newsfirstkannada.com

ಮಂಡ್ಯ ಎಲೆಕ್ಷನ್​​​​ ಗೆಲ್ಲಲು ಮೈತ್ರಿ ತಂತ್ರಗಾರಿಕೆ; ಭಾರೀ ನಿರೀಕ್ಷೆ ಹುಟ್ಟುಹಾಕಿದೆ ಸುಮಲತಾರ ಇವತ್ತಿನ ನಡೆ..!

Share :

Published March 28, 2024 at 7:04am

  ಮಂಡ್ಯ ಕಣದಲ್ಲಿ ಕುತೂಹಲ ಮೂಡಿಸಿದ ರೆಬೆಲ್ ಲೇಡಿ!

  ಮಂಡ್ಯಕ್ಕೆ ಎಂಟ್ರಿ ಕೊಡ್ತಿದ್ದಾರೆ ಹೆಚ್.ಡಿ.ಕುಮಾರಸ್ವಾಮಿ..!

  ಬಿಜೆಪಿ, ಜೆಡಿಎಸ್ ನಾಯಕರ ಮೊದಲ ಸಭೆ ಆಯೋಜನೆ

ಇವತ್ತು ರಾಜ್ಯ ರಾಜಕೀಯದ ಚಿತ್ತ ಮಂಡ್ಯದತ್ತ ನೆಟ್ಟಿದೆ.. ಮಂಡ್ಯಕ್ಕೆ ಅಭ್ಯರ್ಥಿ ಯಾರಾಗ್ತಾರೆ ಅನ್ನೋ ಚರ್ಚೆಗೆ ಫುಲ್​​ಸ್ಟಾಪ್​​ ಬೀಳಲಿದೆ. ದಳದ ಉಪ ವರಿಷ್ಠ ಹೆಚ್​ಡಿಕೆ, ಬಿಜೆಪಿ ಸಾರಥಿ ವಿಜಯೇಂದ್ರ ನೇತೃತ್ವದಲ್ಲಿ ಇವತ್ತು ಮಂಡ್ಯದಲ್ಲೇ ಸಮನ್ವಯ ಸಮಿತಿ ಸಭೆ ಆಯೋಜನೆ ಆಗಿದೆ. ಈ ಸಭೆಗೆ ಸ್ವಾಭಿಮಾನಿ ಸಂಸದೆ ಸುಮಲತಾ ಬರ್ತಾರಾ ಅನ್ನೋದೇ ಕುತೂಹಲ ಕಾಡ್ತಿದೆ.

ಮಂಡ್ಯ ಗೆದ್ರೆ ಇಂಡಿಯಾ ಗೆದ್ದಂತೆ ಅನ್ನೋ ಮಾತಿದೆ. ಹಾಗಂತ ಮಂಡ್ಯ ಗೆದ್ದವ್ರು ಇಂಡಿಯಾ ಗೆದ್ರೋ ಇಲ್ವೋ ಗೊತ್ತಿಲ್ಲ. ಇಂಡಿಯಾವೇ ತಿರುಗಿ ನೋಡುವ ಚುನಾವಣೆ ಅಂದ್ರೆ ಅದು ಮಂಡ್ಯ ಅನ್ನೋದು ಎಲ್ಲರೂ ಬಲ್ಲ ಸತ್ಯ.. ಯಾಕಂದ್ರೆ ಮಂಡ್ಯ ಎಂದ್ರೆ ರಾಜಕೀಯ.. ಇಲ್ಲಿನ ಮಣ್ಣಿನ ಕಣ ಕಣಕ್ಕೂ ರಾಜಕೀಯವೇ ಉಸಿರು.. ಈ ಬಾರಿಯೂ ಮಂಡ್ಯ ರಣ ರಣ ಅಂತಿದೆ.. ಕಾರಣ ಮಾಜಿ ಸಿಎಂ ಹೆಚ್​ಡಿಕೆ ಸ್ಪರ್ಧಿಸುವ ಸಾಧ್ಯತೆಯಿಂದ ರಾಜ್ಯದ ಚಿತ್ತ ಮಂಡ್ಯದತ್ತ ನೆಟ್ಟಿದೆ.

ಇದನ್ನೂ ಓದಿ: Surapur by Election: ಸುರಪುರ ವಿಧಾನ ಸಭಾ ಉಪಚುನಾವಣೆಗೆ ಅಭ್ಯರ್ಥಿ ಹೆಸರು ಪ್ರಕಟಿಸಿದ ಬಿಜೆಪಿ..!

ಕಳೆದ ವಿಧಾನಸಭೆ ಎಲೆಕ್ಷನ್​​ನಲ್ಲಿ ಜೆಡಿಎಸ್​​​ನ ಮಾನ ಬೀದಿಗೆ ಬಿದ್ದಿದೆ. ದಳದ ಹಾರ್ಟ್​​ಬೀಟ್​​ ಅಂತನೇ ಕರೆಸಿಕೊಳ್ಳೋ ಮಂಡ್ಯದಲ್ಲಿ ಹೋದ ಮಾನಕ್ಕೆ ಆನೆ ಕೊಟ್ಟು ಮರಳಿ ಗಳಿಸುವ ಲೆಕ್ಕಾಚಾರ ಇದೆ. ಈ ಲೆಕ್ಕಾಚಾರದ ಹಿಂದೇ ಮಾಜಿ ಸಿಎಂ ಕುಮಾರಸ್ವಾಮಿ ತಂತ್ರಗಾರಿಕೆ ಇದೆ. ಅಂತೆಯೇ ಸಕ್ಕರೆ ನಾಡಿನ ಎಲೆಕ್ಷನ್ ರಂಗೇರ್ತಿದ್ದು, ಮಂಡ್ಯಕ್ಕೆ ಇವತ್ತು ದೋಸ್ತಿಯ ಹೊಸ ಜೋಡೆತ್ತಿನ ಪರಿಚಯ ಆಗಲಿದೆ. ಮಾಜಿ ಸಿಎಂ ಹೆಚ್​ಡಿಕೆ, ಬಿಜೆಪಿ ಸಾರಥಿ ವಿಜಯೇಂದ್ರ ಮಂಡ್ಯಕ್ಕೆ ಎಂಟ್ರಿ ಕೊಡ್ತಿದ್ದಾರೆ.

ಸ್ಪರ್ಧೆ ಖಚಿತವಾದ ಬಳಿಕ ಮೊದಲ ಬಾರಿ ಹೆಚ್ಡಿಕೆ ಆಗಮಿಸ್ತಿದ್ದಾರೆ. ಕುಮಾರಸ್ವಾಮಿಗೆ ಬಿಜೆಪಿ ಸಾರಥಿ ಬಿ.ವೈ.ವಿಜಯೇಂದ್ರ ಸಾಥ್​ ನೀಡ್ತಿದ್ದಾರೆ.. ಚುನಾವಣೆ ಗೆಲ್ಲಲು ಇಂದಿನಿಂದ ಮೈತ್ರಿ ತಂತ್ರಗಾರಿಕೆ ಶುರು. ಮಂಡ್ಯದಲ್ಲಿ ಇಂದು ಬಿಜೆಪಿ, ಜೆಡಿಎಸ್ ನಾಯಕರ ಮೊದಲ ಸಭೆ ಆಯೋಜನೆ ಆಗಿದೆ.. ಸಭೆಯಲ್ಲಿ ಹೆಚ್ಡಿಕೆ ಗೆಲುವಿಗೆ ಸ್ಟ್ರ್ಯಾಟರ್ಜಿ ರೆಡಿಯಾಗಲಿದೆ. ಸಭೆಯಲ್ಲಿ ಎರಡು ಪಕ್ಷಗಳ ಸ್ಥಳೀಯ ನಾಯಕರು ಭಾಗಿ ಆಗ್ತಿದ್ದು, ಮೈತ್ರಿ ಧರ್ಮ ಪಾಲನೆಯ ಸಂದೇಶ ರವಾನೆ ಆಗಲಿದೆ.

ಮಂಡ್ಯ ಕ್ಷೇತ್ರ ದಳದ ಪಾಲಾಗ್ತಿದ್ದಂತೆ ಸುಮಲತಾ ಎಲ್ಲೂ ಪ್ರತ್ಯಕ್ಷರಾಗಿಲ್ಲ.. ಇವತ್ತು ಮೈತ್ರಿ ಪಕ್ಷಗಳ ಸಮನ್ವಯ ಸಭೆ ನಡೆಯಲಿದ್ದು ರೆಬೆಲ್​ ಲೇಡಿಯ ನಡೆ ನಿಗೂಢವಾಗಿದೆ. ರಾಜಕೀಯ ನಿರ್ಧಾರ ತೆಗೆದುಕೊಳ್ಳದೆ ಮೌನಕ್ಕೆ ಶರಣಾಗಿರುವ ಸುಮಲತಾ, ಇದೇ ಶನಿವಾರ ಬೆಂಬಲಿಗರ ಸಭೆ ಕರೆದಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಒಟ್ಟಾರೆ, ಮಿತ್ರ ಪಕ್ಷಗಳ ಮೊದಲ ಸಮನ್ವಯ ಸಭೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಯಾರೆಲ್ಲ ಸಭೆಗೆ ಬರ್ತಾರೆ? ಯಾರು ಬರಲ್ಲ ಅನ್ನೋದು ಬಹಿರಂಗವಾಗಲಿದೆ. ಅದರಲ್ಲೂ ಮಂಡ್ಯ ರಾಜಕೀಯ ವಲಯದಲ್ಲಿ ಸುಮಲತಾ ನಡೆ ಕುರಿತ ಚರ್ಚೆ ಜೋರಾಗಿದೆ.

ವಿಶೇಷ ವರದಿ: ನಂದೀಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯ ಎಲೆಕ್ಷನ್​​​​ ಗೆಲ್ಲಲು ಮೈತ್ರಿ ತಂತ್ರಗಾರಿಕೆ; ಭಾರೀ ನಿರೀಕ್ಷೆ ಹುಟ್ಟುಹಾಕಿದೆ ಸುಮಲತಾರ ಇವತ್ತಿನ ನಡೆ..!

https://newsfirstlive.com/wp-content/uploads/2024/03/SUMALATH-DEVEGOWDA.jpg

Load More