newsfirstkannada.com

‘ಗ್ಯಾರಂಟಿ’ 20 ಸ್ಥಾನ ಗೆಲ್ಲುತ್ತೇವೆ.. ಮಂಡ್ಯದಲ್ಲಿ BJP-JDS ದೋಸ್ತಿ ದಾಳಕ್ಕೆ ಸಿಎಂ ಸಿದ್ದು ಸವಾಲು; ಹೇಳಿದ್ದೇನು?

Share :

Published February 18, 2024 at 3:50pm

    ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ- ಸಿಎಂ

    ಕೇಂದ್ರದ ಅಸಹಕಾರದ ನಡುವೆಯೂ ಯೋಜನೆ ಅನುಷ್ಠಾನ ಮಾಡಿದ್ದೇವೆ

    ಜೆಡಿಎಸ್‌ ಶಾಸಕರು ಪಕ್ಷ ಬಿಡ್ತಾರೆ ಅಂತಾ ಬಿಜೆಪಿ ಜೊತೆ ಹೊಂದಾಣಿಕೆ

ಮಂಡ್ಯ: ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕನಿಷ್ಠ 20 ಸ್ಥಾನಗಳನ್ನು ರಾಜ್ಯದಲ್ಲಿ ನಾವು ಗೆಲ್ಲಲ್ಲಿದ್ದೇವೆ. ಈಗ ಕೋಮುವಾದಿ ಬಿಜೆಪಿ ಜೊತೆ ಜೆಡಿಎಸ್​ನವರು ಒಂದಾಗಿವೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಳವಳ್ಳಿಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಜೆಡಿಎಸ್‌ ಹಾಗೂ ಬಿಜೆಪಿ ಈಗ ಒಂದಾಗಿವೆ. ಮುಂದಿನ ಜನ್ಮದಲ್ಲಿ ಹುಟ್ಟಿದ್ರೆ ಮುಸಲ್ಮಾನನಾಗಿ ಹುಟ್ಟುತ್ತೇನೆ ಅಂತ ಹೆಚ್.ಡಿ ದೇವೇಗೌಡರು ಹೇಳಿದ್ದರು. ಈಗ ಕೋಮುವಾದಿ ಬಿಜೆಪಿ ಜೊತೆ ಸೇರಿದ್ದಾರೆ. ಮಿಸ್ಟರ್ ದೇವೇಗೌಡರೇ ನೀವೇ ನಿಮ್ಮ ಮಗನನ್ನ ಬಿಜೆಪಿ ಜೊತೆ ಕಳಿಸಿದ್ದೇನೆ ಅಂತೀರ. ನೀವು ಜಾತ್ಯತೀತ ಅಂತಾ ಇಟ್ಕೊಳ್ಳೋಕೆ ನೈತಿಕತೆ ಇಲ್ಲ. ಈಗಲೇ ಸೆಕ್ಯೂಲರ್ ಪದ ಕೈಬಿಟ್ಟು ಬಿಡಿ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಶ್ರಮಿಸಿದ್ದೋ. ಅದಕ್ಕೆ 136 ಸೀಟ್ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ಈಗ ಬಿಜೆಪಿ ಜೆಡಿಎಸ್‌ ಡೋಂಗಿಗಳ ತರ ಹೇಳ್ತಿವೆ. ಕಾಂಗ್ರೆಸ್‌ ಈ ಸಲ ಕನಿಷ್ಠ 20 ಸ್ಥಾನ ಗೆದ್ದು ಲೋಕಸಭೆಗೆ ಕಳಿಸುತ್ತೇವೆ. ಉಪಕಾರ ಮಾಡಿದವರನ್ನ ಮರೆಯುತ್ತೀರಾ? 155 ಕೋಟಿ ಹೆಣ್ಣು ಮಕ್ಕಳು ಇವತ್ತು ಉಚಿತವಾಗಿ ಬಸ್ಸಿನಲ್ಲಿ ಓಡಾಡ್ತಿದ್ದಾರೆ. ಹಿಂದೆ ಯಾರಾದ್ರೂ ಮಾಡಿದ್ರಾ? ಬಿಜೆಪಿ ಹೆಚ್.ಡಿ.ಕುಮಾರಸ್ವಾಮಿ ದೇವೇಗೌಡರು ಮಾಡಿದ್ರಾ? ಇದನ್ನ ಸಿದ್ದರಾಮಯ್ಯ ಸರ್ಕಾರ ಮಾಡಿದ್ದು ಅನ್ನೋದನ್ನ ಮರೆಯಬೇಡಿ. ಯಾರು ಹಸಿದು ಮಲಗಬಾರದು ಅಂತಾ ಅನ್ನಭಾಗ್ಯ ಅಕ್ಕಿ ಕೊಟ್ಟವರು ಯಾರು. ಕೇಂದ್ರದ ಅಸಹಕಾರದ ನಡುವೆಯೂ ಯೋಜನೆ ಅನುಷ್ಠಾನ ಮಾಡಿದ್ದೇವೆ. ಬಡವರಿಗೆ ಅಕ್ಕಿ ಕೊಡದ ಬಿಜೆಪಿ, ಜೆಡಿಎಸ್‌ಗೆ ಮತ ಕೊಡಬೇಡಿ. ಇವತ್ತು ಕುಮಾರಸ್ವಾಮಿ, ಅಶೋಕ ಒಂದಾಗಿದ್ದಾರೆ ಅಂತ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.

ಇದನ್ನೂ ಓದಿ: ‘ಡಿ.ಕೆ ಶಿವಕುಮಾರ್ ಅವ್ರೇ ನಂ. 1 ಕ್ಯಾಂಡಿಡೇಟ್’- DCM ವಿರುದ್ಧವೇ ತಿರುಗಿಬಿದ್ದ ಸಚಿವರು! ಕಾರಣವೇನು?

ಹೀಗೆ ಮಾತು ಮುಂದುವರೆಸಿದ ಅವರು, ರಾಜ್ಯದಲ್ಲಿ ಜೆಡಿಎಸ್‌ನವರು 39 ಶಾಸಕರು ಗೆದ್ದಿದ್ದರು. ಈಗ 19 ಜನ ಗೆದ್ದಿದ್ದಾರೆ. ಮುಂದೆ ಅದು ಶೂನ್ಯ ಆಗುತ್ತೆ, ಜೆಡಿಎಸ್‌ ಶಾಸಕರು ಪಕ್ಷ ಬಿಡ್ತಾರೆ ಅಂತಾ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಪಕ್ಷ, ಶಾಸಕರ ಉಳಿಸಿಕೊಳ್ಳಲು ದೇವೇಗೌಡ, ಹೆಚ್​.ಡಿ ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಆಗಿದ್ದಾರೆ. ಈ ಹಿಂದೆ ನಮ್ಮ ಜೊತೆ ಇದ್ದವರು. ಇವಾಗ ಕೋಮುವಾದಿಗಳ ಜೊತೆ ಸೇರಿದ್ದಾರೆ. ಮುಂದಿನ ಚುನಾವಣೆಯಲ್ಲೂ ಮಂಡ್ಯ ಕಾಂಗ್ರೆಸ್‌ ತೆಕ್ಕೆಗೆ ಬರಲಿದೆ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಈ ಹಿಂದೆಯೂ ನಾವು 165ರಲ್ಲಿ 158 ಭರವಸೆ ಈಡೇರಿಸಿದೆವು. ನಾವು ಮಾಡಿದ ಕೆಲಸವನ್ನ ಜನರಿಗೆ ತಲುಪಿಸಲಿಲ್ಲ. ಹೀಗಾಗಿ ಕಳೆದ ಸಲ ಸೋಲಬೇಕಾಯ್ತು. ನಾವು ಮಾಡದಿರೋದನ್ನ ಎಂದೂ ಹೇಳಲ್ಲ. ಬಿಜೆಪಿ, ಜೆಡಿಎಸ್‌ನವರ ರೀತಿ ಸುಳ್ಳು ಹೇಳಬೇಡಿ. ಕುಮಾರಸ್ವಾಮಿ ಎರಡು ಸಲ, ದೇವೇಗೌಡರು ಸಹ ಸಿಎಂ ಆಗಿದ್ರಿ. ಮಳವಳ್ಳಿಗೆ ನಿಮ್ಮ ಕೊಡುಗೆ ಏನು ಹೇಳಿ. ಬಿಜೆಪಿಯ ಕೊಡುಗೆ ಏನು ಹೇಳಿ ಎಂದು ಜನರನ್ನ ಪ್ರಶ್ನಿಸಿದ್ದಾರೆ.

ದೇಶದಲ್ಲಿ ಸುಳ್ಳು ಹೇಳುವ ಪ್ರಧಾನಿ ಅಂದ್ರೆ ಯಾರೇಳಿ. ಬಿಜೆಪಿಯ ಅನ್ವರ್ಥ ನಾಮ ಸುಳ್ಳು. ಸುಳ್ಳಿನ ಪಾರ್ಟಿ ಯಾವುದು ಅಂದ್ರೆ ಬಿಜೆಪಿ. ಸ್ವಾತಂತ್ರ್ಯ ನಂತರ ಸುಳ್ಳು ಹೇಳಿದ ಪ್ರಧಾನಿ ಅಂದ್ರೆ ಅದು ನರೇಂದ್ರ ಮೋದಿ. 15 ಲಕ್ಷ ಬಂತಾ, ಉದ್ಯೋಗ ಕೊಟ್ರಾ, ಅಚ್ಛೇ ದಿನ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಆಯ್ತಾ? ನಾವು ಎಲ್ಲಾ ವರ್ಗ, ಸಮಾಜಕ್ಕೂ ಸಮವಾಗಿ ಅನುದಾನ ಕೊಡ್ತೀವಿ. ಕೇಂದ್ರ ಹೇಳುವ ಸುಳ್ಳನ್ನೇ ಇವರು ಹೇಳ್ತಾರೆ. ಇವರ ಜೊತೆಗೆ ಕುಮಾರಸ್ವಾಮಿ ಸಹ ಸೇರಿಕೊಂಡಿದ್ದಾರೆ. ಈ ಅನ್ಯಾಯ ಸರಿಪಡಿಸಬೇಕು ಅಂದ್ರೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌, ಬಿಜೆಪಿ ಸೋಲಿಸಿ ಈ ಹಿಂದಿನಂತೆ ಮುಂದೆಯೂ ನಮಗೆ ಆಶೀರ್ವದಿಸಿ ಎಂದು ಸಿಎಂ ಸಿದ್ದರಾಮಯ್ಯ ಮಂಡ್ಯ ಜನರಲ್ಲಿ ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಗ್ಯಾರಂಟಿ’ 20 ಸ್ಥಾನ ಗೆಲ್ಲುತ್ತೇವೆ.. ಮಂಡ್ಯದಲ್ಲಿ BJP-JDS ದೋಸ್ತಿ ದಾಳಕ್ಕೆ ಸಿಎಂ ಸಿದ್ದು ಸವಾಲು; ಹೇಳಿದ್ದೇನು?

https://newsfirstlive.com/wp-content/uploads/2024/02/siddu-39.jpg

Load More