newsfirstkannada.com

ಹಾಸನ ಅಶ್ಲೀಲ ವಿಡಿಯೋ ಪ್ರಕರಣ.. ನಿಖಿಲ್ ಕುಮಾರ್ ಫಸ್ಟ್ ರಿಯಾಕ್ಷನ್..!

Share :

Published May 4, 2024 at 2:22pm

  ಹಾಸನ ವಿಡಿಯೋ ಕೇಸ್​ ಬಗ್ಗೆ ನಿಖಿಲ್ ಕುಮಾರಸ್ವಾಮಿ ಏನಂದ್ರು?

  ತಾತ ದೇವೇಗೌಡ, ಅಜ್ಜಿ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

  ವಿಡಿಯೋ ಪ್ರಕರಣದ ತನಿಖೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮಾತು

ಹಾಸನ ಅಶ್ಲೀಲ ವಿಡಿಯೋ ವಿಚಾರದ ಬಗ್ಗೆ ಜೆಡಿಎಸ್​ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ತನಿಖೆ ಆಗುತ್ತಿದೆ, ಕಾನೂನಿಗಿಂತ ಯಾರೂ ದೊಡ್ಡವರು ಇಲ್ಲ. ಅಂತಿಮವಾಗಿ ಎಸ್ಐಟಿ ವರದಿ ಬಂದ ಮೇಲೆ ಕಾನೂನು ಕ್ರಮ ಆಗಲಿದೆ. ಅದರ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡೋಕೆ ಆಗೊಲ್ಲ ಎಂದಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್​​ಗೆ ಶಾಕ್ ಕೊಟ್ಟ ಅಭ್ಯರ್ಥಿ.. ಟಿಕೆಟ್ ವಾಪಸ್ ಕೊಟ್ಟು, ‘ಸ್ಪರ್ಧಿಸಲ್ಲ’ ಎಂದು ‘ಕೈ’ಮುಗಿದ ಮಾಜಿ ಪತ್ರಕರ್ತೆ..!

ಈ ಒಂದು ಪ್ರಕರಣವನ್ನು ರಾಜಕೀಯವಾಗಿ ರಾಜ್ಯದ ಜನತೆಗೆ ತಪ್ಪು ಸಂದೇಶ ಕೊಡುತ್ತಿದ್ದಾರೆ. ದೇವೇಗೌಡರ ಜೀವನ ತೆರೆದ ಪುಸ್ತಕವಾಗಿದೆ. ದೇವೇಗೌಡರು, ನಮ್ಮ ಅಜ್ಜಿ ಯುವಕರಿಗೆ ಸ್ಫೂರ್ತಿ. ದಂಪತಿ ಯಾವ ರೀತಿ ಬದುಕಿ ಬಾಳಬೇಕು ಎಂಬುವುದಕ್ಕೆ ಅವರೇ ಉದಾಹರಣೆ. ಬೇರೆ ಯಾರೂ ಕಾಣುವುದಿಲ್ಲ. ದಯಮಾಡಿ ನಾನು ಕೈ ಜೋಡಿಸಿ ಮನವಿ ಮಾಡ್ತೀನಿ..

ದೇವೇಗೌಡರಿಗೆ 91-92 ವರ್ಷ ವಯಸ್ಸು. ಈ ಎಲ್ಲ ವಿಷಯ ಕೇಳಿದ ಮೇಲೆ ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಯಾರೂ ಸಹ ಊಹೆ ಮಾಡೋಕೆ ಆಗಲ್ಲ. ಬೆಳಗ್ಗೆ 5 ಗಂಟೆಗೆ ದೇವಸ್ಥಾನಕ್ಕೆ ಹೋಗಿ 9 ಗಂಟೆಗೆ ಬಂದೆ ಎಂದು ಹೇಳಿದರು. ಅವರು ಎಲ್ಲರಿಗಿಂತ ಸಾಕಷ್ಟು ನೊಂದಿದ್ದಾರೆ. ದೇವೇಗೌಡರು, ನಮ್ಮ ಅಜ್ಜಿ ಬಹಳ ನೊಂದಿದ್ದಾರೆ ಎಂದರು.

ಇದನ್ನೂ ಓದಿ:ಆರ್​ಸಿಬಿಯಲ್ಲಿ ಹೊಸ ಗ್ಯಾಂಗ್..! KGF ಫ್ಲಾಪ್ ಬೆನ್ನಲ್ಲೇ KJP ಬ್ಲಾಕ್​ಬಸ್ಟರ್​​ ಹಿಟ್.​​.!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಅಶ್ಲೀಲ ವಿಡಿಯೋ ಪ್ರಕರಣ.. ನಿಖಿಲ್ ಕುಮಾರ್ ಫಸ್ಟ್ ರಿಯಾಕ್ಷನ್..!

https://newsfirstlive.com/wp-content/uploads/2024/05/NIKHIL-KUMARASWAMY.jpg

Load More