆಗೆ ಟೀಮ್ ಮ್ಯಾನೇಜರ್ ಜೈದೇವ್ ಶಾ ನೀಡಿದ್ದ ವರದಿಯ ಬಗ್ಗೆಯೂ ಅಧಿಕಾರಿಗಳು ಚರ್ಚಿಸಿದ್ರು.

ಬಿಸಿಸಿಐಗೆ ಸಿಕ್ಕ ವರದಿಯಲ್ಲೇನಿದೆ..?

ಬಿಗ್​ಬಾಸ್​ಗಳಿಗೆ ಟೀಮ್ ಮ್ಯಾನೇಜರ್​​ ಜೈದೇವ್​ ಶಾ ಇದ್ದಿದ್ದು ಇದ್ದಂಗೆ ವರದಿ ಸಲ್ಲಿಸಿದ್ದಾರೆ. ಮೊದಲಿಗೆ ಕೆಲವು ಹಿರಿಯ ಆಟಗಾರರು ಗಂಭೀರ್ ಕೋಚಿಂಗ್ ಸ್ಟೈಲ್​​ ಬಗ್ಗೆ ಅಸಮಾಧಾನಗೊಂಡಿದ್ರು. ಆಟಗಾರರು ಹೋಟೆಲ್​​​​​​​ ಬದಲಾವಣೆ ಬಗ್ಗೆ ಮನವಿ ಮಾಡಿದಾಗ ಕೋಚ್ ಸರಿಯಾಗಿ ಸ್ಪಂದಿಸಲಿಲ್ಲ. ಬದಲಿಗೆ ಅವರ ಮೇಲೆ ಫುಲ್ ಗರಂ ಆಗಿದ್ರು. ಪ್ರಾಕ್ಟೀಸ್​​​​ಗೆ ನಿಗಧಿತ ಸಮಯಕ್ಕೆ ಬಾರದ ಆಟಗಾರರ ವಿರುದ್ಧ ಗಂಭೀರ್ ಸುಖಾಸುಮ್ಮನೇ ರೊಚ್ಚಿಗೆದ್ದು, ವಾರ್ನಿಂಗ್ ನೀಡಿದ್ರು. ತಾವೇ ನೇಮಕ ಮಾಡಿದ್ದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ನಡವಳಿಕೆ ಬಗ್ಗೆ ಗಂಭೀರ್, ಗ್ರೌಂಡ್​ನಲ್ಲೇ ಸಿಡಿದೆದ್ದಿದ್ರು. ಕೆಲ ಆಟಗಾರರು ಮತ್ತು ಕೋಚ್​​ ಗಂಭೀರ್ ನಡುವೆ ಉತ್ತಮ ಬಾಂಧವ್ಯ ಇರ್ಲಿಲ್ಲ. ಅವ್ರ ಸಂಬಂಧ ಅಷ್ಟಕಷ್ಟೆ ಎಂದು ಬಿಗ್​ಬಾಸ್​​ಗಳಿಗೆ ನೀಡಿದ್ದ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಟೀಮ್ ಮ್ಯಾನೇಜರ್ ಜೈದೇವ್ ಶಾ ವರದಿ ನೋಡ್ತಿದ್ದಂತೆ ಬಿಗ್​ಬಾಸ್​​ಗಳು ಕೋಚ್ ಗಂಭೀರ್​ಗೆ ಪ್ರಶ್ನೆಗಳ ಸುರಿಮಳೆಗೈದ್ರು. ಗಂಭೀರ್​​ ಸಹ ಬಿಸಿಸಿಐ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ, ಕೋಪದಲ್ಲೇ ಉತ್ತರಿಸಿದ್ರಂತೆ.

publive-image

ಗಂಭೀರ್​​​​​​​​​​​ ಬಗ್ಗೆ ಅಸಮಾಧಾನ ಯಾಕೆ?

ಕೋಚ್ ಗಂಭೀರ್​​​​​​​ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಬಿಗ್​ಬಾಸ್​​ಗಳು, ಬೇಸರಗೊಂಡಿದ್ದಾರೆ. ಹಾಗೇ ಗಂಭೀರ್​ ಸರ್ವಾಧಿಕಾರಿ ಧೋರಣೆ, ಬಿಗ್​ಬಾಸ್​​ಗಳಿಗೆ ಸ್ವಲ್ಪ ಇಷ್ಟ ಆಗಲಿಲ್ಲ. ಐಪಿಎಲ್​​ನಿಂದ ಟೀಮ್ ಇಂಡಿಯಾ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲಬೇಕಾಯ್ತು ಅಂತ ಗಂಭೀರ್ ಹೇಳ್ತಿದಂತೆ, ಮಂಡಳಿ ಅಧಿಕಾರಿಗಳ ಪಿತ್ತ ನೆತ್ತಿಗೇರಿತು. ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್​​​​ ಕಾರ್ಯವೈಖರಿ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಗಂಭೀರ್, ಡಿಫೆಂಡ್ ಮಾಡಿಕೊಳ್ಳಲು ಹೊರಟ್ರಂತೆ. ಇದ್ರಿಂದ ಆಕ್ರೋಶಗೊಂಡ ಅಧಿಕಾರಿಗಳು, ಗಂಭೀರ್​ಗೆ ಕ್ಲಾಸ್ ತೆಗೆದುಕೊಂಡ್ರಂತೆ. ಎಲ್ಲದಕ್ಕಿಂತ ಮುಖ್ಯವಾಗಿ ಕೋಚ್ ಗಂಭೀರ್, ಟೀಮ್ ಇಂಡಿಯಾದಲ್ಲಿ ಡಿವೈಡ್ ಌಂಡ್ ರೂಲ್ ಪಾಲಿಸಿ ಮಾಡ್ತಿರೋದು, ಬಿಸಿಸಿಐ ಬಾಸ್​ಗಳಿಗೆ ಇನ್ನಿಲ್ಲದ ಕೋಪ ತರಿಸಿದಿಯಂತೆ.

ಇದನ್ನೂ ಓದಿ: ವಿಶ್ವಕಪ್​​ನಲ್ಲಿ ಧೋನಿನ ರನೌಟ್ ಮಾಡಿದ್ದ ಮಾರ್ಟಿನ್ ಗಪ್ಟಿಲ್ ಕ್ರಿಕೆಟ್​ಗೆ ವಿದಾಯ

publive-image

ಕೊನೆಯ ವಾರ್ನಿಂಗ್

ಸುಮಾರ 4 ಗಂಟೆಗಳ ಕಾಲ ನಡೆದ ರಿವ್ಯೂ ಮೀಟಿಂಗ್​ನಲ್ಲಿ, ಕೋಚ್ ಗಂಭೀರ್ ವಿರುದ್ಧವೇ ವರದಿ ಇತ್ತು. ಟೀಮ್ ಮ್ಯಾನೇಜರ್ ಜೈದೇವ್ ಶಾ ಮತ್ತು ಕೋಚ್ ಗೌತಮ್ ಗಂಭೀರ್​​​​​​​​ ಜೊತೆ ಚರ್ಚೆ ನಡೆಸಿದ ಬಳಿಕ ಬಿಗ್​ಬಾಸ್​ಗಳು, ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲಾಗಿದೆ. ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನ ಗೆಲ್ಲಬೇಕು. ಒಂದು ವೇಳೆ ಚಾಂಪಿಯನ್ಸ್ ಟ್ರೋಫಿಯಲ್ಲೂ ಕಳಪೆ ಆಟ ಮುಂದುವರೆದ್ರೆ, ನಿಮ್ಮ ಸೀಟ್ ಇರೋದಿಲ್ಲ ಅಂತ ಕೋಚ್ ಗಂಭಿರ್​ಗೆ ಎಚ್ಚರಿಕೆ ನೀಡಿದ್ರಂತೆ.

ತಂಡಕ್ಕಿಂತ ದೊಡ್ಡವರು ಯಾರೂ ಇಲ್ಲ. ತಂಡ ಇದ್ರೆ ಆಟಗಾರರು ಮತ್ತು ಕೋಚ್. ಆದ್ರೆ ಆಟಗಾರರು-ಕೋಚ್ ಇದ್ರೆ ತಂಡ ಆಗಲ್ಲ. ಮೊದಲು ಇದನ್ನ ಟೀಮ್ ಇಂಡಿಯಾ ನಾಯಕ ಮತ್ತು ಕೋಚ್ ಅರ್ಥಮಾಡಿಕೊಳ್ಳಬೇಕು. ಎರಡೂ ಕೈ ಒಟ್ಟಾಗಿ ಸೇರಿದ್ರೆ ಚಪ್ಪಾಳೆ. ಹಾಗಾಗಿ ಇನ್ಮುಂದೆ ಕ್ಯಾಪ್ಟನ್ ಮತ್ತು ಕೋಚ್, ಆಟಗಾರರನ್ನ ಜೊತೆಜೊತೆಯಾಗಿ ನಡೆಸಿಕೊಂಡು ಹೋಗಬೇಕು. ಇಲ್ದಿದ್ರೆ ಈ ಒಳಜಗಳಗಳು ನಿಲ್ಲೋದಿಲ್ಲ!

ಇದನ್ನೂ ಓದಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮತ್ತೊಂದು ಸಾಧನೆ; ಚಂದ್ರಯಾನ-4, ಗಗನಯಾನಕ್ಕೆ ವೇದಿಕೆ ಸಿದ್ಧ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment