Advertisment

ರಾಮನಗರ ತೋಟದ ಮನೆಯಲ್ಲಿ ಮಹತ್ವದ ಬೆಳವಣಿಗೆ; ಜೆಡಿಎಸ್ ಸಭೆಯಲ್ಲಿ ಒಮ್ಮತದ ನಿರ್ಧಾರ..!

author-image
Bheemappa
Updated On
ರಾಮನಗರ ತೋಟದ ಮನೆಯಲ್ಲಿ ಮಹತ್ವದ ಬೆಳವಣಿಗೆ; ಜೆಡಿಎಸ್ ಸಭೆಯಲ್ಲಿ ಒಮ್ಮತದ ನಿರ್ಧಾರ..!
Advertisment
  • ನವೆಂಬರ್ 13ರಂದು ಚನ್ನಪಟ್ಟಣ ಉಪ ಚುನಾವಣೆ ನಡೆಯಲಿದೆ
  • ಬೈಎಲೆಕ್ಷನ್​ನಲ್ಲಿ 3 ಕ್ಷೇತ್ರಗಳ ಪೈಕಿ 1 ಕ್ಷೇತ್ರ ಜೆಡಿಎಸ್​ಗೆ ಕೊಡಬೇಕು
  • ಸಿ.ಪಿ.ಯೋಗಿಶ್ವರ್ ಮನವೊಲಿಸುವುದೇ ಜೆಡಿಎಸ್​ಗೆ ಬಿಗ್ ಟಾಸ್ಕ್​

ರಾಮನಗರ: ಚನ್ನಪಟ್ಟಣದ ಉಪ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸುವಂತೆ ಜೆಡಿಎಸ್ ನಾಯಕರೆಲ್ಲ ಸೇರಿ ಒಮ್ಮತದ ನಿರ್ಧಾರ ಮಾಡಿದ್ದಾರೆ.

Advertisment

ರಾಮನಗರದ ತೋಟದ ಮನೆಯಲ್ಲಿ ನಡೆದ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿರನ್ನ ಅಭ್ಯರ್ಥಿ ಮಾಡಲು ಜೆಡಿಎಸ್ ನಾಯಕರೆಲ್ಲ ಸೇರಿ ನಿರ್ಧಾರ ಮಾಡಿದ್ದಾರೆ. ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿ ಆಗಿರುವ ಸಿ.ಪಿ.ಯೋಗಿಶ್ವರ್ ಅವರನ್ನು ಮನವೊಲಿಸಿ ಕ್ಷೇತ್ರ ಉಳಿಸಿಕೊಳ್ಳಬೇಕು. ಇದು ಅಲ್ಲದೇ ಬಿಜೆಪಿ ನಾಯಕರ ಜೊತೆ ಚರ್ಚೆ ಮಾಡಿ ಅಂತಿಮಗೊಳಿಸುವಂತೆ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಅವರಿಗೆ ಮುಖಂಡರೆಲ್ಲ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಷಡ್ಯಂತ್ರ ಮಾಡಿದವರ ಹೆಸರು ಜೈಲಿನ ಗೋಡೆ ಮೇಲೆ ಬರೆದು ಬಂದಿದ್ದೀನಿ.. ಬಿ ನಾಗೇಂದ್ರ ಕಣ್ಣೀರು

publive-image

ಬೈಎಲೆಕ್ಷನ್ ಸಂಬಂಧ ಅಕ್ಟೋಬರ್ 19 ರಂದು ಬಿಜೆಪಿ ನಾಯಕರ ಜೊತೆ ಹೆಚ್​.ಡಿ ಕುಮಾರಸ್ವಾಮಿ ಚರ್ಚೆ ನಡೆಸಲಿದ್ದಾರೆ. ಉಪ ಚುನಾವಣೆಯಲ್ಲಿ 3 ಕ್ಷೇತ್ರಗಳ ಪೈಕಿ 2 ಕ್ಷೇತ್ರ ಬಿಜೆಪಿಗೆ ಬಿಟ್ಟುಕೊಟ್ಟು 1 ಕ್ಷೇತ್ರ ಜೆಡಿಎಸ್​ಗೆ ಉಳಿಸಿಕೊಳ್ಳುವ ಬಗ್ಗೆ ಚರ್ಚೆ ಮಾಡುತ್ತಾರೆ. ಈ ಬಗ್ಗೆ ಚರ್ಚೆಯಲ್ಲಿ ಹೆಚ್​.ಡಿ ಕುಮಾರಸ್ವಾಮಿ ನಾಯಕರಿಗೆ ಮನವರಿಕೆ ಮಾಡುತ್ತಾರೆ.

Advertisment

ಒಂದು ವೇಳೆ ನಿಖಿಲ್ ಎಲೆಕ್ಷನ್​ಗೆ ಸ್ಪರ್ಧೆ ಮಾಡದಿದ್ದರೆ ಹೆಚ್.ಡಿ ಕುಮಾರಸ್ವಾಮಿ ಕುಟುಂಬದಿಂದ ಯಾರನ್ನಾದರೂ ಸ್ಪರ್ಧೆಗೆ ಇಳಿಸಬೇಕು. ನಿಖಿಲ್ ಅಥವಾ ಅನಿತಾ ಕುಮಾರಸ್ವಾಮಿ ಅವರನ್ನ ಕ್ಷೇತ್ರದ ಅಭ್ಯರ್ಥಿ ಮಾಡುವಂತೆ ಚನ್ನಪಟ್ಟಣದ ಮುಖಂಡರು ಒತ್ತಡ ತಂದಿದ್ದಾರೆ. ಇದರಲ್ಲಿ ಮುಖ್ಯವಾಗಿ ಸಿ.ಪಿ ಯೋಗೇಶ್ವರ್ ಅವರ ಮನವೊಲಿಸುವುದು ಮುಖ್ಯವಾದ ಟಾಸ್ಕ್ ಆಗಿದೆ. ಇದನ್ನು ಹೆಚ್​​.ಡಿ ಕುಮಾರಸ್ವಾಮಿ ಒಪ್ಪಿಸಲಾಗಿದೆ. ಉಪಚುನಾವಣೆಯ ಸಾಧಕ ಬಾಧಕ ಕುರಿತು ಸಿಪಿವೈಗೆ ಮನವರಿಕೆ ಮಾಡುವಂತೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment