ಸ್ನೇಹಿತನಿಂದಲೇ ಜೆಡಿಎಸ್​​ ಮುಖಂಡನ ಮುಗಿಸಲು ಯತ್ನ; ಅಸಲಿಗೆ ನಡೆದಿದ್ದೇನು?

author-image
Veena Gangani
Updated On
ಸ್ನೇಹಿತನಿಂದಲೇ ಜೆಡಿಎಸ್​​ ಮುಖಂಡನ ಮುಗಿಸಲು ಯತ್ನ; ಅಸಲಿಗೆ ನಡೆದಿದ್ದೇನು?
Advertisment
  • ಜೆಡಿಎಸ್ ಮುಖಂಡ ಅಪ್ಪುಗೌಡ ಮೇಲೆ ಮರ್ಡರ್ ಅಟ್ಯಾಕ್
  • ದೇವರಿಗೆ ಕೈ ಮುಗಿವಾಗ ಕೊಲೆಗೆ ಯತ್ನಿಸಿದ ದುಷ್ಕರ್ಮಿಗಳು
  • ಅದೃಷ್ಟವಶಾತ್​ ಪ್ರಾಣಾಪಾಯದಿಂದ ಅಪ್ಪುಗೌಡ ಪಾರಾದ್ರು!

ಮಂಡ್ಯ: ಜೆಡಿಎಸ್​ ಮುಖಂಡ ಅಪ್ಪುಗೌಡರನ್ನು ದುಷ್ಕರ್ಮಿಗಳು ಕೊಲೆ ಮಾಡಲು ಯತ್ನಿಸಿರೋ ಘಟನೆ ಜಿಲ್ಲೆಯ ಮದ್ದೂರಿನ ಆಂಜನೇಯಸ್ವಾಮಿ ದೇಗುಲದಲ್ಲಿ ನಡೆದಿದೆ. ದುಷ್ಕರ್ಮಿಗಳು ಕೊಲೆಗೆ ಯತ್ನಿಸಿರೋ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ.

publive-image

ದೇವರ ದರ್ಶನಕ್ಕೆಂದು ಬಂದಿದ್ದ ವೇಳೆ ಅಪ್ಪುಗೌಡರ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಅಲ್ಲೆ ಇದ್ದ ಪೊಲೀಸ್ ಪೇದೆಯೊಬ್ಬರು ಬೆನ್ನಟ್ಟಿದ್ದಾರೆ. ಪರಿಣಾಮ ಸ್ಥಳದಲ್ಲೇ ಲಾಂಗ್ ಬಿಟ್ಟು ಆರೋಪಿಗಳು ಎಸ್ಕೇಪ್​​ ಆಗಲು ಮುಂದಾಗಿದ್ದರು. ಸದ್ಯ ಈ ಕೇಸ್​​ ಸಂಬಂಧ ಕೊಲೆಗೆ ಯತ್ನಿಸಿದ್ದ ಆರು ಆರೋಪಿಗಳನ್ನು ಮದ್ದೂರು ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

publive-image

ಸದ್ಯ ಗಂಭೀರವಾಗಿ ಗಾಯಗೊಂಡ ಜೆಡಿಎಸ್​ ಮುಖಂಡ ಅಪ್ಪುಗೌಡ ಅವರಿಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ಅಪ್ಪುಗೌಡನ ಸ್ನೇಹಿತ, ಬಿಸಿನೆಸ್ ಪಾರ್ಟ್ನರ್ ಮಧು ಈ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ. ವ್ಯವಹಾರದಲ್ಲಿ ಮನಸ್ತಾಪ ಉಂಟಾಗಿದ್ದರಿಂದ ಗೆಳೆಯರು ದೂರಾಗಿದ್ದರು. ಅಪ್ಪುಗೌಡ ಮಧು ವಿರುದ್ಧ ಚೆಕ್ ಬೌನ್ಸ್ ಕೇಸ್ ಹಾಕಿದ್ದರು. ಹೀಗಾಗಿ ಸಿಟ್ಟಿಗೆದ್ದ ಮಧು ಅಪ್ಪುಗೌಡನ‌ ಕೊಲೆಗೆ ನಿರ್ಧಾರ ಮಾಡಿದ್ದರಂತೆ ಎಂದು ಪೊಲೀಸ್​ ತನಿಖೆ ಮೂಲಕ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment