newsfirstkannada.com

ಸೋತು ನೆಲಕಚ್ಚಿದರೂ ಇನ್ನೂ ಬುದ್ಧಿ ಬಂದಿಲ್ಲ.. ಬಿಜೆಪಿ ಶಾಸಕ ಸುನಿಲ್ ಕುಮಾರ್‌ಗೆ MLC ಟಿ.ಎ ಶರವಣ ತಿರುಗೇಟು

Share :

27-07-2023

    JDS ಜೊತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಬಿಜೆಪಿಗಿಲ್ಲ

    ಜೆಡಿಎಸ್‌ ಜೊತೆ ಮೈತ್ರಿ ಬಗ್ಗೆ ಶಾಸಕ ಸುನೀಲ್ ಕುಮಾರ್ ಆಕ್ಷೇಪ

    ಸರಣಿ ಟ್ವೀಟ್​​ ಮೂಲಕ ವಾಗ್ದಾಳಿ ನಡೆಸಿದ MLC ಟಿ.ಎ ಶರವಣ

ಬೆಂಗಳೂರು: ಬಿಜೆಪಿ ಪಕ್ಷದ ನಾಯಕರಿಗೆ ನಮ್ಮ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಟಿ.ಎ ಶರವಣ ಅವರು ಪ್ರಶ್ನಿಸಿದ್ದಾರೆ. ಸರಣಿ ಟ್ವೀಟ್​​ ಮಾಡಿರುವ ಶರವಣ ಅವರು ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಬಿಜೆಪಿಗಿಲ್ಲ. ಲೋಕಸಭೆಯಲ್ಲಿ ಕಳೆದ ಸಲದಷ್ಟೇ ಸೀಟು ಗೆಲ್ಲುತ್ತೇವೆ. ಹೆಚ್‌.ಡಿ.ಕುಮಾರಸ್ವಾಮಿಗೆ ನಾಯಕತ್ವ ನೀಡುವ ದಾರಿದ್ರ್ಯ ಬಿಜೆಪಿಗಿಲ್ಲ ಎಂದು ಬಿಜೆಪಿ ಶಾಸಕರು, ಮಾಜಿ ಸಚಿವ ಸುನೀಲ್ ಕುಮಾರ್ ಅವರು ಹೇಳಿಕೆಯೊಂದನ್ನು ನೀಡಿದ್ದರು. ಇದೀಗ ಆ ಹೇಳಿಕೆಗೆ ಟಿ.ಎ ಶರವಣ ಅವರು ಸರಣಿ ಟ್ವೀಟ್​​ ಮಾಡುವ ಮೂಲಕ ಕಿಡಿಕಾರಿದ್ದಾರೆ.

ಹೆಚ್‌.ಡಿ ಕುಮಾರಸ್ವಾಮಿ ಅವರು ಈಗಾಗಲೇ ಜನ ಮೆಚ್ಚಿದ ನಾಯಕರಾಗಿ ಮನ್ನಣೆ ಪಡೆದು, ಗೌರವಕ್ಕೆ ಪಾತ್ರರಾಗಿದ್ದಾರೆ. ಅವರೇನೂ ನನಗೆ ನಾಯಕತ್ವ ಕೊಡಿ ಎಂದು ಬಿಜೆಪಿ ಬಾಗಿಲಿಗೆ ನಿಂತಿಲ್ಲ. ಹೀಗೆ ಬೇಕಾಬಿಟ್ಟಿ ನಾಲಿಗೆ ಹರಿಬಿಟ್ಟು ಇನ್ನಷ್ಟು ಧಕ್ಕೆ ಮಾಡಿಕೊಳ್ಳುವುದು ಬಿಟ್ಟು, ಸುನೀಲ್ ಕುಮಾರ್ ಅವರು ಗೌರವದಿಂದ ನಡೆದುಕೊಳ್ಳಲಿ.

ಕುಮಾರಸ್ವಾಮಿ ನಾಯಕತ್ವದ ಬಗ್ಗೆ ಮಾತಾಡಲು ಇವರು ಯಾರು? ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಶರಣಾದ ಬಿಜೆಪಿಯಲ್ಲಿ ನಾಯಕರು ಯಾರಿದ್ದಾರೆ? ಇವರ ಯೋಗ್ಯತೆಗೆ ಸಮರ್ಥ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಬಜೆಟ್ ಅಧಿವೇಶನ, ರಾಜ್ಯಪಾಲರ ಭಾಷಣ ಪ್ರತಿಪಕ್ಷ ನಾಯಕರೇ ಇಲ್ಲದೆ ನಡೆದು, ಸಂಸದೀಯ ಇತಿಹಾಸದಲ್ಲೇ ಕೆಟ್ಟ ಪರಂಪರೆಗೆ ನಾಂದಿ ಹಾಡಿದ ಪಕ್ಷ ಬಿಜೆಪಿ. ಇಂಥ ಪಕ್ಷದ ನಾಯಕರಿಗೆ ನಮ್ಮ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ? ಇನ್ನು ಜೆಡಿಎಸ್ ಅನಿವಾರ್ಯ ಅಲ್ಲ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ. ಒಂದು ಮಾತಂತೂ ಸತ್ಯ. ಯಾರಿಗೂ ಯಾರು ಅನಿವಾರ್ಯ ಅಲ್ಲ. ತಮ್ಮ ಇತಿಮಿತಿ ಅರಿತು ನಡೆದರೆ, ವರ್ತಿಸಿದರೆ ಬಿಜೆಪಿಗೆ ಒಳಿತು. ಸೋತು ನೆಲಕಚ್ಚಿದರೂ ಸುನೀಲ್ ಕುಮಾರ್​ರಂತ ಬಿಜೆಪಿ ನಾಯಕರಿಗೆ ಇನ್ನೂ ಬುದ್ದಿ ಬಂದಿಲ್ಲ ಎನ್ನುವುದೇ ವಿಷಾದಕರ ಎಂದು ವಾಗ್ವಾಳಿ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೋತು ನೆಲಕಚ್ಚಿದರೂ ಇನ್ನೂ ಬುದ್ಧಿ ಬಂದಿಲ್ಲ.. ಬಿಜೆಪಿ ಶಾಸಕ ಸುನಿಲ್ ಕುಮಾರ್‌ಗೆ MLC ಟಿ.ಎ ಶರವಣ ತಿರುಗೇಟು

https://newsfirstlive.com/wp-content/uploads/2023/07/sharavana-1-1.jpg

Load More