newsfirstkannada.com

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣದಲ್ಲಿ ಬಿಡಿಎ ವಿಫಲ; ಸದನದಲ್ಲಿ JDS ಎಂಎಲ್‌ಸಿ ಟಿ.ಎ ಶರವಣ ಬೇಸರ

Share :

Published July 12, 2023 at 8:46pm

    ಕೆಂಪೇಗೌಡ ಬಡಾವಣೆ ನಿರ್ಮಾಣವಾಗಿ 7 ವರ್ಷ ಕಳೆದಿದೆ

    ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಮುಗಿದಿಲ್ಲ

    ಮನೆ ನಿರ್ಮಾಣಕ್ಕೆ ಸಾಲ ಪಡೆದವರಿಗೆ ಸಾಕಷ್ಟು ತೊಂದರೆ

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣವಾಗಿ 7 ವರ್ಷಗಳೇ ಕಳೆದಿದೆ. ಆದರೆ ಸಮಗ್ರ ಅಭಿವೃದ್ಧಿಯನ್ನು ಕಂಡಿಲ್ಲ ಎಂದು ವಿಧಾನಪರಿಷತ್‌ನಲ್ಲಿ ಜೆಡಿಎಸ್ ಎಂಎಲ್‌ಸಿ ಟಿ.ಎ ಶರವಣ ಅವರು ಪ್ರಶ್ನಿಸಿದ್ದಾರೆ. ಸದನದ ಶೂನ್ಯ ವೇಳೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಶರವಣ ಅವರು ಈ ಪ್ರಕರಣದ ಬಗ್ಗೆ RERAದಲ್ಲಿ ಕೇಸು ಕೂಡ ದಾಖಲಾಗಿದೆ. 2021-22ರ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ತಿಳಿಸಿದ್ದರು. ಆದರೆ ಅದನ್ನು ಪೂರ್ಣಗೊಳಿಸುವಲ್ಲಿ ಬಿಡಿಎ ವಿಫಲವಾಗಿದೆ ಎಂದರು.

ನಿವೇಶನ ಪಡೆದ ಜನರು ಬ್ಯಾಂಕ್‌ನಿಂದ ಮನೆ ನಿರ್ಮಾಣಕ್ಕೆ ಸಾಲ ಪಡೆದು ವಾಣಿಜ್ಯ ಬಡ್ಡಿ ದರ, ಗೃಹಸಾಲ ಬಡ್ಡಿ ದರದಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬಡಾವಣೆಯ ವಿವಿಧೆಡೆಯಲ್ಲಿ ನಿವೇಶನ ಅಭಿವೃದ್ಧಿ, ರಸ್ತೆ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕೆಂದು ಸಚಿವರನ್ನು ಎಂಎಲ್‌ಸಿ ಶರವಣ ಅವರು ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣದಲ್ಲಿ ಬಿಡಿಎ ವಿಫಲ; ಸದನದಲ್ಲಿ JDS ಎಂಎಲ್‌ಸಿ ಟಿ.ಎ ಶರವಣ ಬೇಸರ

https://newsfirstlive.com/wp-content/uploads/2023/07/JDS-MLC-TA-Sharavana.jpg

Load More