newsfirstkannada.com

ನಿಖಿಲ್​​ಗೆ ಮುತ್ತಿಗೆ; ಮಂಡ್ಯದಿಂದ ಹೆಚ್​​​ಡಿಕೆ ಸ್ಪರ್ಧೆಗೆ ಜೆಡಿಎಸ್​ ಕಾರ್ಯಕರ್ತರ ವಿರೋಧ!

Share :

Published March 22, 2024 at 7:00pm

  2024ರ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿ

  ಮಂಡ್ಯದಿಂದ ಮಾಜಿ ಸಿಎಂ ಕುಮಾರಸ್ವಾಮಿ ಕಣಕ್ಕೆ!

  ಜೆಡಿಎಸ್​​ ಕಾರ್ಯಕರ್ತರಿಂದ ಹೆಚ್​​​ಡಿಕೆ ಸ್ಪರ್ಧೆಗೆ ವಿರೋಧ

ರಾಮನಗರ: 2024ರ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ಸನ್ನು ಸೋಲಿಸಲು ಬಿಜೆಪಿ, ಜೆಡಿಎಸ್​ ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿವೆ. ಜೆಡಿಎಸ್​ಗೆ ಬಿಜೆಪಿ ಮಂಡ್ಯ, ಹಾಸನ, ಕೋಲಾರ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ ಎಂದು ವರದಿಯಾಗಿದೆ. ಈಗ ಸಂಸದೆ ಸುಮಲತಾ ಅವರನ್ನು ಸೋಲಿಸಲು ಮಂಡ್ಯದಿಂದ ಖುದ್ದು ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಅವರೇ ಅಖಾಡಕ್ಕಿಳಿಯಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.

ಹೌದು, ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದ್ದು, ಚನ್ನಪಟ್ಟಣದ ಜೆಡಿಎಸ್​ ಬೆಂಬಲಿಗರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಚನ್ನಪಟ್ಟಣದ ಖಾಸಗಿ ರೆಸಾರ್ಟ್​​ ಒಂದರಲ್ಲಿ ನಡೆದ ಜೆಡಿಎಸ್​ ಕಾರ್ಯಕರ್ತರ ಸಭೆಯಲ್ಲಿ ವಿರೋಧ ವ್ಯಕ್ತವಾಗಿದೆ.

ಯಾವುದೇ ಕಾರಣಕ್ಕೂ ಕುಮಾರಣ್ಣ ಚನ್ನಪಟ್ಟಣ ಬಿಟ್ಟು ಹೋಗಬಾರದು ಎಂದು ನಿಖಿಲ್​​ಗೆ ಮುತ್ತಿಗೆ ಹಾಕಿದ್ದಾರೆ. ಅಷ್ಟೇ ಅಲ್ಲದೇ ನೀವೇ ಮಂಡ್ಯದಿಂದ ಸ್ಪರ್ಧಿಸಿ ನಾವು ಕ್ಯಾನ್ವಸ್​​ ಮಾಡಿ ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಈ ವೇಳೆ ಕಾರ್ಯಕರ್ತರ ಮಾತಿಗೆ ನಿಖಿಲ್​ ತಲೆದೂಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಖಿಲ್​​ಗೆ ಮುತ್ತಿಗೆ; ಮಂಡ್ಯದಿಂದ ಹೆಚ್​​​ಡಿಕೆ ಸ್ಪರ್ಧೆಗೆ ಜೆಡಿಎಸ್​ ಕಾರ್ಯಕರ್ತರ ವಿರೋಧ!

https://newsfirstlive.com/wp-content/uploads/2024/03/Nikhil_123.jpg

Load More